Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯಗೆ ಅಧಿಕೃತ ಆಹ್ವಾನ ನೀಡಿದ ಡಿ.ಕೆ.ಶಿವಕುಮಾರ್

ಜೂನ್ 5 ರಿಂದ 7ರವರೆಗೆ ‘ಸಾಗರ ಲಯನ್ಸ್ ಕ್ಲಬ್‌’ನಿಂದ ಹಲಸು, ಮಾವಿನ ಮೇಳ ಆಯೋಜನೆ: ಅಧ್ಯಕ್ಷ ಡಾ.ಪ್ರಸನ್ನ

BREAKING : ಸಚಿವ ಸ್ಥಾನ ಫಿಕ್ಸ್ : ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ಸಲ್ಲಿಕೆ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೂನ್ 5 ರಿಂದ 7ರವರೆಗೆ ‘ಸಾಗರ ಲಯನ್ಸ್ ಕ್ಲಬ್‌’ನಿಂದ ಹಲಸು, ಮಾವಿನ ಮೇಳ ಆಯೋಜನೆ: ಅಧ್ಯಕ್ಷ ಡಾ.ಪ್ರಸನ್ನ
KARNATAKA

ಜೂನ್ 5 ರಿಂದ 7ರವರೆಗೆ ‘ಸಾಗರ ಲಯನ್ಸ್ ಕ್ಲಬ್‌’ನಿಂದ ಹಲಸು, ಮಾವಿನ ಮೇಳ ಆಯೋಜನೆ: ಅಧ್ಯಕ್ಷ ಡಾ.ಪ್ರಸನ್ನ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಸಾಗರ ಲಯನ್ಸ್ ಕ್ಲಬ್, ರಾಜರತ್ನ ಹಾಗೂ ಜನಸ್ನೇಹಿ ಇವೆಂಟ್ಸ್ ಸಹಯೋಗದೊಂದಿಗೆ ಇದೇ ತಿಂಗಳ ಜೂನ್ 5, 6 ಮತ್ತು 7 ರಂದು ಸಾಗರದ ರಾಘವೇಶ್ವರ ಸಭಾಭವನದಲ್ಲಿ ಬೃಹತ್ ‘ಹಲಸು ಮತ್ತು ಮಾವಿನ ಮೇಳ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಪ್ರಸನ್ನ ಅವರು ಪ್ರಕಟಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮೇಳದ ಸಂಪೂರ್ಣ ವಿವರಗಳನ್ನು ಹಂಚಿಕೊಂಡ ಅವರು, ​ಪ್ರತಿ ವರ್ಷದಂತೆ ಕೇವಲ ವಾಣಿಜ್ಯ ಉದ್ದೇಶಕ್ಕಾಗಿ ಮಾತ್ರವಲ್ಲದೆ, ಕೃಷಿ ಕ್ಷೇತ್ರದಲ್ಲಿ ವಿಭಿನ್ನವಾಗಿ ಏನಾದರೂ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಈ ಬಾರಿ ಹಲಸು ಮತ್ತು ಮಾವಿನ ಮೇಳವನ್ನು ಆಯೋಜಿಸಲಾಗಿದೆ ಎಂದರು.

​ಜೂನ್ 5ರಂದು ಮೇಳದ ಉದ್ಘಾಟನೆ ಮತ್ತು ಕೃಷಿಕರಿಗೆ ಸನ್ಮಾನ

  • ​ಉದ್ಘಾಟನೆ: ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಮೇಳದ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಪ್ರಸನ್ನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
  • ​ಸಭಾ ಕಾರ್ಯಕ್ರಮ ಉದ್ಘಾಟನೆ: ಪರಿಸರ ಜೀವವೈವಿಧ್ಯ ರಾಜಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹೆಗಡೆ ಹೊಸಬಾಳೆ ಅವರು ನೆರವೇರಿಸಲಿದ್ದಾರೆ.
  • ​ಅಭಿನಂದನೆ: ಸಹಕಾರ ರತ್ನ ರಾಜಪ್ರಶಸ್ತಿ ಪುರಸ್ಕೃತರಾದ ಹರನಾಥ್ ರಾವ್ ಮತ್ತಿಕೊಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು.
  • ​ಅಭಿನಂದನಾ ನುಡಿ: ‘ನಮ್ಮ ಸಮಾಚಾರ’ ಪತ್ರಿಕೆಯ ಪ್ರಧಾನ ಸಂಪಾದಕರಾದ ಮಾಸಂ ನಂಜುಂಡಸ್ವಾಮಿ ಅವರು ನುಡಿಗಳನ್ನಾಡಲಿದ್ದಾರೆ.
  • ​ಮುಖ್ಯ ಅತಿಥಿ: ಪರಿಸರ ಜೀವವೈವಿಧ್ಯ ರಾಜಪ್ರಶಸ್ತಿ ಪುರಸ್ಕೃತರಾದ ದೀಪಕ್ ಸಾಗರ ಅವರು ಉಪಸ್ಥಿತರಿರಲಿದ್ದಾರೆ.

​ಐವರು ಪ್ರಗತಿಪರ ಕೃಷಿಕರಿಗೆ ಸನ್ಮಾನ

ಈ ಬಾರಿಯ ಮೇಳದಲ್ಲಿ ಕೃಷಿ ಕ್ಷೇತ್ರದಲ್ಲಿ ಸೂಕ್ಷ್ಮವಾಗಿ ತಂತ್ರಜ್ಞಾನ ಬಳಸಿ, ರಾಸಾಯನಿಕ ಮುಕ್ತ ಸಾವಯವ ಕೃಷಿ ಮಾಡಿ ಯಶಸ್ವಿಯಾದ ಹಾಗೂ ಉತ್ತಮ ಇಳುವರಿ ಪಡೆದ ಐದು ಜನ ಪ್ರಗತಿಪರ ಕೃಷಿಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ:

1. ಪಿ.ಎಂ.ಜೆ.ಎಫ್. ಲಯನ್ ನಾಗರಾಜ್ ಇ. (ಪ್ರಗತಿಪರ ಕೃಷಿಕರು): ತಮ್ಮ ಸುಮಾರು ೧೦೮ ಎಕರೆ ಅಡಿಕೆ ತೋಟದಲ್ಲಿ ಜಾಕಾಯಿ, ಲವಂಗ, ಏಲಕ್ಕಿ ಮುಂತಾದವುಗಳನ್ನು ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದಾರೆ.

2. ವಾಣಿಶ್ರೀ ನಾಗೇಂದ್ರ (ಸಾಗರ): ಕೃಷಿ ಕ್ಷೇತ್ರದಲ್ಲಿ ಮಹಿಳೆಯೂ ಸಾಧನೆ ಮಾಡಬಹುದು ಎಂಬುದನ್ನು ಇನ್ನೋವೇಟಿವ್ (ನಾವೀನ್ಯತೆ) ಆಲೋಚನೆಗಳ ಮೂಲಕ ನಿರೂಪಿಸಿದ ಪ್ರಗತಿಪರ ಮಹಿಳಾ ಕೃಷಿಕರು.

3. ಶಂಭು ಶಂಕರ್ ಶೆಟ್ಟಿ ಹೆಣಿಗೆರೆ: ಸಾವಿರಾರು ಕೃಷಿ ಭೂಮಿಯ ಮಣ್ಣು ಪರೀಕ್ಷೆ (Soil Test) ಮಾಡಿ ಕೃಷಿಕರಿಗೆ ಮಾರ್ಗದರ್ಶನ ನೀಡಿದ ಸಾಧಕರು.

4. ಕೆ.ಸಿ. ಮೂರ್ತಿ (ಸಾಗರ): ಪ್ರಗತಿಪರ ಕೃಷಿಕರು.

5. ಯೋಗಾನಂದ ಎನ್.ಪಿ. (ಸಾಗರ): ಪ್ರಗತಿಪರ ಕೃಷಿಕರು.

​ಜೂನ್ 6ರಂದು ಸಾಂಸ್ಕೃತಿಕ ಸೌರಭ

  • ​ಸಾಗರದ ಸ್ಥಳೀಯ ಕಲಾತಂಡಗಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಅಂದು ಸಂಜೆ ‘ರಸಸಂಜೆ ಕಲಾ ಸಿಂಚನ’ ಕಲಾತಂಡದ ಕಲಾವಿದರಿಂದ ಸುಗಮ ಸಂಗೀತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

​ಜೂನ್ 7ರಂದು ಜಾನಪದ ಕಲಾ ವೈಭವ ಮತ್ತು ಸಮಾರೋಪ

  • ​ಮಧ್ಯಾಹ್ನ 2:30 ರಿಂದ 4:೦೦ ಗಂಟೆಯವರೆಗೆ ಕರ್ನಾಟಕ ಜಾನಪದ ಪರಿಷತ್ ಕಲಾತಂಡದಿಂದ ಜಾನಪದ ಕಲಾ ಪ್ರದರ್ಶನ ಇರಲಿದೆ.
  • ​ಸಮಾರೋಪ ಸಮಾರಂಭ: ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದ ನುಡಿಗಳನ್ನು ದ್ವಿತೀಯ ಜಿಲ್ಲಾ ಉಪಗವರ್ನರ್ ಆದ ಪಿ.ಎಂ.ಜೆ.ಎಫ್. ಲಯನ್ ಅಶ್ವಿನಿ ಕುಮಾರ್ ಅವರು ನೆರವೇರಿಸಲಿದ್ದಾರೆ.
  • ​ವಿಶೇಷ ಆಹ್ವಾನಿತರು: 317C ನ ಜಿಲ್ಲಾ ಗವರ್ನರ್ ಆದ ಲಯನ್ ಸಪ್ನಾ ಸುರೇಶ್, 317H ನೂತನ ಜಿಲ್ಲೆಯ ಜಿಲ್ಲಾ ಗವರ್ನರ್ ಹರೀಶ್ ಶ್ರೀನಿವಾಸಮೂರ್ತಿ, ಲಯನ್ ಶಂಕರ್ ಬಿರಾದಾರ್ ಹಾಗೂ ಬೆಂಗಳೂರಿನ ಜೋಶಿ ಫೌಂಡೇಶನ್ ಅಧ್ಯಕ್ಷರಾದ ಅಕ್ಷಯ್ ದಿನೇಶ್ ಜೋಶಿ ಅವರು ಭಾಗವಹಿಸಲಿದ್ದಾರೆ.
  • ​ಮುಖ್ಯ ಅತಿಥಿಗಳು: ವೇದಿಕೆಯಲ್ಲಿ ಲಯನ್ ನಾಗರಾಜ್, ಲಯನ್ ಪಾಂಡುರಂಗ, ಲಯನ್ ಸುಧೀರ್ ಗೋಪಾಲ್ ಶೆಟ್ಟಿ ಅಕ್ಲಾಡಿ, ಲಯನ್ ಅಶೋಕ್ ಬೇಳೂರು, ಪ್ರಭಾಕರ್ ಜಿ.ಎನ್. ಹಾಗೂ ಲಯನ್ಸ್ ಸಂಸ್ಥೆಯ ಎಲ್ಲಾ ಪ್ರಮುಖ ಸದಸ್ಯರು ಉಪಸ್ಥಿತರಿರಲಿದ್ದಾರೆ.

​ಸಾರ್ವಜನಿಕರಿಗೆ ಮುಕ್ತ ಆಹ್ವಾನ:

“ಪ್ರತಿ ವರ್ಷವೂ ಲಯನ್ಸ್ ಕ್ಲಬ್ ಸಾಗರ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರು ದೊಡ್ಡ ಮಟ್ಟದ ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಿ. ಈ ಬಾರಿಯ ಹಲಸು ಮತ್ತು ಮಾವಿನ ಮೇಳಕ್ಕೂ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಮ್ಮ ಆತಿಥ್ಯವನ್ನು ಸ್ವೀಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿಸುತ್ತೇನೆ” ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರಸನ್ನ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಲಯನ್ ಗುರುಲಿಂಗ, ಲಯನ್ ಬಿ.ಹೆಚ್. ಲಿಂಗರಾಜು, ಎಂ.ಜೆ.ಎಫ್. ಲಯನ್ ಸುಧೀರ್ ಶೆಟ್ಟಿ, ಲಯನ್ ಪ್ರೇಮಾ ಕಿರಣ್ ಸಿಂಗ್, ಲಯನ್ ಸಂತೋಷ್ ಲಿಂಗನಮುಖಿ, ಲಯನ್ ಅನು ಪಲ್ಲವಿ ನಾಗರಾಜನ್, ರಾಜರತ್ನ ಇವೆಂಟ್ಸ್‌ನ ಶರತ್ ಹಾಗೂ ಜನಸ್ನೇಹಿ ಇವೆಂಟ್ಸ್‌ನ ಪ್ರಭಾಕರ್ ಮಂದರ್ಕಿ ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

BREAKING : ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯಗೆ ಅಧಿಕೃತ ಆಹ್ವಾನ ನೀಡಿದ ಡಿ.ಕೆ.ಶಿವಕುಮಾರ್

1 Min Read

BREAKING : ಸಚಿವ ಸ್ಥಾನ ಫಿಕ್ಸ್ : ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ಸಲ್ಲಿಕೆ.!

1 Min Read

BREAKING : ಡಿ.ಕೆ.ಶಿವಕುಮಾರ್ ಸಂಪುಟದ ನೂತನ ಸಚಿವರ ಪಟ್ಟಿ ಪ್ರಕಟ : ಯತೀಂದ್ರ ಸಿದ್ದರಾಮಯ್ಯಗೆ ಸ್ಥಾನ.!

1 Min Read
Recent News

BREAKING : ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯಗೆ ಅಧಿಕೃತ ಆಹ್ವಾನ ನೀಡಿದ ಡಿ.ಕೆ.ಶಿವಕುಮಾರ್

ಜೂನ್ 5 ರಿಂದ 7ರವರೆಗೆ ‘ಸಾಗರ ಲಯನ್ಸ್ ಕ್ಲಬ್‌’ನಿಂದ ಹಲಸು, ಮಾವಿನ ಮೇಳ ಆಯೋಜನೆ: ಅಧ್ಯಕ್ಷ ಡಾ.ಪ್ರಸನ್ನ

BREAKING : ಸಚಿವ ಸ್ಥಾನ ಫಿಕ್ಸ್ : ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ಸಲ್ಲಿಕೆ.!

BREAKING : ಡಿ.ಕೆ.ಶಿವಕುಮಾರ್ ಸಂಪುಟದ ನೂತನ ಸಚಿವರ ಪಟ್ಟಿ ಪ್ರಕಟ : ಯತೀಂದ್ರ ಸಿದ್ದರಾಮಯ್ಯಗೆ ಸ್ಥಾನ.!

State News
KARNATAKA

BREAKING : ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯಗೆ ಅಧಿಕೃತ ಆಹ್ವಾನ ನೀಡಿದ ಡಿ.ಕೆ.ಶಿವಕುಮಾರ್

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದಿನ ಮಹತ್ವದ ವಿದ್ಯಮಾನವೊಂದರಲ್ಲಿ, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.…

ಜೂನ್ 5 ರಿಂದ 7ರವರೆಗೆ ‘ಸಾಗರ ಲಯನ್ಸ್ ಕ್ಲಬ್‌’ನಿಂದ ಹಲಸು, ಮಾವಿನ ಮೇಳ ಆಯೋಜನೆ: ಅಧ್ಯಕ್ಷ ಡಾ.ಪ್ರಸನ್ನ

BREAKING : ಸಚಿವ ಸ್ಥಾನ ಫಿಕ್ಸ್ : ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ಸಲ್ಲಿಕೆ.!

BREAKING : ಡಿ.ಕೆ.ಶಿವಕುಮಾರ್ ಸಂಪುಟದ ನೂತನ ಸಚಿವರ ಪಟ್ಟಿ ಪ್ರಕಟ : ಯತೀಂದ್ರ ಸಿದ್ದರಾಮಯ್ಯಗೆ ಸ್ಥಾನ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.