ಬೆಂಗಳೂರು: ಕೇಂದ್ರ ಸರ್ಕಾರವು ಸ್ಪ್ಯಾನ್ ಕರೆಗಳಿಗೆ ಬ್ರೇಕ್ ಹಾಕುವಂತ ನಿರ್ಧಾರ ಕೈಗೊಂಡಿತ್ತು. ಇದರ ಭಾಗವಾಗಿ ಟ್ರಾಯ್ಡ್ ಗೆ ಖಡಕ್ ಸೂಚನೆ ಕೂಡ ನೀಡಲಾಗಿತ್ತು. ಅದರಂತೆ ಈಗ ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಬಿದ್ದಿದ್ದು, ಈಗ ನಿಮಗೆ ಬರುವಂತ ಕರೆ ಯಾರದ್ದೆಂದು ಹೆಸರೇ ನಿಮ್ಮ ಪೋನಿನಲ್ಲಿ ಡಿಸ್ಪ್ಲೆ ಆಗುವಂತೆ ಆಗಿದೆ.
ಹೌದು.. ಇದನ್ನು ಬರುತೇಕರು ಗಮನಿಸೇ ಇರೋದಿಲ್ಲ. ನಿಮ್ಮ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿ ನಂಬರ್ ಸೇವ್ ಇರದ ಸಂಖ್ಯೆಗಳಿಂದ ಕರೆ ಬಂದರೇ, ಕರೆ ಮಾಡುತ್ತಿರುವಂತ ವ್ಯಕ್ತಿಯ ಹೆಸರು ಏನು ಎಂಬುದಾಗಿ ಪ್ರದರ್ಶಿಸಲ್ಪಡುತ್ತಿದೆ.
ಟೆಲಿಕಾಂ ಕಂಪನಿಗಳಿಗೆ ಸಿಮ್ ಖರೀದಿಸುವಂತ ಸಂದರ್ಭದಲ್ಲಿ ಗ್ರಾಹಕರು ನೀಡಿದಂತ ದಾಖಲೆಯ ಆಧಾರದಲ್ಲಿ ಹೆಸರನ್ನು ನೋಂದಾಯಿಸಲಾಗಿರುತ್ತದೆ. ಗ್ರಾಹಕರ ದಾಖಲೆಯಲ್ಲಿ ಇರುವಂತ ಹೆಸರಿನಂತೆಯೇ ಈಗ ಅನಾಮದೇಯ ನಂಬರ್ ಗಳಿಂದ ಕರೆ ಬಂದರೂ, ಕರೆ ಮಾಡುತ್ತಿರುವಂತ ವ್ಯಕ್ತಿಯ ಹೆಸರು ಏನು ಎನ್ನುವುದನ್ನು ಮೊಬೈಲ್ ಡಿಸ್ಪ್ಲೆ ಮೇಲೆ ತೋರಿಸಲಾಗುತ್ತಿದೆ.
ನಿಮ್ಮ ಮೊಬೈಲ್ ಗಳಲ್ಲಿ ನಂಬರ್ ಸೇವ್ ಮಾಡಿಕೊಳ್ಳದೇ ಇರುವಂತ ಸಂಖ್ಯೆಯಿಂದ ಕರೆ ಬಂದರೂ, ಅತ್ತಲಿಂದ ಕರೆ ಮಾಡುತ್ತಿರುವಂತ ವ್ಯಕ್ತಿಯ ಹೆಸರು ಏನು ಎಂಬುದನ್ನು ಆಯಾ ನೆಟ್ವರ್ಕ್ ಟೆಲಿಕಾಂ ಕಂಪನಿಗಳು ಮೊಬೈಲ್ ಪರದೆಯ ಮೇಲೆ ಪ್ರದರ್ಶಿಸುತ್ತಿವೆ. ಆ ಮೂಲಕ ಸ್ಪ್ಯಾಮ್ ಕರೆಗಳಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಟ್ರಾಯ್ಡ್ ನಿರ್ದೇಶದನಂತೆ ಟೆಲಿಕಾಂ ಕಂಪನಿಗಳು ಬ್ರೇಕ್ ಹಾಕಿದ್ದಾವೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು…
ರಾಜ್ಯದ ಯಾವುದೇ ‘NHM ಸಿಬ್ಬಂದಿ’ಗಳನ್ನು ಕೆಲಸದಿಂದ ಕೈಬಿಡುವುದಿಲ್ಲ: ಸಿಎಂ ಸಿದ್ಧರಾಮಯ್ಯ ಭರವಸೆ
ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ








