ಚಿಕ್ಕಮಗಳೂರು: ಆ ರಸ್ತೆಯಲ್ಲಿ ಮಳೆಗಾಲ ಬಂದ್ರೆ ಸಾಕು ಓಡಾಡುವುದಕ್ಕೆ ಕಷ್ಟ. ಕೆಸರು ಗದ್ದೆಯಾಗುವ ಸ್ಥಿತಿ. ಆದರಲ್ಲೂ ಮಳೆಗಾಲದಲ್ಲಿ ಶಾಲೆಗೆ ಹೋಗೋದಕ್ಕೆ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಕಷ್ಟ. ಹೀಗಾಗಿ ನಮ್ಮೂರಿನ ರಸ್ತೆ ಮಾಡಿಸಿಕೊಡುವಂತೆ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮಲಗಾರು ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ ಎಂಬುವರೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಾಕೆ. ಲೋಕನಾಥಪುರ ಗ್ರಾಮದಲ್ಲಿ 8ನೇ ತರಗತಿ ಓದುತ್ತಿರುವಂತ ಸಿಂಧೂರ ಮಳೆಗಾಲದಲ್ಲಿ ನಮ್ಮ ಕಷ್ಟ ಹೇಳತೀರದಾಗಿದೆ. ರಸ್ತೆ ತುಂಬಾ ಹಾಳಾಗಿದ್ದು, ಸರಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾಳೆ.
ನಮ್ಮ ಊರಿನಿಂದ 3-4 ಕಿಲೋಮೀಟರ್ ದೂರದಲ್ಲಿ ಶಾಲೆಯಿದೆ. ಆ ಶಾಲೆಗೆ ತೆರಳೋದಕ್ಕೆ ಸಾಗಬೇಕಾದಂತ ರಸ್ತೆಯು ಗುಂಡಿ, ಕೆಸರಿನಿಂದ ತುಂಬಿದೆ. ವಾರದಲ್ಲಿ 2-3 ದಿನ ಶಾಲೆಗೆ ಹೋಗೋದಕ್ಕೂ ಆಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಬರೋದಕ್ಕೂ ಕಷ್ಟವಾಗಿದೆ. ನಮ್ಮ ಊರಿಗೆ ಯಾವುದೇ ವಾಹನ ಬರೋದಕ್ಕೆ ಆಗುತ್ತಿಲ್ಲ ಎಂಬುದಾಗಿ ಪ್ರಧಾನಿ ಮೋದಿಗೆ ಬರೆದಂತ ಪತ್ರದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ ಅಲವತ್ತುಕೊಂಡಿದ್ದಾರೆ. ವಿದ್ಯಾರ್ಥಿನಿಯ ಪತ್ರಕ್ಕೆ ಮೋದಿ ಪ್ರತ್ಯುತ್ತರ ನೀಡಿ, ರಸ್ತೆ ಸರಿ ಮಾಡಿಸಲು ಸೂಚಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
BREAKING: ಆ.5ರಿಂದ ರಾಜ್ಯದ ‘ಸಾರಿಗೆ ಸಿಬ್ಬಂದಿ’ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ
GOOD NEWS: ಹೊಸದಾಗಿ ನೇಮಕಗೊಂಡ ‘ಪೌರಕಾರ್ಮಿಕ’ರಿಗೆ ಬಿಬಿಎಂಪಿ ಗುಡ್ ನ್ಯೂಸ್