ದಾವಣಗೆರೆ : ವೃದ್ಧ ದಂಪತಿಯ ಕೈಕಾಲು ಕಟ್ಟಿ 8.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ಮುಸುಕುಧಾರಿ ಗ್ಯಾಂಗ್ ವೊಂದು ಪರಾರಿಯಾಗಿರುವ ಘಟನೆ ಚನ್ನಗಿರಿ ತಾಲೂಕಿನ ಕಾಕನೂರ ಗ್ರಾಮದಲ್ಲಿ ನಡೆದಿದೆ.
ಐವರು ಮುಸುಕುದಾರಿಗಳು ಗ್ರಾಮದ ಸಾವಿತ್ರಮ್ಮ (60) ಹಾಗೂ ಮಾದಪ್ಪ (62) ಎಂಬವರ ಮೇಲೆ ಹಲ್ಲೆ ಮಾಡಿ ಕೈಕಾಲು ಕಟ್ಟಿ, ಚಿನ್ನಾಭರಣ ದರೋಡೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಸದ್ಯ ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಂತೆಬೆನ್ನೂರು ಠಾಣೆಯ ಪೊಲೀಸರು ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆದಿದೆ. ದರೋಡೆ ಗ್ಯಾಂಗ್ ಬಂಧನಕ್ಕೆ ಎಸ್ಪಿನ ಉಮಾ ಪ್ರಶಾಂತ್ ತಂಡ ರಚಿಸಿದ್ದಾರೆ.