ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿಗೆ ನೂತನವಾಗಿ ನಿಯುಕ್ತಿಗೊಂಡು ಅಧಿಕಾರ ಸ್ವೀಕರಿಸಿರುವ ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ಇಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.
ಇಲ್ಲಿನ ತಾಲೂಕು ಕಚೇರಿಯಲ್ಲಿ ನೂತನ ತಹಶೀಲ್ದಾರರನ್ನು ಭೇಟಿಯಾದ ಸಂಘದ ಪದಾಧಿಕಾರಿಗಳು, ಅವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿ ಮುಂದಿನ ಅಧಿಕಾರಾವಧಿಗೆ ಶುಭ ಹಾರೈಸಿದರು.
ಎಲ್ಲರ ಸಹಕಾರದೊಂದಿಗೆ ಜನಸ್ನೇಹಿ ಆಡಳಿತ: ಡಾ. ಪ್ರತಿಭಾ ಆಶ್ವಾಸನೆ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಡಾ. ಪ್ರತಿಭಾ ಅವರು, “ತಾಲ್ಲೂಕಿನಾದ್ಯಂತ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜನಸ್ನೇಹಿ ಆಡಳಿತ ನೀಡಲು ನಾನು ಬದ್ಧಳಾಗಿದ್ದೇನೆ. ಇದಕ್ಕೆ ಕಂದಾಯ ಇಲಾಖೆ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರ ಸಕಾರಾತ್ಮಕ ಸಹಕಾರ ಅತ್ಯಗತ್ಯ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ದು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ” ಎಂದು ತಿಳಿಸಿದರು.

ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಲಿ: ಸಂತೋಷ್ ಕುಮಾರ್ ಆಶಯ
ಇದೇ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಅವರು, “ನೂತನ ತಹಶೀಲ್ದಾರರ ಆಡಳಿತಾವಧಿಯಲ್ಲಿ ತಾಲೂಕಿನಲ್ಲಿ ಉತ್ತಮ ಆಡಳಿತ ಮೂಡಿಬರಲಿ. ಸಾರ್ವಜನಿಕರ ದೀರ್ಘಕಾಲದ ಸಮಸ್ಯೆಗಳಿಗೆ ಹಾಗೂ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಇವರ ನೇತೃತ್ವದಲ್ಲಿ ಶೀಘ್ರ ಪರಿಹಾರ ದೊರೆಯುವಂತಾಗಲಿ” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಣ್ಣಪ್ಪ.ಡಿ, ಗೌರವಾಧ್ಯಕ್ಷರಾದಂತ ಜೋಸೆಫ್ ಫರ್ನಾಂಡಿಸ್, ಹಿರಿಯ ಉಪಾಧ್ಯಕ್ಷೆ ಅನಸೂಯ ತಳವಾರ್, ಉಪಾಧ್ಯಕ್ಷರಾದಂತ ಸುರೇಶ್ ಜಂಬಾನಿ, ಜಂಟಿ ಕಾರ್ಯದರ್ಶಿ ಶ್ರೀಧರ್.ಕೆಎ ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ನೂತನ ತಹಶೀಲ್ದಾರರಿಗೆ ಶುಭ ಕೋರಿದರು.
ನನಗೆ ಯಾವುದೇ ಖಾತೆ ಕೊಟ್ಟರೂ ನಿಸ್ವಾರ್ಥ ಸೇವೆ, ರಾಜ್ಯದ ಅಭಿವೃದ್ಧಿಗೆ ಬದ್ಧ: ಈಶ್ವರ್ ಖಂಡ್ರೆ








