ಚಿತ್ರದುರ್ಗ: ಇಲ್ಲಿನ ಇತಿಹಾಸ ಪ್ರಸಿದ್ಧ ರಂಗಯ್ಯನ ಬಾಗಿಲು ಬಳಿ ಇರುವ ಜಿಲ್ಲಾ ಯಾದವ (ಗೊಲ್ಲ) ಸಂಘದ ಪದಾಧಿಕಾರಿಗಳ ಆಯ್ಕೆಗೆ ಶನಿವಾರ ನಡೆದ ತೀವ್ರ ಕುತೂಹಲಕಾರಿ ಚುನಾವಣೆಯಲ್ಲಿ ಸಿ. ಮಹಲಿಂಗಪ್ಪ ನೇತೃತ್ವದ ಸಿಂಡಿಕೇಟ್ ಎಲ್ಲಾ ನಾಲ್ಕೂ ಪ್ರಮುಖ ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಅಭೂತಪೂರ್ವ ಜಯ ಸಾಧಿಸಿದೆ. ಈ ರೋಚಕ ಗೆಲುವಿನೊಂದಿಗೆ ‘ಮೀಸೆ’ ಮಹಲಿಂಗಪ್ಪ ಅವರು ಮತ್ತೊಮ್ಮೆ ಸಂಘದ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಸಂಘದ ಒಟ್ಟು 15 ನಿರ್ದೇಶಕರು ಈ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು. ಆರಂಭದಿಂದಲೂ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪ್ರಕ್ರಿಯೆಯಲ್ಲಿ ಮಹಲಿಂಗಪ್ಪ ಅವರ ಪ್ಯಾನಲ್ ಸ್ಪಷ್ಟ ಮೇಲುಗೈ ಸಾಧಿಸಿತು. ಕೇವಲ ಒಂದು ಮತದ ಅಂತರದಿಂದ ಪ್ರತಿ ಸ್ಥಾನದಲ್ಲೂ ಎದುರಾಳಿಗಳು ಪರಾಭವಗೊಂಡಿರುವುದು ಚುನಾವಣೆಯ ಕಣ ಎಷ್ಟು ಬಿಸಿಯಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.

ಪದಾಧಿಕಾರಿಗಳ ವಿವರ ಮತ್ತು ಮತಗಳ ಹಂಚಿಕೆ:
ಪ್ರತಿಯೊಂದು ಸ್ಥಾನದಲ್ಲೂ ತಲಾ 8 ಮತಗಳನ್ನು ಪಡೆಯುವ ಮೂಲಕ ಮಹಲಿಂಗಪ್ಪ ಸಿಂಡಿಕೇಟ್ ಅದ್ಭುತ ಒಗ್ಗಟ್ಟಿನ ಪ್ರದರ್ಶನ ನೀಡಿದೆ. ಫಲಿತಾಂಶದ ವಿವರ ಹೀಗಿದೆ:
-
ಅಧ್ಯಕ್ಷ ಸ್ಥಾನ: ಹಾಲಿ ಅಧ್ಯಕ್ಷ ಸಿ. ಮಹಲಿಂಗಪ್ಪ (ಮೀಸೆ ಮಹಲಿಂಗಪ್ಪ) ಅವರು 8 ಮತಗಳನ್ನು ಪಡೆಯುವ ಮೂಲಕ ತಮ್ಮ ತೀವ್ರ ಪ್ರತಿಸ್ಪರ್ಧಿ ವೀರೇಶ್ (7 ಮತ) ಅವರ ವಿರುದ್ಧ ಜಯಭೇರಿ ಬಾರಿಸಿದರು.
-
ಉಪಾಧ್ಯಕ್ಷ ಸ್ಥಾನ: ಬಿ.ಆರ್. ರಾಮಲಿಂಗಯಾದವ್ ಅವರು 8 ಮತಗಳನ್ನು ಗಳಿಸಿ, ಎ. ಚಿತ್ತಪ್ಪ (7 ಮತ) ಅವರನ್ನು ಪರಾಭವಗೊಳಿಸಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದರು.
-
ಕಾರ್ಯದರ್ಶಿ ಸ್ಥಾನ: ಎನ್. ಕಿರಣ್ ಕುಮಾರ್ ಯಾದವ್ ಅವರು 8 ಮತಗಳ ಬೆಂಬಲದೊಂದಿಗೆ ಎದುರಾಳಿ ಅಶೋಕ (7 ಮತ) ಅವರ ವಿರುದ್ಧ ಗೆಲುವಿನ ನಗೆ ಬೀರಿದರು.
-
ಖಜಾಂಚಿ ಸ್ಥಾನ: ಬೂದಿಹಳ್ಳಿ ರಾಜಣ್ಣ ಅವರು 8 ಮತಗಳನ್ನು ಪಡೆದು, ಆಕಾರ್ಶ್ (7 ಮತ) ಅವರ ಸವಾಲನ್ನು ಮೆಟ್ಟಿ ನಿಂತು ಖಜಾಂಚಿಯಾಗಿ ನಿಯುಕ್ತರಾದರು.
ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣಾ ವೇಳಾಪಟ್ಟಿ
ಗ್ರೇಡ್ 1 ತಹಶಿಲ್ದಾರ್ ಗೋವಿಂದರಾಜ್ ಹಾಗೂ ಗ್ರೇಡ್ 2 ತಹಶಿಲ್ದಾರ್ ನಾಗರಾಜ್ ಅವರು ಚುನಾವಣಾ ಅಧಿಕಾರಿಗಳಾಗಿ ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಿಕೊಟ್ಟರು. ಕೇವಲ ಕೆಲವು ಗಂಟೆಗಳ ಅವಧಿಯಲ್ಲಿ ಇಡೀ ಪ್ರಕ್ರಿಯೆ ಮುಕ್ತಾಯಗೊಂಡಿತು:

-
ಬೆಳಗ್ಗೆ 10:00 ರಿಂದ 12:00: ನಾಮಪತ್ರ ಸಲ್ಲಿಕೆ
-
ಮಧ್ಯಾಹ್ನ 12:00 ರಿಂದ 12:15: ನಾಮಪತ್ರಗಳ ಪರಿಶೀಲನೆ
-
ಮಧ್ಯಾಹ್ನ 12:15 ರಿಂದ 12:45: ನಾಮಪತ್ರ ಹಿಂಪಡೆಯುವಿಕೆ
-
ಮಧ್ಯಾಹ್ನ 1:00 ರಿಂದ 1:30: ಬಿರುಸಿನ ಮತದಾನ
-
ಮಧ್ಯಾಹ್ನ 1:30 ರ ನಂತರ: ಮತ ಎಣಿಕೆ ಹಾಗೂ ಅಧಿಕೃತ ಫಲಿತಾಂಶ ಪ್ರಕಟಣೆ.
ವಿಜೇತ ಮತ್ತು ಪರಾಜಿತ ನಿರ್ದೇಶಕರ ಪಟ್ಟಿ:

ಈ ಚುನಾವಣೆಯಲ್ಲಿ ಪಾಲ್ಗೊಂಡಿದ್ದ ಒಟ್ಟು 15 ನಿರ್ದೇಶಕರು ಎರಡು ಬಣಗಳಲ್ಲಿ ಗುರುತಿಸಿಕೊಂಡಿದ್ದರು:
-
ಮಹಲಿಂಗಪ್ಪ ಬಣ (ವಿಜೇತರು): ಸಿ. ಮಹಲಿಂಗಪ್ಪ, ಕಿರಣ್ ಕುಮಾರ್ ಯಾದವ್, ರಾಮಲಿಂಗಯಾದವ್ ಬಿ.ಆರ್., ಬೂದಿಹಳ್ಳಿ ರಾಜಣ್ಣ, ಕೆ. ರವಿ, ವೀರಣ್ಣ, ತಮ್ಮಣ್ಣ ಹಾಗೂ ಚಿಕ್ಕಣ್ಣ ಕೆ.
-
ಪ್ರತಿಪಕ್ಷ ಬಣ: ಅಶೋಕ, ವೀರೇಶ್, ಆಕಾರ್ಶ್, ಎ. ಚಿತ್ತಪ್ಪ, ಬಿ.ಡಿ. ಬಸವರಾಜ್, ರಮೇಶ ಮತ್ತು ಪ್ರಕಾಶ ಮುಂಗಸುವಳ್ಳಿ.
ಅಭಿಮಾನಿಗಳಿಂದ ಭರ್ಜರಿ ವಿಜಯೋತ್ಸವ:

ಸಿಂಡಿಕೇಟ್‌ನ ಭರ್ಜರಿ ಗೆಲುವಿನ ಸುದ್ದಿ ಪ್ರಕಟವಾಗುತ್ತಿದ್ದಂತೆ ನೂತನ ಪದಾಧಿಕಾರಿಗಳ ಬೆಂಬಲಿಗರು ಜಯಘೋಷಗಳನ್ನು ಕೂಗುತ್ತಾ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷರಾದಂತ ರಾಜಣ್ಣ ಅವರು ನೂತನ ಅಧ್ಯಕ್ಷರಾದಂತ ಮೀಸೆ ಮಹಲಿಂಗಪ್ಪ ಹಾಗೂ ಪದಾಧಿಕಾರಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು. ಪ್ರಮುಖ ಮುಖಂಡರಾದ ರಾಜಶೇಖರ್, ಚಿಕ್ಜೆನಹಳ್ಳಿ ಶ್ರೀನಿವಾಸ್, ಗೋವಿಂದಪ್ಪ, ಅಜ್ಜಪ್ಪ, ನರಸಿಂಹಪ್ಪ, ತಮ್ಮಣ್ಣ, ಅರುಣ್, ಫಾಲ್ಗುಣಿಶ್, ಈರಣ್ಣ, ನವೀನ್ ಸೇರಿದಂತೆ ನೂರಾರು ಅಭಿಮಾನಿಗಳು ಹಾಜರಿದ್ದು ಸಿಹಿ ಹಂಚಿ ಸಂಭ್ರಮಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BREAKING: ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಅಕ್ರಮ ಅದಿರು ಸಾಗಣೆ ಪ್ರಕರಣ ಖುಲಾಸೆಗೊಳಿಸಿದ ಕೋರ್ಟ್!
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








