ಶಿವಮೊಗ್ಗ: ತನ್ನ ಮಾಲೀಕನಿಗೆ ನಿಯತ್ತಾಗಿದ್ದಂತ ಆ ನಾಯಿಯು, ಅಷ್ಟೇ ಆತನನ್ನು ಹಚ್ಚಿಕೊಂಡಿತ್ತು. ಆದರೇ ಮಾಲೀಕ ಸಾವಿನ ಸುದ್ದಿ ತಿಳಿದು ನಾಯಿ ಕೂಡ ಪ್ರಾಣ ಬಿಟ್ಟಿರುವಂತ ಹೃದಯ ವಿದ್ರಾವಕ ಘಟನೆ ಭದ್ರಾವತಿಯನ್ನು ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹುತಾಕಾಲನಿಯ ಜಿಂಕ್ ಲೈನ್ ನಿವಾಸಿ ಲಾರೆನ್ಸ್(61) ಅವರು ಪೈಂಟರ್ ಕೆಲಸ ಮಾಡುತ್ತಿದ್ದರು. ಅವರು ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಇಂತಹ ಅವರು ನಾಲ್ಕು ದಿನಗಳ ಹಿಂದೆ ನಿಧರಾಗಿದ್ದರು. ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದಂತ ಲಾರೆನ್ಸ್ ಪಾರ್ಥೀವ ಶರೀರವನ್ನು ಮನೆಗೆ ತರಲಾಗಿತ್ತು.
ತನ್ನ ನೆಚ್ಚಿನ ಮಾಲೀಕ ಸಾವನ್ನಪ್ಪಿ, ಶವವಾಗಿ ಮಲಗಿರುವುದನ್ನು ಕಂಡ ನಾಯಿ ತೀವ್ರ ನೊಂದುಕೊಂಡಿದೆ. ಮಾಲೀಕ ಲಾರೆನ್ಸ್ ಶವದ ಪಕ್ಕದಲ್ಲೇ ಮಲಗಿ ತೀವ್ರ ದುಖ ವ್ಯಕ್ತಪಡಿಸಿದಂತ ಅವರ ನೆಚ್ಚಿನ ಶ್ವಾನವು, ಅಲ್ಲೇ ಅಂತಿಮ ಉಸಿರೆಳೆದಿದೆ. ಗುರುವಾರದಂದು ಲಾರೆನ್ಸ್ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಅವರೊಟ್ಟಿಗೆ ಸಾವನ್ನಪ್ಪಿದಂತ ಶ್ವಾನವನ್ನು ಮನೆಯ ಹಿಂಭಾಗದಲ್ಲಿಯೇ ಹೂಳಲಾಗಿದೆ.
BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ








