ಶಿವಮೊಗ್ಗ: ಜಿಲ್ಲೆಯಲ್ಲಿ ಚೆನ್ನಾಗಿ ಓದಿಕೊಳ್ಳುವಂತೆ ಪೋಷಕರು ಬುದ್ಧಿವಾದ ಹೇಳಿದ ಒಂದೇ ಒಂದು ಕಾರಣಕ್ಕೆ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿನಹಳ್ಳಿ ಹೋಬಳಿಯ ತುಂಬೆ ಗ್ರಾಮದಲ್ಲಿ ಇಂತಹ ಶಾಕಿಂಗ್ ಘಟನೆ ನಡೆದಿದೆ. ನಿಖಿಲ್(14) ಎಂಬ ವಿದ್ಯಾರ್ಥಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದಂತ ವಿದ್ಯಾರ್ಥಿಯಾಗಿದ್ದಾನೆ.
ತುಂಬೆ ಗ್ರಾಮದ ಸಮೀಪದ ಪ್ರೌಢ ಶಾಲೆಯಲ್ಲಿ ನಿಖಿಲ್ 9ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದನು. ಓದಿನಲ್ಲಿ ಸ್ವಲ್ಪ ಹಿಂದಿದ್ದರಿಂದ ಪೋಷಕರು ಪದೇ ಪದೇ ಚೆನ್ನಾಗಿ ಓದಿಕೊಳ್ಳುವಂತೆ ಬುದ್ಧಿ ಮಾತು ಹೇಳುತ್ತಿದ್ದರು.
ಈ ಕಾರಣದಿಂದಲೇ ನಿಖಿಲ್ ತಮ್ಮ ಮನೆಯ ಅಟ್ಟಣಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಕೂಡಲೇ ನೋಡಿಕೊಂಡಂತ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಿಖಿಲ್ ಪರೀಕ್ಷಿಸಿದಂತ ವೈದ್ಯರು, ಸಾವನ್ನಪ್ಪಿರುವುದಾಗಿ ಖಚಿತಪಡಿಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ