ಮಹಾರಾಷ್ಟ್ರ: ರಾಜ್ಯದಲ್ಲಿ ನಿರಂತವಾಗಿ ಮಳೆಯಾಗುತ್ತಿದೆ. ಈ ಮಳೆಯ ಪರಿಣಾಮವಾಗಿ ಇಂದ್ರಯಾಣಿ ನದಿಗೆ ನಿರ್ಮಿಸಲಾದ ಸೇತುವೆ ಕುಸಿತಗೊಂಡಿದೆ. ಈ ಕಾರಣದಿಂದಾಗಿ ಆರು ಮಂದಿ ಸಾವನ್ನಪ್ಪಿದ್ದರೇ, 25 ರಿಂದ 30 ಪ್ರವಾಸಿಗರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ.
ಭಾನುವಾರದ ಇಂದು ಭಾರೀ ಸಂಖ್ಯೆಯ ಪ್ರವಾಸಿಗರು ಇಂದ್ರಯಾಣಿ ಸೇತುವೆ ಬಳಿ ಜಮಾಯಿಸಿದ್ದರು. ಈ ವೇಳೆ ಸೇತುವೆ ಕುಸಿತಗೊಂಡು ಭಾರಿ ದುರಂತ ಸಂಭವಿಸಿದೆ. ಇಂದುವರೆಗೆ 6 ಪ್ರವಾಸಿಗರ ಮೃತದೇಹ ಪತ್ತೆಯಾಗಿದ್ದು, ಉಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
Pune, Maharashtra: A bridge over the Indrayani River collapsed in Kundamala, Maval taluka of Pune, causing 25–30 tourists to fall into the river. Heavy rains had raised water levels. Local police, fire brigade, and NDRF teams rushed to the site and launched a rescue operation pic.twitter.com/W8DOYAGMQS
— IANS (@ians_india) June 15, 2025
ಮಹಾರಾಷ್ಟ್ರದ ಪುಣೆಯ ಮಾವಲ್ ತಾಲ್ಲೂಕಿನ ಕುಂದಮಾಲದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು 25–30 ಪ್ರವಾಸಿಗರು ನದಿಗೆ ಬಿದ್ದ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏರಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.
BREAKING: ನಾಳೆ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ | Former Gujarat CM Vijay Rupani