ಮಂಡ್ಯ: ಜಿಲ್ಲೆಯಲ್ಲಿ ತಾವರೆ ಹೂವನ್ನು ಕೊಯ್ಯಲು ಕೆರೆಗೆ ಇಳಿದಿದ್ದಂತ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. ಆತ ನೀರಲ್ಲಿ ಮುಳುಗಿ ಸಾವನ್ನಪ್ಪಿರುವಂತ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕಹೊಸಗಾವಿ ಗ್ರಾಮದ ಬಳಿಯಲ್ಲಿನ ಕೆರೆಯಲ್ಲಿ ತಾವರೆ ಹೂವನ್ನು ಕೊಯ್ಯಲು ತುಮಕೂರು ಮೂಲದ ಶಶಿಕುಮಾರ್ ಎಂಬಾತ ಇಳಿದಿದ್ದನು. ಆದರೇ ಹೀಗೆ ಕೆರೆಯಲ್ಲಿ ಇಳಿದಿದ್ದಂತ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಕಾರಣ ಮೂರು ದಿನಗಳ ಹಿಂದೆ ಕೆರೆಯ ಬಳಿಯಲ್ಲಿ ನಿಲ್ಲಿಸಿರುವಂತ ಬೈಕ್ ಅಲ್ಲಿಯೇ ಇದೆ.
ಈ ಹಿನ್ನಲೆಯಲ್ಲಿ ಅನುಮಾನಗೊಂಡಂತ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೊಪ್ಪ ಪೊಲೀಸಲು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತ ಶಂಕೆ ವ್ಯಕ್ತವಾಗಿರುವ ಶಶಿ ಕುಮಾರ್ ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
ಬೆಂಗಳೂರು ರೈಲ್ವೆ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ವ್ಯಾಪಕ ತಪಾಸಣೆ
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು