ಮೈಸೂರು: ಬೀರೂರು–ಶಿವಮೊಗ್ಗ ಟೌನ್ ನಿಲ್ದಾಣಗಳ ಮಧ್ಯೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ:
ರೈಲುಗಳ ನಿಯಂತ್ರಣ
ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು 12.06.2026 ಮತ್ತು 13.06.2026ರಂದು 35 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಣಕ್ಕೆ ಒಳಪಡಲಿದೆ. 14.06.2026 ರಿಂದ 30.06.2026ರವರೆಗೆ ಮಾರ್ಗಮಧ್ಯೆ 55 ನಿಮಿಷಗಳ ಕಾಲ ಹಾಗೂ 01.07.2026 ರಿಂದ 05.07.2026ರವರೆಗೆ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
ರೈಲು ಸಂಖ್ಯೆ 20690 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ ರೈಲು 07.07.2026 ರಿಂದ 11.07.2026ರವರೆಗೆ 30 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಣಕ್ಕೆ ಒಳಪಡಲಿದೆ.
ರೈಲು ಮರುನಿಗದಿಪಡಿಕೆ
ರೈಲು ಸಂಖ್ಯೆ 20690 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ ರೈಲು 01.07.2026 ರಿಂದ 05.07.2026ರವರೆಗೆ ಶಿವಮೊಗ್ಗ ಟೌನ್ ನಿಂದ 20 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.








