Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸುವಂತಿಲ್ಲ, ಮರು ಪರಿಶೀಲನೆ ಮಾತ್ರ: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

​ರಾಜ್ಯಸಭಾ ಚುನಾವಣೆ: 2/3ರಷ್ಟು ಬಹುಮತದ ಸನಿಹಕ್ಕೆ NDA; ಜಾರ್ಖಂಡ್‌ನಲ್ಲಿ ವಿಪಕ್ಷಕ್ಕೆ ಶಾಕ್ ನೀಡಿ ಜಯಭೇರಿ ಬಾರಿಸಿದ ಬಿಜೆಪಿ!

BREAKING: ರಾಜ್ಯದ ಗ್ಯಾರಂಟಿ ಯೋಜನೆ ಫಲಾನಿಭವಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಧಾನಿ ಮೋದಿಯವರ ಮಾತಿಗೆ ಮನಸೋತ ಕುಟುಂಬ: ಮಗನ ಮದುವೆಗೆ ಚಿನ್ನ ಖರೀದಿಸದೆ ದೇಶಪ್ರೇಮ ಮೆರೆದ ಮಾರ್ವಾಡಿ!
INDIA

ಪ್ರಧಾನಿ ಮೋದಿಯವರ ಮಾತಿಗೆ ಮನಸೋತ ಕುಟುಂಬ: ಮಗನ ಮದುವೆಗೆ ಚಿನ್ನ ಖರೀದಿಸದೆ ದೇಶಪ್ರೇಮ ಮೆರೆದ ಮಾರ್ವಾಡಿ!

By ವಸಂತ ಬಿ ಈಶ್ವರಗೆರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಭಾಷಣದಿಂದ ಸ್ಫೂರ್ತಿ ಪಡೆದಿರುವ ಮಹಾರಾಷ್ಟ್ರದ ಕುಟುಂಬವೊಂದು, ತಮ್ಮ ಮಗನ ಮದುವೆಗೆ ಯಾವುದೇ ಹೊಸ ಚಿನ್ನಾಭರಣಗಳನ್ನು ಖರೀದಿಸದಿರಲು ನಿರ್ಧರಿಸುವ ಮೂಲಕ ದೇಶದ ಗಮನ ಸೆಳೆದಿದೆ. ಇಷ್ಟೇ ಅಲ್ಲದೆ, ಭಾವಿ ಸೊಸೆಗೆ ಹೊಸ ಮಂಗಳಸೂತ್ರವನ್ನು ಕೊಡಿಸುವ ಬದಲಾಗಿ, ತಮ್ಮ ಬಳಿ ಇರುವ ಹಳೆಯ ಮಂಗಳಸೂತ್ರವನ್ನೇ ಪಾಲಿಶ್ ಮಾಡಿಸಿ ನೀಡಲು ಮುಂದಾಗಿದೆ.

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪುಲಗಾಂವ್‌ನಲ್ಲಿ ಪೂಜಾ ಸಾಮಗ್ರಿಗಳ ಅಂಗಡಿ ನಡೆಸುತ್ತಿರುವ ಸತೀಶ್ ಗೌರಿಶಂಕರ್ ಚೌಬೆ ಅವರ ಕುಟುಂಬವೇ ಈ ಅಪರೂಪದ ಹಾಗೂ ಆದರ್ಶ ನಿರ್ಧಾರ ಕೈಗೊಂಡಿರುವುದು. ಈ ಕುರಿತು ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆದು ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಪತ್ರ ಬರೆದಿದ್ದೇಕೆ?

ದಶಕಗಳ ಹಿಂದೆ ರಾಜಸ್ಥಾನದ ಜುಂಜುನುವಿನಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದು ನೆಲೆಸಿರುವ ಚೌಬೆ ಅವರದ್ದು ಸರಳ ಮಾರ್ವಾಡಿ ಕುಟುಂಬ. ಜುಲೈ 1ರಂದು ಇವರ ಮಗ ಯಶ್ ಅವರ ವಿವಾಹ ಮಹೋತ್ಸವ ನಿಗದಿಯಾಗಿದೆ. ಮದುವೆಗೆ ಬಂಗಾರದ ಒಡವೆ ಹಾಗೂ ಮಂಗಳಸೂತ್ರ ಖರೀದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ, ಸತೀಶ್ ಅವರ ಪತ್ನಿ ಸೀಮಾ ಚೌಬೆ ಅವರು ತಮ್ಮ ಬಳಿಯಿರುವ ಹಳೆಯ ಮಂಗಳಸೂತ್ರವನ್ನೇ ಪಾಲಿಶ್ ಮಾಡಿಸಿ ಸೊಸೆಗೆ ನೀಡುವ ಪ್ರಸ್ತಾಪ ಇಟ್ಟಿದ್ದಾರೆ. ಇದಕ್ಕೆ ಕುಟುಂಬದ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಜವಾಬ್ದಾರಿಯುತವಾಗಿ ಖರ್ಚು ಮಾಡಲು ಈ ತೀರ್ಮಾನ ಕೈಗೊಂಡಿರುವುದಾಗಿ ಸತೀಶ್ ಚೌಬೆ ಅವರು ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. “ಈ ನಮ್ಮ ನಿರ್ಧಾರ ಕೇವಲ ಹಣ ಉಳಿಸುವುದಕ್ಕಾಗಿ ಅಲ್ಲ. ಬದಲಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ತನ್ನ ವೈಯಕ್ತಿಕ ಆಯ್ಕೆಗಳನ್ನು ಬದಲಿಸಿಕೊಳ್ಳುವ ಮೂಲಕ ದೇಶದ ಹಿತಾಸಕ್ತಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ತೋರಿಸುವ ಪ್ರಜ್ಞಾಪೂರ್ವಕ ಪ್ರಯತ್ನವಾಗಿದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತೀರಾ ಸರಳವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ ಕಡಿಮೆ ವೆಚ್ಚದಲ್ಲಿ ಮದುವೆ ಮಾಡಲಿದ್ದೇವೆ ಎಂದಿರುವ ಅವರು, ಪ್ರಧಾನಿ ಮೋದಿಯವರೇ ಖುದ್ದಾಗಿ ಆಗಮಿಸಿ ನವದಂಪತಿಗೆ ಆಶೀರ್ವಾದ ಮಾಡಬೇಕು ಎಂದೂ ಆಮಂತ್ರಣ ನೀಡಿದ್ದಾರೆ.

ಈ ನಿರ್ಧಾರದ ಹಿಂದಿನ ಅಸಲಿ ಕಾರಣವೇನು?

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಜಾಗತಿಕ ರಾಜಕಾರಣದಿಂದಾಗಿ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದವು. ಇದರಿಂದಾಗಿ ಭಾರತಕ್ಕೆ ತೈಲವನ್ನು ಆಮದು ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದ ವಿದೇಶಿ ವಿನಿಮಯ (Foreign Exchange) ವೆಚ್ಚವಾಗುತ್ತಿತ್ತು.

ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಮತ್ತು ಅತ್ಯಂತ ಅವಶ್ಯಕವಾಗಿರುವ ತೈಲ ಆಮದಿಗಾಗಿ ವಿದೇಶಿ ವಿನಿಮಯವನ್ನು ಉಳಿಸುವ ನಿಟ್ಟಿನಲ್ಲಿ, ದೇಶದ ಜನರು ಕನಿಷ್ಠ ಒಂದು ವರ್ಷದವರೆಗೆ ಯಾವುದೇ ಶುಭಕಾರ್ಯಗಳಿಗೆ ಅನಗತ್ಯವಾಗಿ ಬಂಗಾರವನ್ನು ಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದರು. ಪ್ರಧಾನಿಯವರ ಈ ಮಾತನ್ನೇ ಗಂಭೀರವಾಗಿ ಪರಿಗಣಿಸಿದ ಚೌಬೆ ಕುಟುಂಬ, ಹೊಸ ಚಿನ್ನ ಖರೀದಿಗೆ ಬ್ರೇಕ್ ಹಾಕಿ ಇತರರಿಗೆ ಮಾದರಿಯಾಗಿದೆ.

Lipstick Ban: ಮಕ್ಕಳನ್ನು ‘ಕ್ಯಾನ್ಸರ್’ನಿಂದ ರಕ್ಷಿಸಲು ಶಾಲೆಗಳಲ್ಲಿ ಲಿಪ್ ಸ್ಟಿಕ್ ನಿಷೇಧಿಸಿದ ಕೇರಳ

Share. Facebook Twitter LinkedIn WhatsApp Email

Related Posts

​ರಾಜ್ಯಸಭಾ ಚುನಾವಣೆ: 2/3ರಷ್ಟು ಬಹುಮತದ ಸನಿಹಕ್ಕೆ NDA; ಜಾರ್ಖಂಡ್‌ನಲ್ಲಿ ವಿಪಕ್ಷಕ್ಕೆ ಶಾಕ್ ನೀಡಿ ಜಯಭೇರಿ ಬಾರಿಸಿದ ಬಿಜೆಪಿ!

3 Mins Read

​ಕಣ್ಣು ಮುಚ್ಚಿ ಬಿಡುವುದರೊಳಗೆ ಹಣ ವರ್ಗಾವಣೆ! ಹೇಗೆ ಕೆಲಸ ಮಾಡುತ್ತೆ UPI ತಂತ್ರಜ್ಞಾನ? ಇಲ್ಲಿದೆ ತೆರೆಮರೆಯ ಅಸಲಿ ರಹಸ್ಯ!

2 Mins Read

​ಟ್ರಂಪ್ ‘ನಂಬಲಸಾಧ್ಯ’ ನೀತಿಗೆ ಪಾಕಿಸ್ತಾನ ಹೈರಾಣು: ಅಮೆರಿಕದೊಂದಿಗೆ ವ್ಯವಹರಿಸುವಾಗ ಎದುರಾಗುತ್ತಿದೆ ಭೀತಿ!

1 Min Read
Recent News

BIG BREAKING: ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸುವಂತಿಲ್ಲ, ಮರು ಪರಿಶೀಲನೆ ಮಾತ್ರ: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

​ರಾಜ್ಯಸಭಾ ಚುನಾವಣೆ: 2/3ರಷ್ಟು ಬಹುಮತದ ಸನಿಹಕ್ಕೆ NDA; ಜಾರ್ಖಂಡ್‌ನಲ್ಲಿ ವಿಪಕ್ಷಕ್ಕೆ ಶಾಕ್ ನೀಡಿ ಜಯಭೇರಿ ಬಾರಿಸಿದ ಬಿಜೆಪಿ!

BREAKING: ರಾಜ್ಯದ ಗ್ಯಾರಂಟಿ ಯೋಜನೆ ಫಲಾನಿಭವಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್

​ಕಣ್ಣು ಮುಚ್ಚಿ ಬಿಡುವುದರೊಳಗೆ ಹಣ ವರ್ಗಾವಣೆ! ಹೇಗೆ ಕೆಲಸ ಮಾಡುತ್ತೆ UPI ತಂತ್ರಜ್ಞಾನ? ಇಲ್ಲಿದೆ ತೆರೆಮರೆಯ ಅಸಲಿ ರಹಸ್ಯ!

State News
KARNATAKA

BIG BREAKING: ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸುವಂತಿಲ್ಲ, ಮರು ಪರಿಶೀಲನೆ ಮಾತ್ರ: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಯೋಜನೆಗಳ…

BREAKING: ರಾಜ್ಯದ ಗ್ಯಾರಂಟಿ ಯೋಜನೆ ಫಲಾನಿಭವಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್

Kudligi Siddapura Morarji Desai Residential School Temporary Warehouse Inside View

ಶೇಂಗಾ ಗೋದಾಮಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ: ಮಕ್ಕಳ ಭವಿಷ್ಯಕ್ಕೆ ಕತ್ತಲೆಯ ಕಾರ್ಮೋಡ

móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.