Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೇಖೆದಾಟು ಯೋಜನೆ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ವಿಧಾನಸಭೆಯ ನಿರ್ಣಯ ಶ್ಲಾಘಿಸಿದ ನಟ ಕಮಲ್ ಹಾಸನ್ 

​ನೀಟ್ ಮರುಪರೀಕ್ಷೆಗೆ ದೇಶಾದ್ಯಂತ ನಾಳೆ ‘ಮೆಗಾ ಮಾಕ್ ಡ್ರಿಲ್’: 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ, 1.5 ಲಕ್ಷ ಸಿಸಿಟಿವಿ ಕಣ್ಗಾವಲು!

BREAKING: ​ನೀಟ್ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಜೂನ್ 21ರ ಪರೀಕ್ಷೆ ತಡೆಗೆ ಕೋರಿದ್ದ ಅರ್ಜಿ ವಜಾ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,991 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ.!
KARNATAKA

BIG NEWS : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,991 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ.!

By kannadanewsnow57

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭರ್ಜರಿ ಸಿಹಿ ಸುದ್ದಿ ನೀಡಿದೆ. ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ (Civil Police Constable) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಜೂನ್ 10ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನವಾಗಿದೆ.

ಒಟ್ಟು ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ (HK) ಕೋಟಾದಡಿ 596 ಹುದ್ದೆಗಳು ಹಾಗೂ ಉಳಿಕೆ ಮೂಲ ವೃಂದದ (Non-HK) ಕೋಟಾದಡಿ 3,395 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಸಿದ್ಧವಾಗಿಟ್ಟುಕೊಳ್ಳಬೇಕಾದ ಪ್ರಮುಖ ದಾಖಲೆಗಳು:

ಅರ್ಜಿ ಸಲ್ಲಿಕೆ ಆರಂಭವಾಗುವ ಮುನ್ನವೇ ಅಭ್ಯರ್ಥಿಗಳು ಕೆಳಗಿನ ಅಗತ್ಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಸಿದ್ಧಪಡಿಸಿಟ್ಟುಕೊಳ್ಳಬೇಕು:

ಆಧಾರ್ ಕಾರ್ಡ್

ಶೈಕ್ಷಣಿಕ ಅಂಕಪಟ್ಟಿಗಳು: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದ, ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವಿಷಯಗಳ/ಸೆಮಿಸ್ಟರ್ಗಳ ಅಂಕಪಟ್ಟಿಗಳು ಹಾಗೂ ಘಟಿಕೋತ್ಸವ ಪ್ರಮಾಣಪತ್ರ ಅಥವಾ ಪಿಡಿಸಿ (PDC).

ವಯಸ್ಸಿನ ದಾಖಲೆ: ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್ಎಸ್ಎಲ್ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ / ಶಾಲೆಯ ವರ್ಗಾವಣೆ ಪ್ರಮಾಣಪತ್ರ (TC) / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ಧೃತ ಭಾಗ.

ಮಾಜಿ ಸೈನಿಕ ಮೀಸಲಾತಿ (ಅನ್ವಯಿಸುವವರಿಗೆ): ಸೈನಿಕ ಸೇವೆಯಿಂದ ಬಿಡುಗಡೆಯಾದ ಪ್ರಮಾಣಪತ್ರ ಮತ್ತು ಪಿಂಚಣಿ/ಗ್ರಾಚ್ಯುಟಿ ಪಡೆಯುತ್ತಿರುವ ಪ್ರಮಾಣಪತ್ರ. ಒಂದು ವೇಳೆ ಮಾಜಿ ಸೈನಿಕರ ಅವಲಂಬಿತರಾಗಿದ್ದಲ್ಲಿ, ಸೇವೆಯಲ್ಲಿದ್ದಾಗ ಮೃತಪಟ್ಟ ಅಥವಾ ಶಾಶ್ವತವಾಗಿ ಅಂಗವಿಕಲರಾದ (Permanently Disabled) ಪ್ರಮಾಣಪತ್ರ.

ಜಾತಿ ಮತ್ತು ಒಳಮೀಸಲಾತಿ ಪ್ರಮಾಣಪತ್ರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿ ಪ್ರಮಾಣಪತ್ರಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ ಪಡೆದಿರಬೇಕು.

ವಿಶೇಷ ಸೂಚನೆ: ಪರಿಶಿಷ್ಟ ಜಾತಿಯ (SC) ಅಭ್ಯರ್ಥಿಗಳು ಒಳಮೀಸಲಾತಿ ಪ್ರಕಾರ ತಮಗೆ ಅನ್ವಯವಾಗುವ ಎಸ್ಸಿ-ಎ, ಎಸ್ಸಿ-ಬಿ ಮತ್ತು ಎಸ್ಸಿ-ಸಿ ಜಾತಿ ಪ್ರಮಾಣಪತ್ರಗಳ RD ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.

ಗ್ರಾಮೀಣ ಮೀಸಲಾತಿ ಪ್ರಮಾಣಪತ್ರ: ಗ್ರಾಮೀಣ ಕೋಟಾ ಕ್ಲೇಮ್ ಮಾಡುವ ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳು ನಮೂನೆ-1 ರಲ್ಲಿ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ನಮೂನೆ-2 ರಲ್ಲಿ ಪ್ರಮಾಣಪತ್ರ ಹೊಂದಿರಬೇಕು.

ಗಮನಿಸಿ: ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳು ಗ್ರಾಮೀಣ ಕೋಟಾ ಕ್ಲೇಮ್ ಮಾಡಬೇಕಾದರೆ ಕಡ್ಡಾಯವಾಗಿ ಆದಾಯ ಪ್ರಮಾಣಪತ್ರ (Non-Creamy Layer) ಹೊಂದಿರಬೇಕು.

ಕನ್ನಡ ಮಾಧ್ಯಮ ಮತ್ತು ವಿಶೇಷ ಚೇತನ ಮೀಸಲಾತಿ: ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣಪತ್ರ ಹಾಗೂ ವಿಶೇಷ ಚೇತನ (PH) ಮೀಸಲಾತಿ ಕೋರುವವರು ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಹೊಂದಿರಬೇಕು.

ಅನಕ್ಷೇಪಣಾ ಪ್ರಮಾಣಪತ್ರ (NOC): ಈಗಾಗಲೇ ಸೇವೆಯಲ್ಲಿರುವ ಅಭ್ಯರ್ಥಿಗಳು ಆಯ್ಕೆಯಾದಲ್ಲಿ, ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಲು ಅನಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿಟ್ಟುಕೊಳ್ಳಬೇಕು.

ಫೋಟೋ ಮತ್ತು ಸಹಿಯ ಸೈಜ್:
ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕಾದ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ (Photo) ಮತ್ತು ಸಹಿ (Signature) ಕಡ್ಡಾಯವಾಗಿ 50kb ಒಳಗಿರಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: 10 ಜೂನ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಜೂನ್ ಹಿಡಿದು ಜುಲೈ 03ರವರೆಗೆ.

ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಅಭ್ಯರ್ಥಿಗಳು ತಕ್ಷಣವೇ ತಮ್ಮ ಎಲ್ಲಾ ಆರ್.ಡಿ ಸಂಖ್ಯೆ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಸಿದ್ಧವಾಗಿಟ್ಟುಕೊಳ್ಳಲು ಕೋರಲಾಗಿದೆ.

https://twitter.com/KEA_karnataka/status/2063990838485770621?s=20

BIG NEWS: Recruitment for 3991 constable posts in Karnataka Police Department: These documents are mandatory for application submission!
Share. Facebook Twitter LinkedIn WhatsApp Email

Related Posts

ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಬಸ್ ಪ್ರಯಾಣದ ದರ ಹೆಚ್ಚಳಕ್ಕೆ ಸಾರಿಗೆ ನಿಗಮಗಳ ಪ್ರಸ್ತಾವನೆ

2 Mins Read

ಬಿಡದಿ ಭೂಸ್ವಾಧೀನಕ್ಕೆ ಹೆಚ್.ಎಂ.ರಮೇಶಗೌಡ ನೇತೃತ್ವದಲ್ಲಿ CSಗೆ ದೂರು ಸಲ್ಲಿಸಿದ ಜೆಡಿಎಸ್ ನಿಯೋಗ

2 Mins Read

ಮದ್ದೂರು ತಾಲೂಕಿಗೆ 5 ಕೆಪಿಎಸ್ ಶಾಲೆಗಳು ಮಂಜೂರು: ಮದ್ದೂರು ಶಾಸಕ ಕೆ.ಎಂ.ಉದಯ್

2 Mins Read
Recent News

ಮೇಖೆದಾಟು ಯೋಜನೆ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ವಿಧಾನಸಭೆಯ ನಿರ್ಣಯ ಶ್ಲಾಘಿಸಿದ ನಟ ಕಮಲ್ ಹಾಸನ್ 

​ನೀಟ್ ಮರುಪರೀಕ್ಷೆಗೆ ದೇಶಾದ್ಯಂತ ನಾಳೆ ‘ಮೆಗಾ ಮಾಕ್ ಡ್ರಿಲ್’: 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ, 1.5 ಲಕ್ಷ ಸಿಸಿಟಿವಿ ಕಣ್ಗಾವಲು!

BREAKING: ​ನೀಟ್ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಜೂನ್ 21ರ ಪರೀಕ್ಷೆ ತಡೆಗೆ ಕೋರಿದ್ದ ಅರ್ಜಿ ವಜಾ!

​ಲಿಯೋನೆಲ್ ಮೆಸ್ಸಿ ತಂದೆ ನಿಧನರಾಗಿದ್ದಾರೆಂದು ತಪ್ಪು ವರದಿ: ಲೈವ್ ಶೋನಲ್ಲೇ ಸುಳ್ಳು ಸುದ್ದಿ ಹೇಳಿ ರಾಜೀನಾಮೆ ನೀಡಿದ ಅರ್ಜೆಂಟೀನಾದ ಪ್ರಸಿದ್ಧ ಟಿವಿ ನಿರೂಪಕಿ!

State News
KARNATAKA

ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಬಸ್ ಪ್ರಯಾಣದ ದರ ಹೆಚ್ಚಳಕ್ಕೆ ಸಾರಿಗೆ ನಿಗಮಗಳ ಪ್ರಸ್ತಾವನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆರ್ಥಿಕ ಹೊರೆಯ…

ಬಿಡದಿ ಭೂಸ್ವಾಧೀನಕ್ಕೆ ಹೆಚ್.ಎಂ.ರಮೇಶಗೌಡ ನೇತೃತ್ವದಲ್ಲಿ CSಗೆ ದೂರು ಸಲ್ಲಿಸಿದ ಜೆಡಿಎಸ್ ನಿಯೋಗ

ಮದ್ದೂರು ತಾಲೂಕಿಗೆ 5 ಕೆಪಿಎಸ್ ಶಾಲೆಗಳು ಮಂಜೂರು: ಮದ್ದೂರು ಶಾಸಕ ಕೆ.ಎಂ.ಉದಯ್

ಶೀಘ್ರದಲ್ಲೇ ‘ಕೈ’ ಹಿಡಿಯಲಿದ್ದಾರೆ ‘ಬಿಜೆಪಿ ಶಾಸಕ’ರು; ಮದ್ದೂರು ಶಾಸಕ ಕೆ.ಎಂ.ಉದಯ್ ಸ್ಪೋಟಕ ಭವಿಷ್ಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.