ಲಕ್ನೋ: ಸಾಲದ ಬಾಧೆಯಿಂದ ಬೇಸತ್ತಂತ ದಂಪತಿಗಳು ತಮ್ಮ ನಾಲ್ಕು ತಿಂಗಳ ಮಗುವಿಗೆ ವಿಶವಿಟ್ಟು, ತಾವು ಆತ್ಮಹತ್ಯೆಗೆ ಮಾಡಿಕೊಂಡಿರುವಂತ ಧಾರುಣ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಕೈಮಗ್ಗ ಉದ್ಯಮಿ ಸಚಿನ್ ಗ್ರೋವರ್(30) ಮತ್ತು ಪತ್ನಿ ಶಿವಾನಿ(28) ಸಾಲದ ಸುಳಿಗೆ ಸಿಲುಕಿದ್ದರು. ಸಾಲದ ಬಾಧೆಯಿಂದ ಬೇಸತ್ತಂತ ದಂಪತಿಗಳು ಬುಧವಾರ ಬೆಳಗ್ಗೆ ತಮ್ಮ ನಾಲ್ಕು ತಿಂಗಳ ಗಂಡು ಮಗು ಫತೇಹ್ ಗೆ ವಿಷ ವಿಟ್ಟು, ತಾವೂ ಮನೆಯಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಉದ್ಯಮಿ ಸಚಿನ್ ತಾನು ಸಾಲದ ಹೊರೆಯಿಂದ ಬಳಲುತ್ತಿದ್ದೇನೆ. ಆದಾಯದ ಕೊರತೆಯಿಂದಾಗಿ ನೊಂದು ಹೋಗಿದ್ದೇನೆ. ದಯವಿಟ್ಟು ನಮ್ಮ ಕಾರು, ಮನೆ ಮಾರಾಟ ಮಾಡಿ ಸಾಲ ತೀರಿಸಿಬಿಡಿ. ಸಾಲ ಕೊಟ್ಟವರು ನೊಂದುಕೊಳ್ಳಬಾರದು ಎಂಬುದಾಗಿ ಹೇಳಿದ್ದಾರೆ.
ಅಂದಹಾಗೇ ದಂಪತಿಗಳು ಮಂಗಳವಾರ ರಾತ್ರಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರೇ, ಮಗುವಿನ ಶವವು ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ. ಸಚಿನ್-ಶಿವಾನಿ ದಂಪತಿ ಆತ್ಮಹತ್ಯೆಗೆ ಮುನ್ನ 4 ತಿಂಗಳ ಮಗುವಿಗೆ ವಿಷಪ್ರಾಶನ ಮಾಡಿರುವಂತ ಶಂಕೆ ವ್ಯಕ್ತವಾಗಿದೆ.
ಕರ್ನಾಟಕದಲ್ಲಿ ದ್ವಿಭಾಷಾ ನೀತಿ: ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ 25,000 ಹಿಂದಿ ಶಿಕ್ಷಕರು | Hindi Teacher