ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಕಾರುಣ್ಯ ರಾಮ್ ಅವರು ತನ್ನ ತಂಗಿಯ ವಿರುದ್ಧ ವಂಚನೆ ಆರೋಪದಡಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ನಟಿ ಕಾರುಣ್ಯ ರಾಮ್ ವಿರುದ್ಧವೂ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಬೆಂಗಳೂರಿನ ಪ್ರತಿಭಾ ಎಂಬ ಮಹಿಳೆ ನಟಿ ಕಾರುಣ್ಯ ರಾಮ್ ವಿರುದ್ಧ ವಂಚನೆ ಆರೋಪದಡಿ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ ಸ್ಟುಡಿಯೋ ಹಾಗೂ ಬ್ಯುಸಿನೆಸ್ ಗೆ ಹಣ ಶಾರ್ಟೇಜ್ ಇದೆ ಎಂಬುದಾಗಿ 3 ಲಕ್ಷ ರೂಪಾಯಿ ಹಡೆ ಪಡೆದಿದ್ದಾರೆ.
ನಟಿ ಕಾರುಣ್ಯ ರಾಮ್ ಅವರು ಪಡೆದಿರುವಂತ ಹಣವನ್ನು ವಾಪಾಸ್ ಕೇಳಿದರೇ ಧಮ್ಕಿ ಹಾಕುತ್ತಿದ್ದಾರೆ. ನಟಿ ಕಾರುಣ್ಯ ರಾಮ್ ಹಾಗೂ ಅವರ ಸಹೋದರಿ ಸಮೃದ್ಧಿ ರಾಮ್ ಇಬ್ಬರೂ ಸೇರಿ ನನಗೆ ಮೋಸ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮಕರ ಸಂಕ್ರಾಂತಿಯಂದೇ ಘೋರ ದುರಂತ: ತಂದೆ ಎದುರೇ ಕೊಳದಲ್ಲಿ ಮುಳುಗಿ ಇಬ್ಬರು ಬಾಲಕರು ದುರ್ಮರಣ
ರಾಜ್ಯ ರಾಜಕಾರಕ್ಕೆ ಬರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆ








