Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM

“ಭಾರತ ವಿಶ್ವ ನಾಯಕನಾಗಲಿದೆ, ಸಮಾಜವನ್ನ ಕಾನೂನಿನಿಂದಲ್ಲ, ಕರುಣೆಯಿಂದ ನಡೆಸಲಾಗ್ತಿದೆ” ; ಮೋಹನ್ ಭಾಗವತ್

08/11/2025 9:45 PM

Good News ; ಈಗ ನೀವು ‘WhatsApp’ನಿಂದ್ಲೇ ಇತರ ಮೆಸೇಜಿಂಗ್ ಆಪ್’ಗಳಿಗೆ ಫೋಟೋ, ವೀಡಿಯೋ, ಮೆಸೇಜ್ ಕಳುಹಿಸ್ಬೋದು!

08/11/2025 9:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಏ.16ರ ನಾಳೆ ಕಲಬುರ್ಗಿಯಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ | Job Fair
KARNATAKA

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಏ.16ರ ನಾಳೆ ಕಲಬುರ್ಗಿಯಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ | Job Fair

By kannadanewsnow0915/04/2025 4:57 PM

ಕಲಬುರಗಿ : ಕಲಬುರಗಿಯಲ್ಲಿ ಕೆ.ಸಿ.ಟಿ. ಇಂಜಿನೀಯರಿಂಗ್ ಕಾಲೇಜಿನಲ್ಲಿ ಇದೇ ಏಪ್ರಿಲ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಕಲಬುರಗಿ ವಿಭಾಗ ಮಟ್ಟದ ಉದ್ಯೋಗ ಮೇಳ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಇದಕ್ಕೆ ಚಾಲನೆ ನೀಡಲದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಳೆದ ಬಾರಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಾಗ ಸುಮಾರು 45 ಸಾವಿರ ಜನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ನಿರುದ್ಯೋಗ ಸಮಸ್ಯೆ ಚೆನ್ನಾಗಿ ಅರಿತಿರುವ ರಾಜ್ಯ ಸರ್ಕಾರ ವಿಭಾಗವಾರು ಉದ್ಯೋಗ ಮೇಳ ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆಯಂತೆ ಇದೀಗ ಕಲಬುರಗಿಯಲ್ಲಿ ಮೇಳ ಆಯೋಜಿಸಿದೆ. ಇದಾದ ನಂತರ ಹುಬ್ಬಳ್ಳಿ ಅಥವಾ ಬೆಳಗಾವಿ ಮತ್ತು ಮೈಸೂರಿನಲ್ಲಿ ಇದೇ ರೀತಿಯ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದರು.

ಕಲಬುರಗಿ ಉದ್ಯೋಗ ಮೇಳದಳ್ಳಿ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗುವರಿಗೆ ಸ್ಥಳದಲ್ಲಿಯೇ ಆಫರ್ ಲೆಟರ್ ನೀಡಲಾಗುತ್ತದೆ. ಇನ್ನು ಆಯ್ಕೆಯಾಗದವರ ಅಭ್ಯರ್ಥಿಗಳ ಪಟ್ಟಿ ಮಾಡಿ ಅವರಿಗೆ ಅಗತ್ಯ ಕೌಶಲ್ಯ ನೀಡುವುದರ ಜೊತೆಗೆ ಮುಂದಿನ ದಿನದಲ್ಲಿ ಇವರನ್ನು ಪ್ಲೇಸ್ ಮೆಂಟ್ ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಕಂಪನಿಗಳೊಂದಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ಸಮನ್ವಯ ಸಾಧಿಸಲಿದೆ ಎಂದರು.

ಬಸ್ ವ್ಯವಸ್ಥೆ,40 ನೋಂದಣಿ ಕೌಂಟರ್:

ಕಲಬುರಗಿ ಉದ್ಯೋಗ ಮೇಳಕ್ಕೆ ವಿಭಾಗದ ವಿವಿಧ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಆಯಾ ಜಿಲ್ಲಾ, ತಾಲೂಕಾ ಕೇಂದ್ರಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳ ಇಡೀ ದಿನ ನಡೆಯಲಿದ್ದು, ಸುಮಾರು 30-40 ಕೌಂಟರ್ ಸ್ಥಾಪಿಸಲಾಗುತ್ತಿದೆ. ಕಾಲೇಜಿನ ಆವರಣದಲ್ಲಿ ಕಂಪನಿಗಳು ಸಂದರ್ಶನ ನಡೆಸಲು ಅನುಕೂಲವಾಗುವಂತೆ 70 ಕೊಠಡಿಗಳನ್ನು ಕಂಪನಿಗಳಿಗೆ ನೀಡಲಾಗುತ್ತದೆ. ಇನ್ನು ಅಭ್ಯರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.

1 ಲಕ್ಷ ಹುದ್ದೆ ಬೇಡಿಕೆಯೊಂದಿಗೆ ಕಂಪನಿಗಳು ಭಾಗಿ:

ಬೆಂಗಳೂರಿನ 180 ಸೇರಿದಂತೆ ಹೈದ್ರಾಬಾದ, ಮುಂಬೈ ಹಾಗೂ ಸ್ಥಳೀಯರು ಸೇರಿ ಇದುವರೆಗೆ ಒಟ್ಟಾರೆ ವಿವಿಧ 30 ವಲಯದ 275 ಕಂಪನಿಗಳು 1 ಲಕ್ಷಕ್ಕೂ ಹೆಚ್ಚಿನ ಹುದ್ದೆ ಬೇಡಿಕೆಯೊಂದಿಗೆ ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿವೆ. ಇದುವರೆಗೆ ಸುಮಾರು 17 ಸಾವಿರ ಅಭ್ಯರ್ಥಿಗಳು ಸಹ ನೋಂದಣಿ ಮಾಡಿದ್ದು, 25 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಯುವಕರು ಲಾಭ ಪಡೆಯಲು ಮನವಿ:

ಯುವ‌ ನಿಧಿ ಯೋಜನೆಯಡಿ ರಾಜ್ಯದಾದ್ಯಂತ 2.50 ಲಕ್ಷ ನಿರುದ್ಯೋಗಿ ಯುವ ಸಮೂಹ ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹ 1.75 ಲಕ್ಷ ಪದವಿ ಮತ್ತು ಡಿಪ್ಲೋಮಾ ಪದವೀಧರರಿಗೆ 1,500 ಮತ್ತು 3,000 ರೂ. ನಿರುದ್ಯೋಗ ಭತ್ಯೆ‌ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಯುವ ನಿಧಿ ಯೋಜನೆಯಡಿ ನೊಂದಾಯಿತ 75 ಸಾವಿರ ಜನರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮಾಹಿತಿ ನೀಡಲಾಗಿದೆ. ನೋಂದಣಿ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಆನ್ ಲೈನ್ ಮೂಲಕ https://skillconnect.kaushalkar.com ನೊಂದಾಯಿಸಿಕೊಂಡು ಮೇಳದಲ್ಲಿ ಭಾಗವಹಿಸಬಹುದಾಗಿದೆ. ಇನ್ನು ನೇರವಾಗಿ ಅಗಮಿಸುವ ಅಭ್ಯರ್ಥಿಗಳಿಗೆ ಸ್ಪಾಟ್ ರಿಜಿಸ್ಟ್ರೇಷನ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದ ಸಚಿವರು, ಕಲ್ಯಾಣ ಕರ್ನಾಟಕದ ನಿರುದ್ಯೋಗ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭ ಪಡೆಯುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಉದ್ಯೋಗ ಮೇಳದಲ್ಲಿ ಯಾವೆಲ್ಲ ಕಂಪನಿಗಳು ಭಾಗಿ?

ಕಲಬುರಗಿ ಉದ್ಯೋಗ ಮೇಳಕ್ಕೆ ಐ.ಟಿ. ಕಂಪನಿಗಳಾದ ಹೆಚ್.ಸಿ.ಎಲ್ ಟೆಕ್ ಬೀ, ಜಿ-ಟೆಕ್, ಎಕ್ಸೆಲ್ ಕಾರ್ಪ್ ಯು.ಎಸ್.ಎ., ಲೈನಸ್ ಕಾರ್ಟ್ ಐ.ಟಿ.ಸಲೂಷನ್ಸ್ ಪ್ರೈ.ಲಿ., ಮ್ಯಾಡಲ್ಯಾಬ್ಸ್ ಇನ್ಫೋಟೆಕ್ ಪ್ರೈ.ಲಿ., ಸಿಸ್ಪೈಡರ್ ಟೆಕ್ನೋಲಾಜಿಸ್, ಟೆಕ್ ಹಬೀಬ್ ಕಮ್ಯೂನಿಕೇಷನ್ ಪ್ರೈ.ಲಿ., ಎಂಕೋ ಜಿ.ಸಿ.ಸಿ., ಅಲ್ಲರ್ ಟೆಕ್ನೋಲಾಜೀಸ್ ಪ್ರೈ.ಲಿ., ವರ್ಕ್ ಕ್ಯೂಬಿಕ್ ಪ್ರೈ.ಲಿ., ಡಿಜಿಸ್ನೇರ್ ಟೆಕ್ನಾಲೋಜಿಸ್ ಪ್ರೈ.ಲಿ., ಟೆಕ್ ಬಡ್ಡಿಸ್, ಐಸನ್ ಎಕ್ಸಪೀರೆಯನ್ಸೆಸ್, ಹೈ ಐಡಿಯಲ್ಸ್ ಟೆಕ್ನೋಲಾಜಿಸ್ ಪ್ರೈ.ಲಿ., ರಿಲಾಯನ್ಸ್ ಫೌಂಡೇಷನ್, ಇನ್ಫೋಜಿಕ್ ಸಲೂಷನ್ಸ್ ಇಂಡಿಯಾ ಪ್ರೈ.ಲಿ., ಪ್ಯಾರಾಡಿಗ್ ಐ.ಟಿ. ಟೆಕ್ನೋಲಾಜಿಸ್ ಪ್ರೈ.ಲಿ., ಮಧುಪುಶ್ಪಾ ಟೆಕ್ನೋಲಾಜಿಸ್ ಪ್ರೈ.ಲಿ., ಗ್ರೇಟ್ ಇಂಡಿಯನ್ ಕ್ಯಾರಿಯರ್ ಅಕಾಡೆಮಿ ಭಾಗವಹಿಸಲಿವೆ.

ಇದಲ್ಲದೆ ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿ., ಎಲ್ & ಟಿ ಲಿ., ಅಲ್ಟ್ರಾಟೆಕ್‌ ಸಿಮೆಂಟ್ ಲಿ., ಚೆಟ್ಟಿನಾಡ್ ಸಿಮೆಂಟ್ ಕಾರ್ಪೋರೇಷನ್ ಪ್ರೈ.ಲಿ., ಓರಿಯಂಟ್ ಸಿಮೆಂಟ್, ದೊಡ್ಲಾ ಡೈರಿ ಲಿ., ಕಲಬುರಗಿ ಸಿಮೆಂಟ್ ಪ್ರೈ.ಲಿ., ಏಜಿಲ್ ಏರ್ಪೋರ್ಟ್ ಸರ್ವಿಸ್ ಪ್ರೈ.ಲಿ., ಟಾಟಾ ಎಲೆಕ್ಟ್ರಾನಿನ್ಸ್ ಸಿಸ್ಟಮ್ಸ್ ಸಲೂಷನ್ಸ್, ಎಂ.ಆರ್.ಎಫ್ ಲಿ., ಮೆಡ್ ಪ್ಲಸ್, ಅರವಿಂದ ಲಿ., ಹಿಂದುಜಾ ಗ್ಲೋಬಲ್‌ ಸಲೂಷನ್ಸ್, ಶಾಹಿ ಎಕ್ಸ್ ಪೋರ್ಟ್ ಪ್ರೈ.ಲಿ., ಜೆಪ್ಟೋ, ಜೊಯಾಲುಕ್ಕಾಸ್ ಇಂಡಿಯಾ ಪ್ರೈ.ಲಿ., ಸೆಲಿಬಿ ಏರ್ಪೋರ್ಟ್ ಸರ್ವಿಸ್ ಇಂಡಿಯಾ ಪ್ರೈ.ಲಿ., ಅಡೆಕ್ಕೋ ಇಂಡಿಯಾ, ಅಪೊಲೋ ಮೆಡ್ ಸ್ಕಿಲ್ಸ್ ಲಿ., ಹೆಚ್.ಡಿ.ಎಫ್.ಸಿ ಬ್ಯಾಂಕ್, ಡಾ.ರೆಡ್ಡಿ ಫೌಂಡೇಷನ್, ಬಯೋಕಾನ್ ಬಯೋಲಾಜಿಸ್ ಲಿ., ಡೆಲಿವರಿ ಲಿ., ಅರೆನಾ‌ ಏನಿಮೇಷನ್, ಸನ್ಸೇರಾ ಇಂಜಿನೀಯರಿಂಗ್ ಲಿ.‌ ಸೇರಿದಂತೆ‌ ಅನೇಕ ಕಂಪನಿಗಳು ಭಾಗವಹಿಸಲಿವೆ‌ ಎಂದು ಸಚಿವರು ತಿಳಿಸಿದರು.

BREAKING: ಫೆಬ್ರವರಿಯಲ್ಲಿ ಶೇ.3.61ರಷ್ಟಿದ್ದ ಭಾರತದ ಚಿಲ್ಲರೆ ಹಣದುಬ್ಬರ ಮಾರ್ಚ್‌ನಲ್ಲಿ ಶೇ.3.34ಕ್ಕೆ ಇಳಿಕೆ | Retail inflation

‘ಅಯೋಧ್ಯೆ ರಾಮ ಮಂದಿರ ಟ್ರಸ್ಟ್’ಗೆ ಬಾಂಬ್ ಬೆದರಿಕೆ ಇ-ಮೇಲ್: ಎಫ್ಐಆರ್ ದಾಖಲು | Ayodhya Ram Mandir

Share. Facebook Twitter LinkedIn WhatsApp Email

Related Posts

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM2 Mins Read

ಚಿತ್ರದುರ್ಗ: ನ.9ರಂದು KUWJ ಸಂಘದ ಚುನಾವಣೆಗೆ ಮತದಾನ, ಕಣದಲ್ಲಿ 39 ಅಭ್ಯರ್ಥಿಗಳು

08/11/2025 8:33 PM3 Mins Read

ರಾಜ್ಯದಲ್ಲಿ ವೋಟ್ ಚೋರಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ: ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ

08/11/2025 8:26 PM2 Mins Read
Recent News

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM

“ಭಾರತ ವಿಶ್ವ ನಾಯಕನಾಗಲಿದೆ, ಸಮಾಜವನ್ನ ಕಾನೂನಿನಿಂದಲ್ಲ, ಕರುಣೆಯಿಂದ ನಡೆಸಲಾಗ್ತಿದೆ” ; ಮೋಹನ್ ಭಾಗವತ್

08/11/2025 9:45 PM

Good News ; ಈಗ ನೀವು ‘WhatsApp’ನಿಂದ್ಲೇ ಇತರ ಮೆಸೇಜಿಂಗ್ ಆಪ್’ಗಳಿಗೆ ಫೋಟೋ, ವೀಡಿಯೋ, ಮೆಸೇಜ್ ಕಳುಹಿಸ್ಬೋದು!

08/11/2025 9:28 PM

ನೀವು ಪ್ರತಿದಿನ ಸೇವಿಸಬೇಕಾದ ‘ಟಾಪ್ ಕ್ಯಾನ್ಸರ್ ವಿರೋಧಿ’ ಆಹಾರಗಳಿವು | Anti-Cancer Foods

08/11/2025 9:20 PM
State News
KARNATAKA

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

By kannadanewsnow0908/11/2025 10:01 PM KARNATAKA 2 Mins Read

ಬೆಂಗಳೂರು: ಅಂದು‌ ಸಂತ ಶ್ರೇಷ್ಠ ಕನಕದಾಸರಂತೆ ಇಂದು ದೀನದಲಿತರ ಬಗ್ಗೆ ಅಪಾರ ಕಾಳಜಿ‌ ಹೊಂದಿದ್ದವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕಾಣುತ್ತಿದ್ದೇವೆ ಎಂದು…

ಚಿತ್ರದುರ್ಗ: ನ.9ರಂದು KUWJ ಸಂಘದ ಚುನಾವಣೆಗೆ ಮತದಾನ, ಕಣದಲ್ಲಿ 39 ಅಭ್ಯರ್ಥಿಗಳು

08/11/2025 8:33 PM

ರಾಜ್ಯದಲ್ಲಿ ವೋಟ್ ಚೋರಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ: ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ

08/11/2025 8:26 PM

ರೈತರಿಗೆ ಉಪಯುಕ್ತ ಮಾಹಿತಿ: ಕೃಷಿಯಲ್ಲಿ ಈ ಸಲಹೆ ಪಾಲಿಸಿ, ಅತ್ಯುತ್ತಮ ಇಳುವರಿ ಪಡೆಯಿರಿ

08/11/2025 7:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.