Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!

ಡಿ.ಕೆ.ಶಿವಕುಮಾರ್‌ಗೆ ಕರ್ನಾಟಕ ಮುಖ್ಯಮಂತ್ರಿ ಪಟ್ಟದ ಬಳಿಕ ಕೆಪಿಸಿಸಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ! | DK Shivakumar

BREAKING : ಡಿಕೆ ಶಿವಕುಮಾರ್ ಜೊತೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ 14 ಜನರ ಲೀಸ್ಟ್ ಔಟ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಿ.ಕೆ.ಶಿವಕುಮಾರ್‌ಗೆ ಕರ್ನಾಟಕ ಮುಖ್ಯಮಂತ್ರಿ ಪಟ್ಟದ ಬಳಿಕ ಕೆಪಿಸಿಸಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ! | DK Shivakumar
KARNATAKA

ಡಿ.ಕೆ.ಶಿವಕುಮಾರ್‌ಗೆ ಕರ್ನಾಟಕ ಮುಖ್ಯಮಂತ್ರಿ ಪಟ್ಟದ ಬಳಿಕ ಕೆಪಿಸಿಸಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ! | DK Shivakumar

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದ್ದು, ಮುಖ್ಯಮಂತ್ರಿ ಬದಲಾವಣೆಯ ಬೆನ್ನಲ್ಲೇ ಆಡಳಿತ ರೂಢ ಕಾಂಗ್ರೆಸ್ ಸರ್ಕಾರ ಹಾಗೂ ಕೆಪಿಸಿಸಿ ಹಂತದಲ್ಲಿ ಪ್ರಮುಖ ಹುದ್ದೆಗಳ ಭರ್ತಿ ಮತ್ತು ಪುನರ್ರಚನೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಇಂದು (ಶನಿವಾರ) ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ನೂತನ ನಾಯಕರಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಶೀಘ್ರದಲ್ಲೇ ಡಿಕೆಶಿ ಪದಗ್ರಹಣ: ಸಚಿವ ಸಂಪುಟ ಪುನರ್ರಚನೆ

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಡಿ.ಕೆ. ಶಿವಕುಮಾರ್‌ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಇದೇ ವೇಳೆ ಹೊಸ ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ಜಂಟಿಯಾಗಿ ನಡೆಯಲಿದೆ. ಈ ಹೊಸ ಬದಲಾವಣೆಯು ಸರ್ಕಾರ ಹಾಗೂ ಪಕ್ಷದ ಸಂಘಟನೆಯಲ್ಲಿ ಹೊಸ ಸಂಚಲನ ಮೂಡಿಸಿದೆ.

ಮುಖ್ಯಮಂತ್ರಿ ಬದಲಾವಣೆಯ ಬೆನ್ನಲ್ಲೇ ಸರ್ಕಾರಿ ಮಟ್ಟದಲ್ಲಿ ಹಲವು ಪ್ರಮುಖ ಹುದ್ದೆಗಳ ಬದಲಾವಣೆ ತರಂಗ ಸೃಷ್ಟಿಸಲಿದೆ:

  • ಉಪಮುಖ್ಯಮಂತ್ರಿ ಸ್ಥಾನದ ಭರ್ತಿ: ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಲಿದೆಯೇ ಅಥವಾ ಯಾರು ಈ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

  • ಸಭಾಧ್ಯಕ್ಷ ಹಾಗೂ ಸಚೇತಕರ ನೇಮಕ: ವಿಧಾನಸಭೆ ಸಭಾಧ್ಯಕ್ಷರ (Speaker) ಆಯ್ಕೆ, ಸರ್ಕಾರದ ಮುಖ್ಯ ಸಚೇತಕರ ನೇಮಕ ಹಾಗೂ ಶಾಸಕಾಂಗ ಪಕ್ಷದ ಕಾರ್ಯದರ್ಶಿ ನೇಮಕಾತಿಗಳು ಶೀಘ್ರದಲ್ಲೇ ನಡೆಯಲಿವೆ.

  • ನಿಗಮ-ಮಂಡಳಿಗಳ ಪುನರ್ರಚನೆ: ವಿವಿಧ ಪ್ರಭಾವಿ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಲ್ಲೂ ವ್ಯಾಪಕ ಬದಲಾವಣೆಗಳು ಆಗಲಿವೆ ಎಂದು ಮೂಲಗಳು ತಿಳಿಸಿವೆ.

ಹೊಸ ಕೆಪಿಸಿಸಿ ಅಧ್ಯಕ್ಷರ ಹುಡುಕಾಟ: 2028ರ ಚುನಾವಣೆಗೆ ತಾಲೀಮು!

ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕಾರಣ, ಶೀಘ್ರದಲ್ಲೇ ತಮ್ಮ ಪಕ್ಷದ ಜವಾಬ್ದಾರಿಗೆ ರಾಜೀನಾಮೆ ನೀಡಲಿದ್ದಾರೆ. ತದನಂತರ ಹೊಸ ಕೆಪಿಸಿಸಿ ಸಾರಥಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ.

ಪಕ್ಷದ ಸಂಘಟನೆಗೆ ಹೊಸ ರೂಪ ಮುಂದಿನ 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಇದಕ್ಕಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ, ಕೆಪಿಸಿಸಿ ಪ್ರಚಾರ ಸಮಿತಿ, ಸಂಘಟನಾ ವಿಭಾಗ ಹಾಗೂ ಸಮನ್ವಯ ಸಮಿತಿ ಹುದ್ದೆಗಳಿಗೆ ಹೊಸಬರ ನೇಮಕವಾಗಲಿದೆ. ಇದರೊಂದಿಗೆ ಕೆಲವು ಜಿಲ್ಲಾ ಕಾಂಗ್ರೆಸ್ ಘಟಕಗಳಲ್ಲೂ ಭಾರಿ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

Share. Facebook Twitter LinkedIn WhatsApp Email

Related Posts

ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!

2 Mins Read

BREAKING : ಡಿಕೆ ಶಿವಕುಮಾರ್ ಜೊತೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ 14 ಜನರ ಲೀಸ್ಟ್ ಔಟ್!

2 Mins Read

ಈಶ್ವರ್ ಖಂಡ್ರೆಗೆ ಒಲಿಯಲಿ ಡಿಸಿಎಂ ಪಟ್ಟ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ರಾಷ್ಟ್ರೀಯ ಯುವ ಘಟಕ ಆಗ್ರಹ

2 Mins Read
Recent News

ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!

ಡಿ.ಕೆ.ಶಿವಕುಮಾರ್‌ಗೆ ಕರ್ನಾಟಕ ಮುಖ್ಯಮಂತ್ರಿ ಪಟ್ಟದ ಬಳಿಕ ಕೆಪಿಸಿಸಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ! | DK Shivakumar

BREAKING : ಡಿಕೆ ಶಿವಕುಮಾರ್ ಜೊತೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ 14 ಜನರ ಲೀಸ್ಟ್ ಔಟ್!

ಖಾಲಿವುಡ್ ನಟ ಅಜಿತ್ ಕುಮಾರ್ ತಾಯಿ ಮೋಹಿನಿ ಮಣಿ ವಿಧಿವಶ | Ajith Kumar Mother No More

State News
KARNATAKA

ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ರಾಮನಗರ: ರಾಜಕೀಯ ನಾಯಕರಿಗೆ ಅಭಿಮಾನಿಗಳು ಇರುವುದು ಸಾಮಾನ್ಯ. ಆದರೆ ಆ ಅಭಿಮಾನ ಕೆಲವೊಮ್ಮೆ ಭಕ್ತಿ, ಹರಕೆಯ ರೂಪ ತಾಳುತ್ತದೆ ಎಂಬುದಕ್ಕೆ…

ಡಿ.ಕೆ.ಶಿವಕುಮಾರ್‌ಗೆ ಕರ್ನಾಟಕ ಮುಖ್ಯಮಂತ್ರಿ ಪಟ್ಟದ ಬಳಿಕ ಕೆಪಿಸಿಸಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ! | DK Shivakumar

BREAKING : ಡಿಕೆ ಶಿವಕುಮಾರ್ ಜೊತೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ 14 ಜನರ ಲೀಸ್ಟ್ ಔಟ್!

ಈಶ್ವರ್ ಖಂಡ್ರೆಗೆ ಒಲಿಯಲಿ ಡಿಸಿಎಂ ಪಟ್ಟ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ರಾಷ್ಟ್ರೀಯ ಯುವ ಘಟಕ ಆಗ್ರಹ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.