ತುಮಕೂರು: 10 ಸಾವಿರ ಹಣ ಕೊಡ್ತೀನಿ ಬಾ ಅಂತ ಪ್ರಿನ್ಸಿಪಾಲ್ ಒಬ್ಬ ವಿದ್ಯಾರ್ಥಿನಿಯನ್ನೇ ಮಂಚಕ್ಕೆ ಕರೆದ ಆರೋಪ ತುಮಕೂರಿನಲ್ಲಿ ಕೇಳಿ ಬಂದಿದೆ. ಬಂಧಿತ ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದೆ.
ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದೀಗ ಲೈಂಗಿಕ ಕಿರುಕುಳ ಹಾಗೂ ಅಟ್ರಾಸಿಟಿ ಕೇಸ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಸದ್ಯ ತುಮಕೂರು ಮಹಿಳಾ ಠಾಣೆ ಪೊಲೀಸರು ಯೋಗೇಶ್ ಎನ್ನುವವನ್ನು ಬಂಧಿಸಿದ್ದಾರೆ.