ಬೆಂಗಳೂರು: ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ ಎಂಬ ಘೊಷವಾಕ್ಯದಡಿಯಲ್ಲಿ ದೇಶದಲ್ಲೇ ಪ್ರಥಮವಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಈ ಕಾರ್ಯ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬೆಂಬಲ, ಪ್ರೋತ್ಸಾಹದೊಂದಿಗೆ ಈ ಯೋಜನೆ ಜಾರಿಗೆ ಬಂದಿದೆ. ಅತ್ಯಾಧುನಿಕ ಕಮಾಂಡ್ ಮತ್ತು ಕಂಟ್ರೋಲ್ ರೂಂ ಸ್ಥಾಪನೆ. 2008 ರಲ್ಲಿ ಜನರ ಅನುಕೂಲಕ್ಕಾಗಿ 108 ಸೇವೆ ಪ್ರಾರಂಭಿಸಲಾಗಿತ್ತು. ಈವರೆಗೆ ಖಾಸಗಿ ಸಂಸ್ಥೆ ಇದನ್ನು ನಡೆಸುತ್ತಿತ್ತು. ಹಲವಾರು ಸಮಸ್ಯೆಗಳು ಇದ್ದವು. 25-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಇದನ್ನು ಉನ್ನತೀಕರಣ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಂತರ ಸರ್ಕಾರವೇ ಇದನ್ನು ನಡೆಸಬೇಕು. ಅತ್ಯಾಧುನಿಕ ವ್ಯವಸ್ಥೆ ಅಳವಡಿಸಬೇಕು ಎಂದು ತೀರ್ಮಾನಿಸಿ, ಹಲವಾರು ಮಾಡೆಲ್ ಗಳನ್ನು ಅಧ್ಯಯನ ಮಾಡಲಾಯಿತು. ಸಿಂಗಪೂರ್ ದೇಶದ ವ್ಯವಸ್ಥೆಯನ್ನೂ ಸಹ ಅಧ್ಯಯನ ಮಾಡಿ, ಸುಸಜ್ಜಿತಗೊಳಿಸಲು ಕಾರ್ಯೋನ್ಮುಖರಾದೆವು. ಈ ವ್ಯವಸ್ಥೆ ಯನ್ನು ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆ ಇದಕ್ಕೆ ಬೇಕಾದ ಸಾಪ್ಟವೇರ್ ಸಿದ್ಧಪಡಿಸಿದೆ. ಸುಸಜ್ಜಿತ 24/7 ಕಮಾಂಡ್ ಕಂಟ್ರೋಲ್ ರೂಂ ಕೆಲಸ ಮಾಡುತ್ತಿದೆ. ಈಗಿನ ಸುಧಾರಿತ ವ್ಯವಸ್ಥೆಯಲ್ಲಿ ಆಂಬುಲನ್ಸ್ ಟ್ರಾಕಿಂಗ್ ವ್ಯವಸ್ಥೆ ಇದೆ ಎಂದರು.
ಆಂಬುಲೆನ್ಸ್ ನಿಂದಲೇ MDT ಸಾಧನದ ಮೂಲಕ ತುರ್ತು ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಇಸಬಹುದು, ಆಸ್ಪತ್ರೆಗೂ ಸಂದೇಶ ನೀಡಿ ಸಕಲ ಸಿದ್ಧತೆ ಮಾಡಲು ಸಾಧ್ಯ. ರೋಗಿಯ ಸ್ಥಿತಿಯನ್ನು ಆಧರಿಸಿ ಯಾವ ಆಸ್ಪತ್ರೆ ಸೂಕ್ತ ಎಂದು ಅಲ್ಲಿಗೇ ಕಳುಹಿಸಲು ಸಾಧ್ಯ, ಪ್ಯೂಯಲ್ ಗೇಜ್ ಅಳವಡಿಸಿರುವುದರಿಂದ ಇಂಧನ ಬಳಕೆ ಮಾನಿಟರ್ ಮಾಡಲಾಗುವುದು. ರಾಜ್ಯದ ಎಲ್ಲ ಆಂಬುಲನ್ಸ್ ಗಳು ಇದರಡಿ ಕೆಲಸ ಮಾಡುತ್ತದೆ. ಕೇಂದ್ರೀಕೃತವಾಗಿ ಟೆಲಿ ಮನಸ್, ಇ ಸಂಜೀವಿನಿ, ಮಹಿಳಾ ಮತ್ತು ಮಕ್ಕಳ ಸಹಾಯವಾಣಿಯನ್ನು ಇದೊರೊಂದಿಗೆ ಜೋಡಿಸಲಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಸುರೇಶ್ ಕುಮಾರ್, ಪ್ರಿಯಾಕೃಷ್ಣ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಡಿಜಿಟಲ್ ಹೆಲ್ತ್ ಸೊಸೈಟಿ ನಿರ್ದೇಶಕ ವಿಪಿನ್ ಸಿಂಗ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ರಜನಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.








