ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕ್ರೀಡೆ ಮತ್ತು ವಿಶೇಷ ಚೇತನ ಕೋಟಾ ಕ್ಲೇಮ್ ಮಾಡಿದವರು ಎರಡು ದಿನ ಬಿಟ್ಟು ವೆರಿಫಿಕೇಷನ್ ಕ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ರಕ್ಷಣೆ (ಡಿಫೆನ್ಸ್) ಮತ್ತು ಎನ್ ಸಿಸಿ ಕೋಟಾ ಕ್ಲೇಮ್ ಮಾಡಿದ್ದವರ ಅರ್ಹತಾ ಪಟ್ಟಿ ಬಂದಿದ್ದು ಅವರ ಕ್ಲೇಮ್ ವೆರಿಫಿಕೇಷನ್ ಸ್ಲಿಪ್ ನಲ್ಲಿ ದಾಖಲಾಗಿದೆ. ಆದರೆ ಕ್ರೀಡೆ ಮತ್ತು ವಿಶೇಷ ಚೇತನಾ ಕೋಟಾ ಕ್ಲೇಮ್ ಮಾಡಿದವರ ಅರ್ಹತಾ ಪಟ್ಟಿ ಸಂಬಂಧಪಟ್ಟ ಇಲಾಖೆಗಳಿಂದ ಕೆಇಎ ಗೆ ಬಂದಿಲ್ಲ. ಬಂದ ತಕ್ಷಣ ಆ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗುವುದು. ಪುನಃ ಮತ್ತೊಮ್ಮೆ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ವಿಷಯದಲ್ಲಿ ಆತಂಕಪಡುವ ಅಗತ್ಯ ಇಲ್ಲ. ಅರ್ಹತಾ ಪಟ್ಟಿ ಬಂದ ತಕ್ಷಣವೇ ಮಾಹಿತಿಯನ್ನು ವೆರಿಫಿಕೇಷನ್ ಸ್ಲಿಪ್ ನಲ್ಲಿ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.






