ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್

ಬೆಂಗಳೂರು:  ಕನ್ನಡದ ಕಣ್ಮಣಿ ಡಾ.ರಾಜ್‌ಕುಮಾರ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಹಸಿರಾಗಿ, ಜನರ ಉಸಿರಾಗಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಡಾ.ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಕಮ್ಮನಹಳ್ಳಿಯಲ್ಲಿ ನವೀಕರಣಗೊಂಡ ಡಾ.ರಾಜ್‌ಕುಮಾರ್ ಉದ್ಯಾನವನ್ನು ಉದ್ಘಾಟಿಸಿ, ನೂತನವಾಗಿ ನಿರ್ಮಿಸಿರುವ ಬಯಲು ರಂಗಮಂದಿರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಚಿವರು ಮಾತನಾಡಿದರು. “ನಮ್ಮ ಕ್ಷೇತ್ರದಲ್ಲಿ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಉದ್ಯಾನ ನಿರ್ಮಿಸಿ, ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಈಗ ಹೊಸದಾಗಿ ನಿರ್ಮಿಸಿರುವ ಬಯಲು ರಂಗಮಂದಿರವು ಸಾಮುದಾಯದ ವಿವಿಧ ಕಾರ್ಯಕ್ರಮಗಳನ್ನು ನಡೆಸಲು … Continue reading ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್