ಬೆಂಗಳೂರು: 2026-27ನೇ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯೊಳಗೆ ಪಾವತಿಸುವ ಸಾರ್ವಜನಿಕರಿಗೆ ಸರ್ಕಾರವು ವಿಶೇಷ ರಿಯಾಯಿತಿಯೊಂದನ್ನು ಘೋಷಿಸಿದೆ. ತೆರಿಗೆದಾರರು ಜೂನ್ 30ರ ಒಳಗಾಗಿ ತಮ್ಮ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿದರೆ, ಶೇಕಡಾ 5ರಷ್ಟು ರಿಯಾಯಿತಿ (ಡಿಸ್ಕೌಂಟ್) ಪಡೆದುಕೊಳ್ಳಬಹುದಾಗಿದೆ.
ಪೂರ್ಣ ಪಾವತಿ ಕಡ್ಡಾಯ: ಜೂನ್ 30ರ ಒಳಗೆ ಆಸ್ತಿ ತೆರಿಗೆಯ ಸಂಪೂರ್ಣ ಮೊತ್ತವನ್ನು ಒಟ್ಟಿಗೆ ಪಾವತಿಸುವ ಸಾರ್ವಜನಿಕರಿಗೆ ಮಾತ್ರ ಈ ಶೇ. 5ರ ರಿಯಾಯಿತಿ ಸೌಲಭ್ಯ ಅನ್ವಯವಾಗುತ್ತದೆ. ಭಾಗಶಃ ಪಾವತಿಸುವವರಿಗೆ ಈ ವಿನಾಯಿತಿ ಸಿಗುವುದಿಲ್ಲ.
ಅಂತಿಮ ಗಡುವು: 2026ರ ಜೂನ್ 30ರ ನಂತರ ಪಾವತಿಸುವ ತೆರಿಗೆಗೆ ಯಾವುದೇ ರಿಯಾಯಿತಿ ಲಭ್ಯವಿರುವುದಿಲ್ಲ.
ಸಹಾಯವಾಣಿ ಸಂಪರ್ಕಿಸಿ:
ಆಸ್ತಿ ತೆರಿಗೆ ಪಾವತಿ ಹಾಗೂ ರಿಯಾಯಿತಿ ಕುರಿತು ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಸಾರ್ವಜನಿಕರು ‘ಪಂಚಮಿತ್ರ’ ಸಹಾಯವಾಣಿ ಸಂಖ್ಯೆ: 8277506000 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಆದ್ದರಿಂದ ನಾಗರಿಕರು ಕೊನೆಯ ದಿನದ ಧಾವಂತವನ್ನು ತಪ್ಪಿಸಲು ಹಾಗೂ ಶೇ. 5ರಷ್ಟು ರಿಯಾಯಿತಿಯ ಲಾಭ ಪಡೆಯಲು ಕೂಡಲೇ ತೆರಿಗೆ ಪಾವತಿಸುವಂತೆ ಕೋರಲಾಗಿದೆ.
2026-27ನೇ ಸಾಲಿನ ಆಸ್ತಿ ತೆರಿಗೆಯನ್ನು 2026ರ ಜೂನ್ 30ರ ಒಳಗಾಗಿ ಪಾವತಿಸಿ, ಶೇ. 5ರಷ್ಟು ರಿಯಾಯಿತಿ ಪಡೆದುಕೊಳ್ಳಿ. ನಿಗದಿತ ಅವಧಿಯೊಳಗೆ ಪೂರ್ಣ ತೆರಿಗೆ ಪಾವತಿಸಿದರೆ ಮಾತ್ರ ವಿನಾಯಿತಿ ಸೌಲಭ್ಯವು ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಿ. pic.twitter.com/WiS5xRSfuf
— DIPR Karnataka (@KarnatakaVarthe) June 13, 2026








