ಮುಂಬೈ: ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಕುಂಕುಮ ಭಾಗ್ಯ’ ಮತ್ತು ‘ವಾಗ್ಲೆ ಕಿ ದುನಿಯಾ’ ಖ್ಯಾತಿಯ 22 ವರ್ಷದ ಕಿರುತೆರೆ ನಟಿ ಸಂಚಿತಾ ಉಗಾಲೆ ಅವರು ಭಾನುವಾರ (ಜೂನ್ 14) ಮುಂಬೈ ಸಮೀಪದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಘಟನೆಯು ಜೂನ್ 14 ರಂದು ನಲಸೋಪಾರಾ ಈಸ್ಟ್ನ ಆಚೋಲೆ ಗ್ರಾಮದಲ್ಲಿರುವ ‘ಸಾಯಿ ಸಂತೋಷಿ’ ಕಟ್ಟಡದ ಅವರ ನಿವಾಸದಲ್ಲಿ ನಡೆದಿದೆ.
ಅಚೋಲೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ವಿನೋದ್ ಬಾಗ್ ಅವರು ಮಾಹಿತಿ ನೀಡಿ, ಸಂಚಿತಾ ಅವರು ಸಂಜೆ 7 ರಿಂದ 7:30 ರ ಅವಧಿಯಲ್ಲಿ ತಮ್ಮ ಬೆಡ್ರೂಮ್ ಅನ್ನು ಒಳಗಿನಿಂದ ಲಾಕ್ ಮಾಡಿಕೊಂಡು, ಸೀರೆಯಿಂದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ಥಳೀಯ ನಿವಾಸಿಗಳು ತಕ್ಷಣವೇ ಅವರನ್ನು ವಸಾಯಿ-ವಿರಾರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಪೊಲೀಸ್ ತನಿಖೆ:
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸಿದ್ದಾರೆ. ಮೃತದೇಹದ ಇನ್ಕ್ವೆಸ್ಟ್ ಮಹಜರು ವರದಿ ಸಿದ್ಧಪಡಿಸಿದ ನಂತರ, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೃತರ ತಂದೆ ಮಚ್ಚಿಂದ್ರ ಉಗಾಲೆ ನೀಡಿದ ದೂರಿನ ಮೇರೆಗೆ, ಅಚೋಲೆ ಪೊಲೀಸರು ಜೂನ್ 15 ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 194 ರ ಅಡಿಯಲ್ಲಿ ಅಸಹಜ ಸಾವು (ADR) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
🔴 #BREAKING | Actress Sanchita Ugale, 22, was found dead at her residence in Nalasopara East, Maharashtra, in a suspected suicide case.
📌 According to Achole Police, she was found hanging from a ceiling fan in her bedroom on June 14 and was immediately rushed to a hospital,… pic.twitter.com/KDSRtDhcH9
— United News of India (@uniindianews) June 15, 2026








