ಶಿವಮೊಗ್ಗ: ಆಗಸ್ಟ್.15ರಂದು ನವದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತದೆ. ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಗರ ತಾಲ್ಲೂಕಿನ ಮಂಚಾಲೆಯ ದಂಪತಿಗಳು ಭಾಗಿಯಾಗಲಿದ್ದಾರೆ.
ಹೌದು.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಂಚಾಲೆ ಗ್ರಾಮದ ಪ್ರಗತಿ ಪರ ಕೃಷಿಕರಾದಂತ ಪ್ರಕಾಶ್ ರಾವ್ ಮತ್ತು ಪತ್ನಿ ಶಾಂತ ಅವರನ್ನು ದೆಹಲಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
ತಮ್ಮ ಎರಡು ಎಕರೆ ಜಾಗದಲ್ಲಿ ಹನಿ ನೀರಾವರಿ ಮೂಲಕ ಸಾಗರದ ಮಂಚಾಲೆ ಗ್ರಾಮದ ಪ್ರಕಾಶ್ ರಾವ್ ಅವರು ವೈವಿಧ್ಯ ಕೃಷಿ ಮಾಡಿದವರು. ಕಾಳು ಮೆಣಸು, ಮಧುನಾಶಿನಿ, ಕ್ಯಾನ್ಸರ್ ರೋಗಕ್ಕೆ ಮದ್ದಾದ ನ್ಯಾಪಿಯ, ಮಧು ಮೇಹಕ್ಕೆ ಉಪಯೋಗಕಾರಕ ವಿನಾಯಕ ಬಳ್ಳಿ, ಅರಿಶಿಣ, ದಾಲ್ಚಿನ್ನಿ, ಲಿಂಬೆ ಸೇರಿದಂತೆ ವಿವಿಧ ಗಿಡಮೂಲಿಕೆ ಸಸ್ಯಗಳನ್ನು ಬೆಳೆದು, ಜನರಲ್ಲಿ ಮಾದರಿ ಕೃಷಿಕರೆನಿಸಿದ್ದರು.
ಈಗಾಗಲೇ ಪ್ರಕಾಶ್ ರಾವ್ ಅವರ ಪ್ರಗತಿಪರ ಬಹುಮುಖಿ ಕೃಷಿಯನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಜೊತೆಗೆ ಇವರ ಆಯುರ್ವೇದ ಕೃಷಿಯ ಬಗ್ಗೆಯೂ ಕೆಲ ವಿವಿಗಳ ವಿದ್ಯಾರ್ಥಿಗಳು ಸಂಶೋಧನಾ ಕೃತಿಯನ್ನು ಮಂಡಿಸಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿದಂತ ಭಾರತೀಯ ಆಯುಷ್ ಇಲಾಖೆಯು ಇವರ ಜೊತೆಗೂಡಿ ಗಿಡಮೂಲಿಕೆಗಳ ಸಸ್ಯ ಬೆಳೆಯುವಿಕೆಯಲ್ಲೂ ತೊಡಗಿದೆ. ಇಂತಹ ಸಾಧನೆಯನ್ನು ಮಾಡಿದಂತ ಪ್ರಕಾಶ್ ರಾವ್ ಅವರನ್ನು ಭಾರತೀಯ ಆಯುಷ್ ಇಲಾಖೆ ಗುರುತಿಸಿದ್ದು, ಆಗಸ್ಟ್.15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವಂತ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಕರ್ನಾಟಕದಿಂದ ಪ್ರಕಾಶ್ ರಾವ್ ಹಾಗೂ ಪತ್ನಿ ಶಾಂತ ಅವರನ್ನು ಆಹ್ವಾನಿಸಿದೆ.
ಈ ಬಗ್ಗೆ ಕನ್ನಡ ನ್ಯೂಸ್ ನೌ ಜೊತೆಗೆ ಸಂತಸ ಹಂಚಿಕೊಂಡಿರುವಂತ ಪ್ರಕಾಶ್ ರಾವ್ ಅವರು, ಭಾರತ ಸರ್ಕಾರದ ಆಯುಷ್ ಇಲಾಖೆ ನನ್ನ ಕೆಲಸವನ್ನು ಗುರುತಿಸಿ ಆಗಸ್ಟ್.15ರಂದು ದೆಹಲಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದೆ. ಈ ಅವಕಾಶ ನೀಡಿದಂತ ಇಲಾಖೆಗೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಇನ್ನೂ ಅವರ ಪತ್ನಿ ಶಾಂತ ಅವರು, ನನ್ನ ಪತಿ ಪ್ರಗತಿಪರ ಕೃಷಿಕರಾಗುವ ಮೂಲಕ ಪಶ್ಚಿಮ ಘಟ್ಟ ಶ್ರೇಣಿಯಲ್ಲಿನ ಆಯುರ್ವೇದ ಗಿಡಗಳನ್ನು ಉಳಿಸುವಂತ ಕೆಲಸ ಮಾಡುತ್ತಿದ್ದಾರೆ. ಅವರ ಸಾಧನೆಯನ್ನು ಭಾರತ ಸರ್ಕಾರ ಗುರುತಿಸಿ, ಈ ಅವಕಾಶ ನೀಡಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ನಾಳೆಯಿಂದ ಬೆಂಗಳೂರಿನ ‘ಯೆಲ್ಲೋ ಲೈನ್ ಮೆಟ್ರೋ ಮಾರ್ಗ’ದಲ್ಲಿ ‘ವಾಣಿಜ್ಯ ರೈಲು ಸಂಚಾರ’ ಆರಂಭ | Namma Metro
BIG NEWS: ‘SSLC ಪರೀಕ್ಷೆ’ಯಲ್ಲಿ ಕಡಿಮೆ ಫಲಿತಾಂಶ: ‘ಶಾಲೆ’ಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ ಆದೇಶ