Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೇಖೆದಾಟು ಯೋಜನೆ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ವಿಧಾನಸಭೆಯ ನಿರ್ಣಯ ಶ್ಲಾಘಿಸಿದ ನಟ ಕಮಲ್ ಹಾಸನ್ 

​ನೀಟ್ ಮರುಪರೀಕ್ಷೆಗೆ ದೇಶಾದ್ಯಂತ ನಾಳೆ ‘ಮೆಗಾ ಮಾಕ್ ಡ್ರಿಲ್’: 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ, 1.5 ಲಕ್ಷ ಸಿಸಿಟಿವಿ ಕಣ್ಗಾವಲು!

BREAKING: ​ನೀಟ್ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಜೂನ್ 21ರ ಪರೀಕ್ಷೆ ತಡೆಗೆ ಕೋರಿದ್ದ ಅರ್ಜಿ ವಜಾ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಚ್ಛೇದನವಾದ ಪತಿ ಮೃತಪಟ್ಟರೂ ಮಾಜಿ ಪತ್ನಿಗೆ ಜೀವನಾಂಶ ಸಿಗುತ್ತಾ? ಹೈಕೋರ್ಟ್ ಮಹತ್ವದ ತೀರ್ಪು!
INDIA

ವಿಚ್ಛೇದನವಾದ ಪತಿ ಮೃತಪಟ್ಟರೂ ಮಾಜಿ ಪತ್ನಿಗೆ ಜೀವನಾಂಶ ಸಿಗುತ್ತಾ? ಹೈಕೋರ್ಟ್ ಮಹತ್ವದ ತೀರ್ಪು!

By kannadanewsnow57

ನವದೆಹಲಿ : ದೇಶದಲ್ಲಿ ವಿವಾಹ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕೇಂದ್ರ ಸರ್ಕಾರ ಹಲವು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವಿಚ್ಛೇದನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೋರ್ಟ್‌ ಮೆಟ್ಟಿಲೇರುತ್ತಿರುವ ಪ್ರಕರಣಗಳಲ್ಲಿ ದಂಪತಿಗಳ ನಡುವಿನ ವಿವಾದಗಳು ಮತ್ತು ವಿಚ್ಛೇದನ ಕೇಸ್‌ಗಳೇ ಹೆಚ್ಚಾಗಿವೆ. ಮದುವೆಯಾದ ವರ್ಷದೊಳಗೇ ಹಲವು ಜೋಡಿಗಳು ಬೇರೆಾಗುತ್ತಿದ್ದರೆ, ಇನ್ನು ಕೆಲವರು ಮಕ್ಕಳಾದ ಮೇಲೂ ಹಲವು ಕಾರಣಗಳಿಂದಾಗಿ ದೂರಾಗುತ್ತಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಕೋರ್ಟ್ ಮೂಲಕ ಪತ್ನಿಗೆ ಜೀವನಾಂಶ (Maintenance) ಕೊಡಿಸುವುದು ಸಾಮಾನ್ಯ. ಆದರೆ, “ವಿಚ್ಛೇದನದ ನಂತರ ಪತಿ ಮರಣ ಹೊಂದಿದರೆ, ಆತನ ಕುಟುಂಬಸ್ಥರಿಂದ ಅಥವಾ ವಾರಸುದಾರರಿಂದ ಮಾಜಿ ಪತ್ನಿ ಜೀವನಾಂಶ ಪಡೆಯಬಹುದೇ?” ಎಂಬ ದೊಡ್ಡ ಪ್ರಶ್ನೆ ಮತ್ತು ಗೊಂದಲ ಹಲವರಲ್ಲಿದೆ. ಇದಕ್ಕೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಒಂದು ಮಹತ್ವದ ತೀರ್ಪು ನೀಡಿದೆ.

ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ವಿಚ್ಛೇದನದ ನಂತರ ಪತಿ ಮರಣ ಹೊಂದಿದರೂ ಸಹ, ಆತನ ಆಸ್ತಿಯಿಂದ ಜೀವನಾಂಶವನ್ನು ಪಡೆಯುವ ಹಕ್ಕು ಮಾಜಿ ಪತ್ನಿಗೆ ಇರುತ್ತದೆ. ಪತಿಯ ಮರಣದ ನಂತರ ಆತನ ಕುಟುಂಬದ ಸದಸ್ಯರು ಅಥವಾ ಆಸ್ತಿಯ ವಾರಸುದಾರರು ಆತನ ಪಾಲಿನ ಆಸ್ತಿಯಿಂದ ಮಾಜಿ ಪತ್ನಿಗೆ ಜೀವನಾಂಶವನ್ನು ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನರೇನ್ ಗೋರೆಗಾಂವ್ಕರ್ ಎಂಬ ವ್ಯಕ್ತಿ 2012ರ ಮಾರ್ಚ್‌ನಲ್ಲಿ ಹಠಾತ್ತನೆ ಮರಣ ಹೊಂದಿದ್ದರು. ಅವರ ಸಾವಿನ ನಂತರ ಮಾಜಿ ಪತ್ನಿ ವರ್ಷಾ ಅವರಿಗೆ ಸಿಗುತ್ತಿದ್ದ ಜೀವನಾಂಶ ಸ್ಥಗಿತಗೊಂಡಿತ್ತು. ಇದರಿಂದಾಗಿ ವರ್ಷಾ ಅವರು ತಮಗೆ ಜೀವನಾಂಶ ಕೊಡಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಾರತಿ ಮತ್ತು ಮಂಜುಷಾ ದೇವ್ ಪಾಂಡೆ ಅವರಿದ್ದ ಪೀಠವು, ಪತಿಯ ವಾರಸುದಾರರು ಆತನ ಆಸ್ತಿಯಿಂದ ಮಾಜಿ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಆದೇಶಿಸಿದೆ.

ಇದೇ ವೇಳೆ ಹೈಕೋರ್ಟ್ ಮತ್ತೊಂದು ಪ್ರಮುಖ ಅಂಶವನ್ನು ಸ್ಪಷ್ಟಪಡಿಸಿದೆ. ಅಂದು ಪತಿ ತೀರಿಕೊಂಡ ಸಮಯಕ್ಕೆ ಹೋಲಿಸಿದರೆ, ಇಂದು ಆತನ ಆಸ್ತಿಯ ಮೌಲ್ಯ ಹೆಚ್ಚಾಗಿದೆ ಮತ್ತು ಸದ್ಯ ದಿನಬಳಕೆ ವೆಚ್ಚಗಳೂ ಹೆಚ್ಚಾಗಿವೆ, ಆದ್ದರಿಂದ ತಮಗೆ ನೀಡುವ ಜೀವನಾಂಶದ ಮೊತ್ತವನ್ನು ಹೆಚ್ಚು ಮಾಡಬೇಕು ಎಂದು ಮಾಜಿ ಪತ್ನಿ ವರ್ಷಾ ಕೋರಿದ್ದರು.

ಆದರೆ, ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿದೆ. “ಪತಿಯ ಆಸ್ತಿಯ ಮೌಲ್ಯ ಹೆಚ್ಚಾಗಿದೆ ಎಂದಾಗಲಿ ಅಥವಾ ಆತನ ವಾರಸುದಾರರು ಸ್ವಂತ ಶ್ರಮದಿಂದ ಗಳಿಸಿದ ಆಸ್ತಿಯನ್ನು ಆಧರಿಸಿಯಾಗಲಿ ಮಾಜಿ ಪತ್ನಿಯ ಜೀವನಾಂಶವನ್ನು ಹೆಚ್ಚಿಸಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ತೀರ್ಪು ನೀಡಿದೆ. ಅಂದರೆ, ಪತಿ ಮರಣ ಹೊಂದಿದಾಗ ಇದ್ದ ಆಸ್ತಿಯ ಸ್ಥಿತಿಗತಿ ಆಧಾರದ ಮೇಲಷ್ಟೇ ಜೀವನಾಂಶ ಸಿಗುತ್ತದೆಯೇ ಹೊರತು, ಅದನ್ನು ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Does the ex-wife get alimony even if the divorced husband dies? High Court's important ruling!
Share. Facebook Twitter LinkedIn WhatsApp Email

Related Posts

ಮೇಖೆದಾಟು ಯೋಜನೆ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ವಿಧಾನಸಭೆಯ ನಿರ್ಣಯ ಶ್ಲಾಘಿಸಿದ ನಟ ಕಮಲ್ ಹಾಸನ್ 

2 Mins Read

​ನೀಟ್ ಮರುಪರೀಕ್ಷೆಗೆ ದೇಶಾದ್ಯಂತ ನಾಳೆ ‘ಮೆಗಾ ಮಾಕ್ ಡ್ರಿಲ್’: 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ, 1.5 ಲಕ್ಷ ಸಿಸಿಟಿವಿ ಕಣ್ಗಾವಲು!

2 Mins Read

BREAKING: ​ನೀಟ್ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಜೂನ್ 21ರ ಪರೀಕ್ಷೆ ತಡೆಗೆ ಕೋರಿದ್ದ ಅರ್ಜಿ ವಜಾ!

2 Mins Read
Recent News

ಮೇಖೆದಾಟು ಯೋಜನೆ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ವಿಧಾನಸಭೆಯ ನಿರ್ಣಯ ಶ್ಲಾಘಿಸಿದ ನಟ ಕಮಲ್ ಹಾಸನ್ 

​ನೀಟ್ ಮರುಪರೀಕ್ಷೆಗೆ ದೇಶಾದ್ಯಂತ ನಾಳೆ ‘ಮೆಗಾ ಮಾಕ್ ಡ್ರಿಲ್’: 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ, 1.5 ಲಕ್ಷ ಸಿಸಿಟಿವಿ ಕಣ್ಗಾವಲು!

BREAKING: ​ನೀಟ್ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಜೂನ್ 21ರ ಪರೀಕ್ಷೆ ತಡೆಗೆ ಕೋರಿದ್ದ ಅರ್ಜಿ ವಜಾ!

​ಲಿಯೋನೆಲ್ ಮೆಸ್ಸಿ ತಂದೆ ನಿಧನರಾಗಿದ್ದಾರೆಂದು ತಪ್ಪು ವರದಿ: ಲೈವ್ ಶೋನಲ್ಲೇ ಸುಳ್ಳು ಸುದ್ದಿ ಹೇಳಿ ರಾಜೀನಾಮೆ ನೀಡಿದ ಅರ್ಜೆಂಟೀನಾದ ಪ್ರಸಿದ್ಧ ಟಿವಿ ನಿರೂಪಕಿ!

State News
KARNATAKA

ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಬಸ್ ಪ್ರಯಾಣದ ದರ ಹೆಚ್ಚಳಕ್ಕೆ ಸಾರಿಗೆ ನಿಗಮಗಳ ಪ್ರಸ್ತಾವನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆರ್ಥಿಕ ಹೊರೆಯ…

ಬಿಡದಿ ಭೂಸ್ವಾಧೀನಕ್ಕೆ ಹೆಚ್.ಎಂ.ರಮೇಶಗೌಡ ನೇತೃತ್ವದಲ್ಲಿ CSಗೆ ದೂರು ಸಲ್ಲಿಸಿದ ಜೆಡಿಎಸ್ ನಿಯೋಗ

ಮದ್ದೂರು ತಾಲೂಕಿಗೆ 5 ಕೆಪಿಎಸ್ ಶಾಲೆಗಳು ಮಂಜೂರು: ಮದ್ದೂರು ಶಾಸಕ ಕೆ.ಎಂ.ಉದಯ್

ಶೀಘ್ರದಲ್ಲೇ ‘ಕೈ’ ಹಿಡಿಯಲಿದ್ದಾರೆ ‘ಬಿಜೆಪಿ ಶಾಸಕ’ರು; ಮದ್ದೂರು ಶಾಸಕ ಕೆ.ಎಂ.ಉದಯ್ ಸ್ಪೋಟಕ ಭವಿಷ್ಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.