ಬೆಂಗಳೂರು: ದೆಹಲಿ ವರಿಷ್ಠರಿಂದ ತಮಗೆ ಬುಲಾವ್ ಬಂದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ದೆಹಲಿಗೆ ಬರಲು ಆಹ್ವಾನ ನೀಡಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದೆ. ಆದರೆ, ಸಭೆಯ ಅಧಿಕೃತ ಕಾರ್ಯಸೂಚಿ (Agenda) ಏನೆಂಬುದು ನನಗೆ ತಿಳಿದಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನನಗೆ ಕರೆ ಮಾಡಿ ಸಭೆಯ ದಿನಾಂಕ ಮತ್ತು ಸಮಯವನ್ನು ತಿಳಿಸಿದ್ದಾರೆ” ಎಂದು ಹೇಳಿದರು.
ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಿಎಂ ಸ್ಥಾನದ ಕುರಿತು ಕೇಳಿಬರುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ರಾಜಕೀಯದಲ್ಲಿ ಇಂತಹ ಊಹಾಪೋಹಗಳು ಯಾವಾಗಲೂ ಇದ್ದೇ ಇರುತ್ತವೆ” ಎಂದು ಲಘುವಾಗಿ ತಳ್ಳಿಹಾಕಿದರು.
#WATCH | Bengaluru: Karnataka CM Siddaramaiah says, "I have been invited to Delhi. There is a meeting tomorrow at 11 AM; I do not know the agenda. Mr Venugopal called me to inform me about the date and time of the meeting…"
On the speculations around the CM post, he says,… pic.twitter.com/P5yBxV6VmE
— ANI (@ANI) May 25, 2026








