Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್ ನೇಮಕಾತಿ : `3395 ಸಿವಿಲ್ ಕಾನ್ಸ್ ಟೇಬಲ್’ ಹುದ್ದೆಗಳಿಗೆ ಅರ್ಜಿ ಆಹ್ವಾನ

BIG NEWS: ರಾಜ್ಯದಲ್ಲಿ `ಗ್ರಾಮ ಪಂಚಾಯಿತಿ ಚುನಾವಣೆ’ : ವಾರ್ಡ್‌ ಗಳ ರಚನೆ, ಮೀಸಲಾತಿ ನಿಗದಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್ ನೇಮಕಾತಿ : `3395 ಸಿವಿಲ್ ಕಾನ್ಸ್ ಟೇಬಲ್’ ಹುದ್ದೆಗಳಿಗೆ ಅರ್ಜಿ ಆಹ್ವಾನ
KARNATAKA

GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್ ನೇಮಕಾತಿ : `3395 ಸಿವಿಲ್ ಕಾನ್ಸ್ ಟೇಬಲ್’ ಹುದ್ದೆಗಳಿಗೆ ಅರ್ಜಿ ಆಹ್ವಾನ

By kannadanewsnow57

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ರಾಜ್ಯದ ಯುವಜನತೆಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದದಲ್ಲಿ ಖಾಲಿ ಇರುವ ಒಟ್ಟು 3,395 ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೇಮಕಾತಿಯ ಪ್ರಮುಖ ವಿವರಗಳು ಈ ಕೆಳಗಿನಂತಿವೆ:

ಹುದ್ದೆಗಳ ವಿವರ ಹಾಗೂ ವರ್ಗೀಕರಣ

ಒಟ್ಟು 3,395 ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:

ನೇರ ನೇಮಕಾತಿ (ಪುರುಷ): 2,266 ಹುದ್ದೆಗಳು

ನೇರ ನೇಮಕಾತಿ (ಮಹಿಳಾ): 755 ಹುದ್ದೆಗಳು

ಸೇವಾನಿರತ (ಪುರುಷ): 257 ಹುದ್ದೆಗಳು

ಸೇವಾನಿರತ (ಮಹಿಳಾ): 82 ಹುದ್ದೆಗಳು

ತೃತೀಯ ಲಿಂಗ ಅಭ್ಯರ್ಥಿಗಳು: 35 ಹುದ್ದೆಗಳು

ವೇತನ ಶ್ರೇಣಿ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ. 37,500 ರಿಂದ ರೂ. 76,100/- ಗಳ ವೇತನ ಶ್ರೇಣಿ ಇರಲಿದೆ.

ಶೈಕ್ಷಣಿಕ ವಿದ್ಯಾರ್ಹತೆ

ಅಭ್ಯರ್ಥಿಗಳು ಪಿ.ಯು.ಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು (ಸಿ.ಬಿ.ಎಸ್.ಇ / ಐ.ಎಸ್.ಸಿ / ಐ.ಟಿ.ಐ / 3 ವರ್ಷದ ಡಿಪ್ಲೊಮಾ) ಹೊಂದಿರಬೇಕು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳ ಬಳಿ ಅಂಕಪಟ್ಟಿ ಇರಬೇಕು (ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಅವಕಾಶವಿಲ್ಲ).
ಎಸ್ಎಸ್ಎಲ್ಸಿ ಅಥವಾ ಅದಕ್ಕಿಂತ ಮೇಲಿನ ಹಂತದಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದದ ಅಭ್ಯರ್ಥಿಗಳಿಗೆ 150 ಅಂಕಗಳ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಇರಲಿದ್ದು, ಅರ್ಹತೆಗಾಗಿ ಕನಿಷ್ಠ 50 ಅಂಕ ಗಳಿಸಬೇಕು.

ವಯೋಮಿತಿ (5 ವರ್ಷಗಳ ವಿಶೇಷ ಸಡಿಲಿಕೆ ಸೇರಿ)

ಸರ್ಕಾರದ ಆದೇಶದನ್ವಯ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದ್ದು, ಪರಿಷ್ಕೃತ ವಯೋಮಿತಿ ಹೀಗಿದೆ:

ಸಾಮಾನ್ಯ ಅರ್ಹತೆ (GM): ಗರಿಷ್ಠ 33 ವರ್ಷಗಳು.

SC / ST / ಪ್ರವರ್ಗ-1, 2A, 2B, 3A, 3B: ಗರಿಷ್ಠ 35 ವರ್ಷಗಳು.

ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳು: ಗರಿಷ್ಠ 38 ವರ್ಷಗಳು.

ಸೇವಾನಿರತ ಅಭ್ಯರ್ಥಿಗಳು: ಸಾಮಾನ್ಯ ವರ್ಗಕ್ಕೆ 38 ವರ್ಷ ಹಾಗೂ ಮೀಸಲಾತಿ ವರ್ಗಗಳಿಗೆ 40 ವರ್ಷಗಳು.

ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 08.06.2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.07.2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 04.07.2026

ಲಿಖಿತ ಪರೀಕ್ಷೆ ದಿನಾಂಕ: 02.08.2026 (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ)

ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ (GM) ಮತ್ತು ಇತರೆ ಹಿಂದುಳಿದ ಪ್ರವರ್ಗಗಳ ಅಭ್ಯರ್ಥಿಗಳಿಗೆ: ರೂ. 750/-

SC, ST, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ: ರೂ. 500/-

ಆಯ್ಕೆ ಪ್ರಕ್ರಿಯೆ ವಿಧಾನ

ಲಿಖಿತ ಪರೀಕ್ಷೆ (Offline-OMR ಮಾದರಿ): 100 ಪ್ರಶ್ನೆಗಳ 100 ಅಂಕಗಳ ಪರೀಕ್ಷೆ ಇರಲಿದ್ದು, ನೆಗೆಟಿವ್ ಮೌಲ್ಯಮಾಪನ (ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ) ಇರುತ್ತದೆ. ಪರೀಕ್ಷೆಯಲ್ಲಿ ಕನಿಷ್ಠ 30 ಅಂಕ ಗಳಿಸುವುದು ಕಡ್ಡಾಯ.

ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ (PST & ET): ಲಿಖಿತ ಪರೀಕ್ಷೆಯಲ್ಲಿ ಅರ್ಹರಾದವರನ್ನು 1:5 ಅನುಪಾತದಲ್ಲಿ ಈ ಪರೀಕ್ಷೆಗೆ ಕರೆಯಲಾಗುತ್ತದೆ. ಪುರುಷರಿಗೆ ಕನಿಷ್ಠ 168 ಸೆಂ.ಮೀ ಹಾಗೂ ಮಹಿಳೆಯರಿಗೆ 157 ಸೆಂ.ಮೀ ಎತ್ತರವಿರಬೇಕು. 1600 ಮೀಟರ್ ಓಟ (ಪುರುಷರಿಗೆ) ಮತ್ತು 400 ಮೀಟರ್ ಓಟ (ಮಹಿಳೆಯರಿಗೆ) ಸೇರಿದಂತೆ ವಿವಿಧ ದೈಹಿಕ ಪರೀಕ್ಷೆಗಳಿರುತ್ತವೆ.

ವೈದ್ಯಕೀಯ ಪರೀಕ್ಷೆ: ದೈಹಿಕ ಪರೀಕ್ಷೆಯಲ್ಲಿ ಪಾಸ್ ಆದವರನ್ನು 1:2 ಅನುಪಾತದಲ್ಲಿ ಕಿರುಪಟ್ಟಿ ಮಾಡಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಇಎ ಸಹಾಯವಾಣಿ ಸಂಖ್ಯೆ 080-23460460 ಅನ್ನು ಸಂಪರ್ಕಿಸಬಹುದು.

GOOD NEWS: Bumper recruitment for police post aspirants: Applications invited for `3395 Civil Constable’ posts
Share. Facebook Twitter LinkedIn WhatsApp Email

Related Posts

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

2 Mins Read

BIG NEWS: ರಾಜ್ಯದಲ್ಲಿ `ಗ್ರಾಮ ಪಂಚಾಯಿತಿ ಚುನಾವಣೆ’ : ವಾರ್ಡ್‌ ಗಳ ರಚನೆ, ಮೀಸಲಾತಿ ನಿಗದಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

3 Mins Read

BIG NEWS : ರಾಜ್ಯದಲ್ಲಿ `ವಿವಾಹ ನೋಂದಣಿಗೆ’ ಆಧಾರ್ ಕಾರ್ಡ್ ವಯಸ್ಸಿನ ದಾಖಲೆಯಲ್ಲ : ಸರ್ಕಾರದಿಂದ ಮಹತ್ವದ ಆದೇಶ

1 Min Read
Recent News

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್ ನೇಮಕಾತಿ : `3395 ಸಿವಿಲ್ ಕಾನ್ಸ್ ಟೇಬಲ್’ ಹುದ್ದೆಗಳಿಗೆ ಅರ್ಜಿ ಆಹ್ವಾನ

BIG NEWS: ರಾಜ್ಯದಲ್ಲಿ `ಗ್ರಾಮ ಪಂಚಾಯಿತಿ ಚುನಾವಣೆ’ : ವಾರ್ಡ್‌ ಗಳ ರಚನೆ, ಮೀಸಲಾತಿ ನಿಗದಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

BIG NEWS : ರಾಜ್ಯದಲ್ಲಿ `ವಿವಾಹ ನೋಂದಣಿಗೆ’ ಆಧಾರ್ ಕಾರ್ಡ್ ವಯಸ್ಸಿನ ದಾಖಲೆಯಲ್ಲ : ಸರ್ಕಾರದಿಂದ ಮಹತ್ವದ ಆದೇಶ

State News
KARNATAKA

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ವಾರ್ಷಿಕ ವೇತನ ಬಡ್ತಿ (Annual Increment)…

GOOD NEWS : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್ ನೇಮಕಾತಿ : `3395 ಸಿವಿಲ್ ಕಾನ್ಸ್ ಟೇಬಲ್’ ಹುದ್ದೆಗಳಿಗೆ ಅರ್ಜಿ ಆಹ್ವಾನ

BIG NEWS: ರಾಜ್ಯದಲ್ಲಿ `ಗ್ರಾಮ ಪಂಚಾಯಿತಿ ಚುನಾವಣೆ’ : ವಾರ್ಡ್‌ ಗಳ ರಚನೆ, ಮೀಸಲಾತಿ ನಿಗದಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

BIG NEWS : ರಾಜ್ಯದಲ್ಲಿ `ವಿವಾಹ ನೋಂದಣಿಗೆ’ ಆಧಾರ್ ಕಾರ್ಡ್ ವಯಸ್ಸಿನ ದಾಖಲೆಯಲ್ಲ : ಸರ್ಕಾರದಿಂದ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.