ಮಂಡ್ಯ: ಜಿಲ್ಲೆಯಲ್ಲಿ ನಾಡಬಾಂಬ್ ಸ್ಫೋಟ ಹಸು ಬಾಯಿ ಛಿದ್ರ ಛಿದ್ರ,ಹಸುವಿನ ಸ್ಥಿತಿ ಗಂಭೀರವಾಗಿದೆ. ಮಂಡ್ಯದ ಹರಳಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಸಮೀಪದ ಹರಳಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೆ ಎಂ ದೊಡ್ಡಿ ಸಮೀಪದ ಹರಳಹಳ್ಳಿ ಗ್ರಾಮದ ರೈತ ಮಹಿಳೆ ರಾಜಮ್ಮಣಿ ಎಂಬುವವರಿಗೆ ಸೇರಿದ ಹಸು ಇದಾಗಿದೆ. ತೆಕ್ಕಲು ಜಮೀನೊಂದರಲ್ಲಿ ಹುಲ್ಲು ಮೇಯುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.
ಇಂದು ಸುಮಾರು 12.30 ವೇಳೆಯಲ್ಲಿ ನಾಡ ಬಾಂಬ್ ಸ್ಪೋಟಗೊಂಡು ಹಸುವಿನ ಬಾಯಿ ಸಂಪೂರ್ಣ ಛಿದ್ರಗೊಂಡಿದೆ. ಹಸುವಿನ ಸ್ಥಿತಿ ಗಂಭೀರವಾಗಿದೆ. ಕಾಡುಪ್ರಾಣಿಗಳ ಭೇಟಿಗಾಗಿ ಅಕ್ರಮವಾಗಿ ಇಟ್ಟಿದ್ದ ನಾಡಬಾಂಬ್ ಇದಾಗಿದೆ ಎನ್ನಲಾಗಿದೆ.
ಹಸುವನಿಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಬಡ ರೈತ ಮಹಿಳೆ ಆಗಿದ್ದಾರೆ. ಹಸು ಸ್ಥಿತಿ ಕಂಡು ರೈತ ಮಹಿಳೆಯ ಗೋಳಾಡುತ್ತಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾಮೀಣ ಭಾಗದ ಜನರ ಸಾರಿಗೆ ಸಮಸ್ಯೆ ಬಗೆಹರಿಸಿ: ಸಾಗರದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಒತ್ತಾಯ








