ಚಿಕ್ಕಮಗಳೂರು: ರಾಜ್ಯದಲ್ಲೇ ಹೃದಯ ವಿದ್ರಾವಕ ಘಟನೆ ಎನ್ನುವಂತದ್ದು ಚಿಕ್ಕಮಗಳೂರಲ್ಲಿ ನಡೆದಿದೆ. ಹಣದ ಆಸೆಗಾಗಿ ತನ್ನ ಅಪ್ರಾಪ್ತ ಪುತ್ರಿಯನ್ನೇ ಪಾಪಿ ತಂದೆಯೊಬ್ಬ ವೇಶ್ಯಾವಾಟಿಕೆಗೆ ತಳ್ಳಿದಂತ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲ್ಲೂಕಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ನಾಗವಂಗಲ ಗ್ರಾಮದಲ್ಲಿ 16 ವರ್ಷದ ಅಪ್ರಾಪ್ತೆಯ ತಾಯಿ 6 ವರ್ಷಗಳ ಹಿಂದೆ ತೀರಿಕೊಂಡ ಬಳಿಕ ಅಜ್ಜಿ ಹಾಗೂ ತಂದೆಯ ಜೊತೆಗೆ ವಾಸವಿದ್ದಳು. ತಂದೆ ಗಿರೀಶ್, ಬ್ರೋಕರ್ ನಾರಾಯಣಸ್ವಾಮಿ ಮೂಲಕ ಮಂಗಳೂರಿನ ಭರತ್ ಶೆಟ್ಟಿ ಮನೆಗೆ ಹೋಗೋಣ ಎಂಬುದಾಗಿ ಅಪ್ರಾಪ್ತೆಯನ್ನು ಕರೆದೊಯ್ದಿದ್ದಾರೆ. ಅಲ್ಲೇ ತಂದೆ ಗಿರೀಶ್ ಎದುರಲ್ಲೇ ಅಪ್ರಾಪ್ತ ಪುತ್ರಿಯ ಮೇಲೆ ಭರತ್ ಶೆಟ್ಟಿ ಅತ್ಯಾಚಾರ ಎಸಗಿದ್ದಾನೆ.
ಇದಾದ ಒಂದು ವಾರದ ಬಳಿಕ ಅಪ್ರಾಪ್ತೆ ಮುಟ್ಟಾಗಿ ನೋವಿನಿಂದ ನರಳುತ್ತಿದ್ದರೂ ಬಿಡದೇ 8 ರಿಂದ 10 ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ತೀವ್ರ ವಿರೋಧ ವ್ಯಕ್ತ ಪಡಿಸಿದಂತ ಸಂದರ್ಭದಲ್ಲಿ ಕೀಚಕರು ನಿಮ್ಮ ಅಪ್ಪ ಗಿರೀಶ್ ಹಾಗೂ ಭರತ್ ಶೆಟ್ಟಿಗೆ ಹಣ ನೀಡಿದ್ದೇವೆ ಎಂಬುದಾಗಿ ಹೇಳುತ್ತಲೇ ಸರಣಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಮಂಗಳೂರಿನಿಂದ ನೊಂದ ಬಾಲಕಿ ವಾಪಾಸ್ ಊರಿಗೆ ತೆರಳಿದ ಬಳಿಕ ತನ್ನ ತಂದೆಯ ಚಿಕ್ಕಪ್ಪ, ಅತ್ತೆಯ ಬಳಿಯಲ್ಲಿ ಮಂಗಳೂರಿನಲ್ಲಿ ನಡೆದಂತ ಅತ್ಯಾಚಾರ ಕೃತ್ಯದ ಇಡೀ ಘಟನೆಯನ್ನು ಕಣ್ಣೀರಿಡುತ್ತಲೇ ಬಿಚ್ಚಿಟ್ಟಿದ್ದಾಳೆ. ವಿಷಯ ತಿಳಿದು ಚಿಕ್ಕಪ್ಪ, ಅತ್ತೆ ಸೇರಿ ಬೀರೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಈ ದೂರಿನ ಹಿನ್ನಲೆಯಲ್ಲಿ ಬೀರೂರು ಠಾಣೆಯ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿಕೊಂಡು ಅಪ್ರಾಪ್ತೆಯ ತಂದೆ ಗಿರೀಶ್, ಅಜ್ಜಿ ನಾಗರತ್ನ, ಬ್ರೋಕರ್ ನಾರಾಯಣಸ್ವಾಮಿ, ಮಂಗಳೂರು ಮೂಲದ ಭರತ್ ಶೆಟ್ಟಿ ಹಾಗೂ ಕೀಚಕ ಕೃತ್ಯಕ್ಕೆ ಸಹಕರಿಸಿದಂತ ಮನೆ ಮಾಲೀಕ ಶೇಖರ್ ಸುವರ್ಣ, ಸರಣಿ ಅತ್ಯಾಚಾರ ಎಸಗಿದಂತ ಜೀನೇಂದ್ರಾ, ರಾಜೇಂದ್ರ ಹಾಗೂ ಸಿರಾಜ್ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.
ನಿಮ್ಮ ಮಕ್ಕಳು ಹುಟ್ಟಿದಾಗಿನಿಂದ 16 ವರ್ಷದವರೆಗೂ ಈ ‘ಲಸಿಕೆ’ಗಳನ್ನು ತಪ್ಪದೇ ಹಾಕಿಸಿ
ಫೆ.3ರಿಂದ ಸಾಗರದ ‘ಮಾರಿಕಾಂಬ ಜಾತ್ರೆ’ ಆರಂಭ: ದೇವಸ್ಥಾನದ ಮುಂಭಾಗದ ‘ರಸ್ತೆ ಡಾಂಬಾರೀಕರಣ’








