ಚಿಕ್ಕಮಗಳೂರು :ಜಿಲ್ಲೆಯಲ್ಲಿ ಬಾರ್ ಒಂದರಲ್ಲಿ ನಡೆದಂತ ಗಲಾಟೆಯೊಂದು ಯುವಕನೊಬ್ಬನನ್ನು ಹೊಡೆದು ಕೊಂದು ಕೊಲೆಯಲ್ಲಿ ಅಂತ್ಯಗೊಂಡಿರುವಂತ ಘಟನೆ ಚಿಕ್ಕಮಗಳೂರಿನ ಪಟಾಕಿ ಮೈದಾನದಲ್ಲಿ ನಡೆದಿದೆ.
ಚಿಕ್ಕಮಗಳೂರಲ್ಲಿ ಬಾರ್ ನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಯುವಕನಿಗೆ ಹೊಡೆದು ಪಟಾಕಿ ಮೈದಾನಕ್ಕೆ ಕಿಡಿಗೇಡಿಗಳು ಎಸೆದಿದ್ದಾರೆ. ಬೆಳಗ್ಗೆ ಆಟೋ ಚಾಲಕ ನೋಡಿ ಉಸಿರಾಡ್ತಿದ್ದ ಎಂದು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ತೀವ್ರ ಹಲ್ಲೆಯಾಗಿದ್ದರಿಂದ ಆಸ್ಪತ್ರೆಯಲ್ಲಿ ಯುವಕ ಕೊನೆಯುಸಿ ರೆಳೆದು ಸಾವನ್ನಪ್ಪಿದ್ದಾನೆ.
ಚಿಕ್ಕಮಗಳೂರು ನಗರದ ಶಾಸ್ತ್ರ ಗ್ರೂಪಿನ ತೇಜು (40) ಮೃತ ಯುವಕನಾಗಿದ್ದಾನೆ. ಬಾರ್ ನಲ್ಲಿ ಕೆಲಸ ಮಾಡ್ತಿದ್ದ ಬಿಹಾರಿ ಕಾರ್ಮಿಕರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಹಲ್ಲೆಗೈದಿರೋ ಬಿಹಾರಿ ಮೂಲದ ಕಾರ್ಮಿಕರು ನಾಪತ್ತೆ ಆಗಿದ್ದಾರೆ. ಹೊಡೆದ ಬಳಿಕ ಒಂದು ಕಿ.ಮೀ. ದೂರದ ಗ್ರೌಂಡ್ ನಲ್ಲಿ ಬಿಹಾರಿಗಳು ಎಸೆದಿದ್ದಾರೆ.
ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯ ಪ್ರೀತಂ ಬಾರ್ ನಲ್ಲಿ ಘಟನೆ ಗಲಾಟೆ ಇದಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








