ವರದಿ: ವಸಂತ ಬಿ ಈಶ್ವರಗೆರೆ

ರಾಯಚೂರು: ಆ ವಸತಿ ಯೋಜನೆ, ಈ ವಸತಿ ಯೋಜನೆ ಅಂತ ರಾಜ್ಯ, ಕೇಂದ್ರ ಸರ್ಕಾರದಿಂದ ವರ್ಷ ವರ್ಷವೂ ಮನೆ ಮಂಜೂರು ಆಗ್ತಿದ್ದಾವೆ. ತಲುಪ ಬೇಕಾದವರಿಗೆ ತಲುಪುತ್ತಿಲ್ಲ ಅನ್ನುವುದಕ್ಕೆ ರಾಜ್ಯದ ಈ ಕರುಣಾಜನಕ ಕಥೆಯೇ ಸಾಕ್ಷಿ. ರಾಯಚೂರಿನ ಒಂದಿಡೀ ಕುಟುಂಬ ತಗಡಿನ ಶೆಡ್ ನಲ್ಲಿಯೇ ಕಳೆದ 10 ವರ್ಷಗಳಿಂದ ಜೀವನ ನಡೆಸುತ್ತಿದೆ ಎಂದ್ರೇ ನೀವೇ ಊಹಿಸಿಕೊಳ್ಳಿ. ಆ ಮರುಕ ಪಡುವ ಕತೆ ಮುಂದೆ ಓದಿ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೊಳಬಾಳ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ತಗಡಿನ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿರೋ ಕುಟುಂಬಲೇ ಯಂಕಪ್ಪ ಉಪ್ಪಾ ಹಾಗೂ ಸುಜಾತ ಎಂಬುವರಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳೊಂದಿಗೆ ಬದುಕು ನಡೆಸುತ್ತಿರುವಂತ ಈ ಕುಟುಂಬಕ್ಕೆ ಕೂಲಿಯೇ ಆಸಲೆ. ಕೂಲಿಯಿಂದ ಬಂದಂತ ಹಣದಿಂದಲೇ ಜೀವನ ನಿರ್ವಹಣೆ ಮಾಡುತ್ತಿದೆ.

ಕೊಳಬಾಳು ಗ್ರಾಮದಲ್ಲೇ ಗ್ರಾಮ ಪಂಚಾಯ್ತಿ ಇದೆ. ನಮಗೆ ಮನೆ ಕೊಡಿ, ತಗಡಿನಲ್ಲೇ ಎಷ್ಟು ದಿನ ಅಂತ ವಾಸ ಮಾಡೋದು. ಮಕ್ಕಳು ಚಿಕ್ಕವರಿದ್ದಾರೆ. ವಿಷ ಜಂತುಗಳ ಹಾವಳಿಯಿದೆ. ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಂಡು ನಾವು ಇತರರಂತೆ ಬದುಕುತ್ತೇವೆ ಅಂದ್ರೆ ಈವರೆಗೆ ಯಾರಿಗೂ ಕಿವಿಕೇಳಿಲ್ಲವೋ ಏನೋ ಎನ್ನುವಂತಿದ್ದಾರೆ.

ಕೊಳಬಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರನ್ನು ವಸತಿ ಯೋಜನೆಯ ಅಡಿಯಲ್ಲಿ ಮನೆ ಕೊಡಿ ಅಂತ ಹಲವು ಬಾರಿ ಕೇಳಿದ್ರು, ಈವರೆಗೆ ಮನೆ ಮಂಜೂರು ಮಾಡಿಲ್ಲ. ದಿನ ಬೆಳಗಾದ್ರೇ ಸಾಕು ಕಷ್ಟ ಪಟ್ಟು ಸಾಲ ಸೂಲ ಮಾಡಿ ನಿರ್ಮಿಸಿದಂತ ತಗಡಿನ ಶೆಡ್ಡಿನಲ್ಲಿಯೇ ಯಂಕಪ್ಪ ಉಪ್ಪಾರ ಕುಟುಂಬ ಜೀವನ ನಡೆಸುತ್ತಿದೆ.

ಈ ಬಗ್ಗೆ ನಿಮ್ಮ ಕನ್ನಡ ನ್ಯೂಸ್ ನೌ ಯಂಕಪ್ಪ ಉಪ್ಪಾರ ಮಾತನಾಡಿಸಿದಾಗ ಪಿಡಿಓ ಮನೆ ನೀಡುವಂತೆ ಕೇಳಿದ್ದೇನೆ. ಗ್ರಾಮ ಪಂಚಾಯ್ತಿಯ ಅಧ್ಯಕ್ಷರನ್ನು, ಸದಸ್ಯರನ್ನು ಕೇಳಲಾಗಿದೆ. ಈಗ ಶೆಡ್ ಕಟ್ಟಿಕೊಂಡಿದ್ದೀಯ. ಅದರಲ್ಲೇ ಜೀವನ ಮಾಡಿ. ಮನೆ ಬಂದಾಗ ಮಂಜೂರು ಮಾಡಲಾಗುತ್ತದೆ ಅಂತ ಹೇಳುತ್ತಿರೋದಾಗಿ ತಿಳಿಸಿದ್ದಾರೆ.

ಅಲ್ಲ ಸ್ವಾಮಿ ತಗಡಿನ ಶೆಡ್ ನಲ್ಲಿ ಆರು ಜನರ ಇಡೀ ಕುಟುಂಬವೇ ವಾಸಿಸುತ್ತಿದೆ. ಅವರು ಕಟ್ಟಿಕೊಂಡಿರೋ ತಗಡಿನ ಮನೆಯಲ್ಲೇ ವಾಸ ಮಾಡಿ. ಬಂದ್ರೆ ಕೊಡ್ತೀವಿ. ಇಲ್ಲ ಅಂದ್ರೆ ಇಲ್ಲ ಅನ್ನೋ ಥರ ಮಾತನಾಡಿದ್ರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಕೂಡಲೇ ಯಾವುದಾದರೂ ಒಂದು ವಸತಿಯೋಜನೆಯಡಿ ಯಂಕಪ್ಪ ಉಪ್ಪಾರ ಕುಟುಂಬಕ್ಕೆ ಮನೆ ಮಂಜೂರು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಮ್ಮ ಮನವಿ, ಆಗ್ರಹ ಕೂಡ ಆಗಿದೆ.

ನೀವು ಈ ಕುಟುಂಬಕ್ಕೆ ಸಹಾಯ ಮಾಡೋದಕ್ಕೆ ಇಚ್ಛಿಸಿದ್ರೇ ಬ್ಯಾಂಕ್ ಖಾತೆಯ ಸಂಖ್ಯೆ :36538885327, IFSC ಕೋಡ್ : SBIN0020207. ಸುಜಾತಾ ಗಂಡ ಯಂಕಪ್ಪ ಉಪ್ಪಾರ, ಸಿಂದನೂರ ಶಾಖೆಗೆ ಕೈಲಾದ ಸಹಾಯ ಮಾಡಬಹುದಾಗಿದೆ. ಯಂಕಪ್ಪ ಉಪ್ಪಾರ ಜೊತೆಗೆ ಮಾತನಾಡೋದಾದ್ರೇ 9513889251 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.

‘ನಮ್ಮ ಮೆಟ್ರೋ’ದಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ಅಪರಿಚಿತ ವ್ಯಕ್ತಿ’ ಓಡಾಟ, ಕೆಲಕಾಲ ‘ಸಂಚಾರ ಸ್ಥಗಿತ’

ಬೆಂಗಳೂರಿನ ‘KSRTC ಕೇಂದ್ರ ಕಚೇರಿ’ಯಲ್ಲಿ ‘ಅಂತರರಾಷ್ಟ್ರೀಯ ಮಹಿಳಾ ದಿನ’ ಆಚರಣೆ

Share.
Exit mobile version