Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಕಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳೆದುಕೊಂಡಿದ್ದೀರಾ? ಹೀಗೆ ಮಾಡಿದರೆ ನಿಮ್ಮ ಹಣ ವಾಪಸ್ ಬರುತ್ತೆ.!

SHOCKING : ಯುವಕನ ಬಲಿ ಪಡೆದ ಸಣ್ಣ ನಿರ್ಲಕ್ಷ್ಯ: ಹುಚ್ಚು ನಾಯಿ ಕಡಿತಕ್ಕೆ 22 ವರ್ಷದ ಯುವಕ ದುರಂತ ಅಂತ್ಯ!

BREAKING : ಬೆಂಗಳೂರಲ್ಲಿ ಕಾಂಪೌಂಡ್ ಕುಸಿತಕ್ಕೆ ಮತ್ತೊಂದು ಬಲಿ : 17 ವರ್ಷದ ಬಾಲಕ ಸಾವು, ಇಬ್ಬರು ಕಾರ್ಮಿಕರಿಗೆ ಗಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಯುವಕನ ಬಲಿ ಪಡೆದ ಸಣ್ಣ ನಿರ್ಲಕ್ಷ್ಯ: ಹುಚ್ಚು ನಾಯಿ ಕಡಿತಕ್ಕೆ 22 ವರ್ಷದ ಯುವಕ ದುರಂತ ಅಂತ್ಯ!
KARNATAKA

SHOCKING : ಯುವಕನ ಬಲಿ ಪಡೆದ ಸಣ್ಣ ನಿರ್ಲಕ್ಷ್ಯ: ಹುಚ್ಚು ನಾಯಿ ಕಡಿತಕ್ಕೆ 22 ವರ್ಷದ ಯುವಕ ದುರಂತ ಅಂತ್ಯ!

By kannadanewsnow57

ಬಾಗಲಕೋಟೆ: ಜಾತ್ರೆಗೆಂದು ಹೋದ ಕಡೆಯಲ್ಲಿ ನಾಯಿ ಕಚ್ಚಿದ್ದನ್ನು ಗಂಭೀರವಾಗಿ ಪರಿಗಣಿಸದ ಯುವಕನೊಬ್ಬ, ಸೂಕ್ತ ಸಮಯದಲ್ಲಿ ಲಸಿಕೆ ಪಡೆಯದ ಕಾರಣ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೋಲಸಂಗಿ ಗ್ರಾಮದ ನಿವಾಸಿ ಪ್ರದೀಪ್ ಚಂದ್ರಶೇಖರ್ ಹಳೆರೊಳ್ಳಿ (22) ಎಂಬಾತನೇ ಈ ದುರ್ದೈವಿ. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಈ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಕಳೆದ ಮಾರ್ಚ್ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬನ್ನಿಕೇರಿ ಚಂದ್ರಾದೇವಿ ಜಾತ್ರೆಗೆ ಪ್ರದೀಪ್ ಹೋಗಿದ್ದನು. ಜನಜಂಗುಳಿಯ ನಡುವೆ ಈತನಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಆದರೆ, ಗಾಯವನ್ನು ಸಾಮಾನ್ಯ ಎಂದು ಭಾವಿಸಿದ ಪ್ರದೀಪ್, ರೇಬಿಸ್ ನಿರೋಧಕ ಲಸಿಕೆ (Anti-Rabies Vaccine) ಪಡೆದುಕೊಳ್ಳದೆ ಬೇಜವಾಬ್ದಾರಿತನ ತೋರಿದ್ದ ಎನ್ನಲಾಗಿದೆ.

ನಾಯಿ ಕಚ್ಚಿದ ಹಲವು ದಿನಗಳ ಬಳಿಕ ಪ್ರದೀಪ್ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ರೇಬಿಸ್ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ವಾರದ ಹಿಂದೆ ಆತನನ್ನು ಮೊದಲು ನಿಡಗುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಕೈಮೀರುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರು ಪ್ರಾಣ ಉಳಿಸಲು ತೀವ್ರ ಪ್ರಯತ್ನ ನಡೆಸಿದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಯುವಕ ಕೊನೆಯುಸಿರೆಳೆದಿದ್ದಾನೆ.

ಗಮನಿಸಿ: ನಾಯಿ, ಬೆಕ್ಕು ಅಥವಾ ಯಾವುದೇ ಪ್ರಾಣಿ ಕಚ್ಚಿದಾಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಲಸಿಕೆ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ರೇಬಿಸ್‌ನಂತಹ ಮಾರಣಾಂತಿಕ ಕಾಯಿಲೆಗೆ ಜೀವವೇ ಬಲಿಯಾಗಬಹುದು.

SHOCKING: A young man's victim of a small negligence: A 22-year-old man dies tragically after being bitten by a mad dog!
Share. Facebook Twitter LinkedIn WhatsApp Email

Related Posts

ನಕಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳೆದುಕೊಂಡಿದ್ದೀರಾ? ಹೀಗೆ ಮಾಡಿದರೆ ನಿಮ್ಮ ಹಣ ವಾಪಸ್ ಬರುತ್ತೆ.!

2 Mins Read

BREAKING : ಬೆಂಗಳೂರಲ್ಲಿ ಕಾಂಪೌಂಡ್ ಕುಸಿತಕ್ಕೆ ಮತ್ತೊಂದು ಬಲಿ : 17 ವರ್ಷದ ಬಾಲಕ ಸಾವು, ಇಬ್ಬರು ಕಾರ್ಮಿಕರಿಗೆ ಗಾಯ

1 Min Read

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

2 Mins Read
Recent News

ನಕಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳೆದುಕೊಂಡಿದ್ದೀರಾ? ಹೀಗೆ ಮಾಡಿದರೆ ನಿಮ್ಮ ಹಣ ವಾಪಸ್ ಬರುತ್ತೆ.!

SHOCKING : ಯುವಕನ ಬಲಿ ಪಡೆದ ಸಣ್ಣ ನಿರ್ಲಕ್ಷ್ಯ: ಹುಚ್ಚು ನಾಯಿ ಕಡಿತಕ್ಕೆ 22 ವರ್ಷದ ಯುವಕ ದುರಂತ ಅಂತ್ಯ!

BREAKING : ಬೆಂಗಳೂರಲ್ಲಿ ಕಾಂಪೌಂಡ್ ಕುಸಿತಕ್ಕೆ ಮತ್ತೊಂದು ಬಲಿ : 17 ವರ್ಷದ ಬಾಲಕ ಸಾವು, ಇಬ್ಬರು ಕಾರ್ಮಿಕರಿಗೆ ಗಾಯ

ಇರಾನ್‌ನ ಸಮೃದ್ಧ ಯುರೇನಿಯಂ ಅನ್ನು ಅಮೆರಿಕಕ್ಕೆ ಒಪ್ಪಿಸಬೇಕು ಇಲ್ಲವೇ ಧ್ವಂಸಗೊಳಿಸಬೇಕು: ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!

State News
KARNATAKA

ನಕಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳೆದುಕೊಂಡಿದ್ದೀರಾ? ಹೀಗೆ ಮಾಡಿದರೆ ನಿಮ್ಮ ಹಣ ವಾಪಸ್ ಬರುತ್ತೆ.!

By kannadanewsnow57 KARNATAKA 2 Mins Read

ಬೆಂಗಳೂರು: ದೇಶಾದ್ಯಂತ ಡಿಜಿಟಲ್ ಪಾವತಿಗಳು ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದ್ದು, ಯುಪಿಐ (UPI) ಆಧಾರಿತ ಕ್ಯೂಆರ್ ಕೋಡ್ (QR Code) ಪಾವತಿಗಳು…

SHOCKING : ಯುವಕನ ಬಲಿ ಪಡೆದ ಸಣ್ಣ ನಿರ್ಲಕ್ಷ್ಯ: ಹುಚ್ಚು ನಾಯಿ ಕಡಿತಕ್ಕೆ 22 ವರ್ಷದ ಯುವಕ ದುರಂತ ಅಂತ್ಯ!

BREAKING : ಬೆಂಗಳೂರಲ್ಲಿ ಕಾಂಪೌಂಡ್ ಕುಸಿತಕ್ಕೆ ಮತ್ತೊಂದು ಬಲಿ : 17 ವರ್ಷದ ಬಾಲಕ ಸಾವು, ಇಬ್ಬರು ಕಾರ್ಮಿಕರಿಗೆ ಗಾಯ

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.