ಶಿವಮೊಗ್ಗ: ಜಿಲ್ಲೆಯಲ್ಲಿ ವಿಚಾರಣಾಧೀನ ಓರ್ವ ಖೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಪತ್ನಿ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಂತ ಖೈದಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿನ ಶರಾವತಿ ವಾರ್ಡ್ನ 42ನೇ ರೂಮ್ನಲ್ಲಿ ವಿಚಾರಣಾಧೀನ ಕೈದಿ ಬಸವರಾಜ್ (38) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಿವಾಸಿಯಾಗಿದ್ದ ಬಸವರಾಜ್ ಬಳ್ಳಾರಿ ಗಣಿಯಲ್ಲಿ ಲಾರಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಜೂನ್.11ರಂದು ತನ್ನ ಪತ್ನಿ ಮಂಜುಳಾ ಕೊಲೆ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜೂ.13ರಂದು ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ವಿಚಾರಣಾಧೀನ ಖೈದಿಯಾಗಿದ್ದಂತ ಬಸವರಾಜ್ ತನ್ನ ಸೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗ: ಸಾಗರದ ಜಂಬಗಾರುವಿನಲ್ಲಿ ಯಶಸ್ವಿಯಾಗಿ ನಡೆದ ಪೋಕ್ಸೋ, ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ
ಆ.15ರಂದು ರಾಜ್ಯದ ಗ್ರಾಮ ಪಂಚಾಯ್ತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗಾಗಿ ಸ್ವಾತಂತ್ರ್ಯ ದಿನ, ವಿಜ್ಞಾನ ಚಟುವಟಿಕೆ