ತುಮಕೂರು: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರೊಂದು ಧಗಧಗಿಸಿ ಹೊತ್ತಿ ಉರಿದಿರುವಂತ ಘಟನೆ ನಡೆದಿದೆ. ಈ ಬೆಂಕಿ ದುರಂತದಿಂದ ಚಾಲಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಯಲ್ಲಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಮಕೂರಿನಿಂದ ಹೊಸದುರ್ಗದ ಕಡೆಗೆ ಸಾಗುತ್ತಿದ್ದಂತ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಕಾರಿನಿಂದ ಚಾಲಕ ಹೇಮಂತ್ ಎಂಬುವರು ಕೆಳಗೆ ಇಳಿದಿದ್ದಾರೆ.
ಕಾರಿನ ಮುಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇತರೆಡೆ ವ್ಯಾಪಿಸಿದ ಪರಿಣಾಮ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲೇ ಧಗಧಗಿಸಿ ಹೊತ್ತಿ ಉರಿದಿದೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಹೊಸದುರ್ಗ ಮೂಲದ ಹೇಮಂತ್ ಎಂಬುವರು ತಮ್ಮ ಡಸ್ಟರ್ ಕಾರಿನಲ್ಲಿ ತುಮಕೂರಿನಿಂದ ತಮ್ಮ ಊರಿಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಗುಬ್ಬಿ ತಾಲ್ಲೂಕಿನ ಯಲ್ಲಾಪುರ ಗೇಟ್ ಬಳಿಯಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SHOCKING: ‘ದೃಶ್ಯಂ ಚಿತ್ರ’ದಿಂದ ಪ್ರೇರಿತನಾಗಿ ಪತ್ನಿ, ಅತ್ತೆ ಕೊಂದು ಈತ ಮಾಡಿದ್ದೇನು ಗೊತ್ತಾ?
BREAKING: ಅಲಾಸ್ಕಾ, ಹವಾಯಿಯಲ್ಲಿ ಸುನಾಮಿ: 10 ಅಡಿ ಎತ್ತರದ ಅಲೆಗಳ ಅಬ್ಬರ !