ನಾಗ್ಪುರ: ಭಾರತೀಯ ವಾಯುಪಡೆ (IAF) ಅಧಿಕಾರಿಯೊಬ್ಬರ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿ, ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಿರುವ ಅತ್ಯಂತ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯು “ಛೋಡೋ ಮುಝೆ” (ನನ್ನನ್ನು ಬಿಟ್ಟುಬಿಡಿ) ಎಂದು ಕೈಮುಗಿದು ಅಳುತ್ತಾ ಗೋಗರೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಘಟನೆಯ ಹಿನ್ನೆಲೆ ಏನು?
ಸಂತ್ರಸ್ತ 24 ವರ್ಷದ ಮಹಿಳೆ ಪ್ರಾಪರ್ಟಿ ಡೀಲರ್ ಆಗಿ ಕೆಲಸ ಮಾಡುತ್ತಿದ್ದು, ಆಕೆಯ ಪತಿ ಐಎಎಫ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಅವರು ಬೇರೆ ನಗರದಲ್ಲಿ ನಿಯೋಜನೆಗೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಅಯ್ಯಾಜ್ ತಾಜ್ ಮದಾರೆ (26) ಎಂಬಾತ ಮಹಿಳೆಯ ಹಳೆಯ ಸಹಪಾಠಿಯಾಗಿದ್ದನು.
ದೂರಿನ ಪ್ರಕಾರ, ಫೆಬ್ರವರಿ 2025 ರಲ್ಲಿ ಅಯ್ಯಾಜ್ ಆಸ್ತಿ (ಪ್ಲಾಟ್) ಖರೀದಿಸುವ ನೆಪದಲ್ಲಿ ಮಹಿಳೆಯನ್ನು ಸಂಪರ್ಕಿಸಿ ವರ್ಧಾ ರಸ್ತೆಯ ಹೋಟೆಲ್ ಗೆ ಕರೆಸಿಕೊಂಡಿದ್ದನು. ಅಲ್ಲಿ ಆಕೆಗೆ ಅಮಲು ಪದಾರ್ಥ ಬೆರೆಸಿದ ಜ್ಯೂಸ್ ನೀಡಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದನು. ಅಷ್ಟೇ ಅಲ್ಲದೆ, ಈ ಕೃತ್ಯದ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸಿಕೊಂಡಿದ್ದನು.
ಬ್ಲ್ಯಾಕ್ ಮೇಲ್ ಮತ್ತು ಮತಾಂತರದ ದೌರ್ಜನ್ಯ
ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಆರೋಪಿ ಅಯ್ಯಾಜ್ ಮಹಿಳೆಯನ್ನು ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಆಕೆಯಿಂದ ಬರೋಬ್ಬರಿ 3.09 ಲಕ್ಷ ರೂಪಾಯಿಗಳನ್ನು ದೋಚಿದ್ದಲ್ಲದೆ, ನಿರಂತರವಾಗಿ ಲೈಂಗಿಕ ಶೋಷಣೆ ನಡೆಸಿದ್ದಾನೆ.
ಅಷ್ಟಕ್ಕೇ ನಿಲ್ಲದೆ, ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಮಹಿಳೆಯ ಮೇಲೆ ತೀವ್ರ ಒತ್ತಡ ಹೇರಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಅಯ್ಯಾಜ್ ಮಹಿಳೆಯ ಕೈಗಳನ್ನು ಬಲವಾಗಿ ಹಿಡಿದುಕೊಂಡು, ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಾ ಆಕೆಯ ಮೇಲೆ ನಿರಂತರವಾಗಿ ಫೂತ್ಕರಿಸುತ್ತಿರುವುದು (ಓದಿ ಉಳುವುದು) ಮತ್ತು ಬಲವಂತದ ಧಾರ್ಮಿಕ ವಿಧಿವಿಧಾನಗಳನ್ನು ಮಾಡಲು ಯತ್ನಿಸುತ್ತಿರುವುದು ಕಂಡುಬಂದಿದೆ. ಮಹಿಳೆ ತನಗಾಗುತ್ತಿರುವ ಹಿಂಸೆಯನ್ನು ತಡೆಯಲಾರದೆ ತನ ಬಿಟ್ಟುಬಿಡುವಂತೆ ಪ್ರಾರ್ಥಿಸುತ್ತಿರುವುದು ವಿಡಿಯೋದಲ್ಲಿದೆ. ಈ ಧಾರ್ಮಿಕ ವಿಧಿಗಳ ಬಳಿಕ ಆಕೆ ಮತಾಂತರಗೊಂಡಿದ್ದಾಳೆ ಎಂದು ಘೋಷಿಸಿ, ಮತ್ತೊಮ್ಮೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ತಡವಾಗಿ ಬೆಳಕಿಗೆ ಬಂದ ಪ್ರಕರಣ; ಪೊಲೀಸರ ಕ್ರಮ
ವರ್ಷದ ಹಿಂದೆ ನಡೆದಿದ್ದ ಈ ಭೀಕರ ಘಟನೆಯ ಬಗ್ಗೆ ಮಹಿಳೆ ಇತ್ತೀಚೆಗಷ್ಟೇ ತನ್ನ ಪತಿಗೆ ತಿಳಿಸಿದ್ದು, ತದನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗ್ಪುರ ಪೊಲೀಸರು ಪ್ರಮುಖ ಆರೋಪಿ ಅಯ್ಯಾಜ್ ತಾಜ್ ಮದಾರೆ ಮತ್ತು ಆತನಿಗೆ ಸಾಥ್ ನೀಡಿದ ಅಮೀನ್ ಶೇಖ್ (30) ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮಧ್ಯಪ್ರದೇಶದ ತಾಮಿಯಾ ನಿವಾಸಿ ಹಜರತ್ ಮೌಲಾನಾ ಎಂಬ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಭದ್ರತಾ ಸಂಸ್ಥೆಯ ಅಧಿಕಾರಿಯ ಪತ್ನಿಗೇ ನಡೆದಿರುವ ಈ ದೌರ್ಜನ್ಯ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
In Nagpur, a married woman accused redical Islamists Ayaz Madar and Amir Sheikh of calling her to a hotel,
giving her an intoxicating substance, blackmailing her, demanding ₹300,000, and pressuring her to convert her religion.
Following her complaint, the police arrested… pic.twitter.com/QA3DogDrli
— सकल हिंदू समाज मुंबई 🚩 (@Sakalhindu_) June 15, 2026








