Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ನೀವು ಕುಡಿಯುವ ಪಾನೀಯದಲ್ಲಿರುವ ಐಸ್ ಕ್ಯೂಬ್ ಗಳು ಸುರಕ್ಷಿತವೇ? ಈ ರೀತಿ ಕಲುಷಿತ ಮಂಜುಗಡ್ಡೆ ಗುರುತಿಸಿ

BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಈ ರಸ್ತೆಗಳಲ್ಲಿ 60 ದಿನ ಸಂಚಾರ ನಿರ್ಬಂಧ.!

ಪಾದದ ಕೀಲುಗಳಲ್ಲಾಗುವ ಈ ಬದಲಾವಣೆಯೇ ಮಾರಣಾಂತಿಕ ಕಾಯಿಲೆಗಳ ಮುನ್ಸೂಚನೆ ಇರಬಹುದು, ಎಚ್ಚರ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಈ ರಸ್ತೆಗಳಲ್ಲಿ 60 ದಿನ ಸಂಚಾರ ನಿರ್ಬಂಧ.!
KARNATAKA

BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಈ ರಸ್ತೆಗಳಲ್ಲಿ 60 ದಿನ ಸಂಚಾರ ನಿರ್ಬಂಧ.!

By kannadanewsnow57

ಬೆಂಗಳೂರು: ರಾಜಧಾನಿಯ ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮರಾಜ ರಸ್ತೆಯ ನಾಲಾ ಕ್ರಾಸ್ ಬಳಿ ಜಿ.ಬಿ.ಎ ವತಿಯಿಂದ ಹಳೆಯ ಕಲ್ಲಿನ ಕಲ್ವರ್ಟ್ ಕಟ್ಟಡವನ್ನು ತೆರವುಗೊಳಿಸಿ, ಹೊಸದಾಗಿ ಆರ್.ಸಿ.ಸಿ ಕಲ್ವರ್ಟ್ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ವಾಹನ ಸವಾರರ ಸುಗಮ ಸಂಚಾರದ ದೃಷ್ಟಿಯಿಂದ ದಿನಾಂಕ 24.05.2026 ರಿಂದ ಜಾರಿಗೆ ಬರುವಂತೆ ಮುಂದಿನ 60 ದಿನಗಳ ಕಾಲ ಈ ಕೆಳಕಂಡ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಿ ಪೂರ್ವ ವಿಭಾಗದ ಸಂಚಾರ ಉಪ ಪೊಲೀಸ್ ಆಯುಕ್ತರಾದ ಸಾಹಿಲ್ ಬಾಗ್ಲಾ (ಐ.ಪಿ.ಎಸ್) ಅವರು ಆದೇಶ ಹೊರಡಿಸಿದ್ದಾರೆ.

ವಾಹನ ಸಂಚಾರ ನಿರ್ಬಂಧಿಸಲಾದ ರಸ್ತೆಗಳು:

ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದಿಂದ ನಾಲಾ ರಸ್ತೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಕಾಮರಾಜ ರಸ್ತೆಯ ಕೆ.ಆರ್ ರಸ್ತೆ – ಕಬ್ಬನ್ ರಸ್ತೆ ಜಂಕ್ಷನ್ನಿಂದ ಡಿಕ್ಕನ್ಸನ್ ಜಂಕ್ಷನ್ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಸಂಚಾರಕ್ಕೆ ಪರ್ಯಾಯ ಮಾರ್ಗಗಳು:
ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಬರುವವರಿಗೆ: ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ವಾಹನಗಳು, ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದು ವೀರಾಪಿಳ್ಳೆ ಸ್ಟ್ರೀಟ್ ಮೂಲಕ ನಾಗಮ್ಮ ದೇವಸ್ಥಾನದ ಹತ್ತಿರ ಎಡ ತಿರುವು ಪಡೆದು ಸೇಂಟ್ ಜಾನ್ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಹೋಗಬಹುದು.

ಕಬ್ಬನ್ ರಸ್ತೆ ಕಡೆಯಿಂದ ಬರುವವರಿಗೆ: ಕಬ್ಬನ್ ರಸ್ತೆ ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ವಾಹನಗಳು, ಕೆ.ಆರ್ ರಸ್ತೆ – ಕಬ್ಬನ್ ರಸ್ತೆ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕ ತೆರಳಿ ಮಣಿಪಾಲ್ ಜಂಕ್ಷನ್ ಹತ್ತಿರ ಎಡ ತಿರುವು ಪಡೆದು ಡಿಕ್ಕನ್ಸನ್ ರಸ್ತೆ ಮೂಲಕ ನೇರವಾಗಿ ತೆರಳಿ ಬ್ಲೂ-ಸ್ಟೋನ್ ಹತ್ತಿರ ಬಲ ತಿರುವು ಪಡೆದುಕೊಂಡು ಸೇಂಟ್ ಜಾನ್ ರಸ್ತೆಯ ಮೂಲಕ ಪುಲಕೇಶಿನಗರ ಹಾಗೂ ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.

ಡಿಕ್ಕನ್ಸನ್ ರಸ್ತೆ ಕಡೆಯಿಂದ ಬರುವವರಿಗೆ: ಡಿಕ್ಕನ್ಸನ್ ರಸ್ತೆ (ಅಲೀಸ್ ಜಂಕ್ಷನ್) ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಡಿಕ್ಕನ್ಸನ್ ರಸ್ತೆಯ ಮೂಲಕ ನೇರವಾಗಿ ಚಲಿಸಿ ಬ್ಲೂ-ಸ್ಟೋನ್ ಹತ್ತಿರ ಎಡ ತಿರುವು ಪಡೆದು ಸೇಂಟ್ ಜಾನ್ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಮನವಿ: ಈ ಅವಧಿಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.

"ಸಂಚಾರ ಸಲಹೆ/Traffic advisory" pic.twitter.com/UxydAkZeGe

— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 24, 2026

BREAKING: Attention Bengaluru motorists: Traffic restrictions on these roads for 60 days!
Share. Facebook Twitter LinkedIn WhatsApp Email

Related Posts

ಬೇಸಿಗೆಯಲ್ಲೂ ನಿಮ್ಮ ಮನೆಯ ಮನಿ ಪ್ಲಾಂಟ್ ಹಸಿರಾಗಿ ನಳನಳಿಸಬೇಕೇ? ಇಲ್ಲಿವೆ ನೋಡಿ 5 ಸೀಕ್ರೆಟ್ ಟಿಪ್ಸ್!

2 Mins Read

BREAKING : ನಾಳೆ ಬೆಳಿಗ್ಗೆ 11 ಗಂಟೆಗೆ ಹೈಕಮಾಂಡ್ ಜೊತೆ ಸಿಎಂ ಸಭೆ : ಕುತೂಹಲ ಮೂಡಿಸಿದ ರಾಜ್ಯ ರಾಜಕಾರಣ!

1 Min Read

ರೇಣುಕಾಸ್ವಾಮಿ ಕೊಲೆ ಕೇಸ್ : ದರ್ಶನ್ ಕೇಸ್ ವಿಚಾರಣೆ ನಡೆಸುತ್ತಿರುವ ಕೋರ್ಟ್, ಜಡ್ಜ್ ಬದಲಾವಣೆ!

1 Min Read
Recent News

ALERT : ನೀವು ಕುಡಿಯುವ ಪಾನೀಯದಲ್ಲಿರುವ ಐಸ್ ಕ್ಯೂಬ್ ಗಳು ಸುರಕ್ಷಿತವೇ? ಈ ರೀತಿ ಕಲುಷಿತ ಮಂಜುಗಡ್ಡೆ ಗುರುತಿಸಿ

BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಈ ರಸ್ತೆಗಳಲ್ಲಿ 60 ದಿನ ಸಂಚಾರ ನಿರ್ಬಂಧ.!

ಪಾದದ ಕೀಲುಗಳಲ್ಲಾಗುವ ಈ ಬದಲಾವಣೆಯೇ ಮಾರಣಾಂತಿಕ ಕಾಯಿಲೆಗಳ ಮುನ್ಸೂಚನೆ ಇರಬಹುದು, ಎಚ್ಚರ!

ಬೇಸಿಗೆಯಲ್ಲೂ ನಿಮ್ಮ ಮನೆಯ ಮನಿ ಪ್ಲಾಂಟ್ ಹಸಿರಾಗಿ ನಳನಳಿಸಬೇಕೇ? ಇಲ್ಲಿವೆ ನೋಡಿ 5 ಸೀಕ್ರೆಟ್ ಟಿಪ್ಸ್!

State News
KARNATAKA

BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಈ ರಸ್ತೆಗಳಲ್ಲಿ 60 ದಿನ ಸಂಚಾರ ನಿರ್ಬಂಧ.!

By kannadanewsnow57 KARNATAKA 2 Mins Read

ಬೆಂಗಳೂರು: ರಾಜಧಾನಿಯ ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮರಾಜ ರಸ್ತೆಯ ನಾಲಾ ಕ್ರಾಸ್ ಬಳಿ ಜಿ.ಬಿ.ಎ ವತಿಯಿಂದ ಹಳೆಯ…

ಬೇಸಿಗೆಯಲ್ಲೂ ನಿಮ್ಮ ಮನೆಯ ಮನಿ ಪ್ಲಾಂಟ್ ಹಸಿರಾಗಿ ನಳನಳಿಸಬೇಕೇ? ಇಲ್ಲಿವೆ ನೋಡಿ 5 ಸೀಕ್ರೆಟ್ ಟಿಪ್ಸ್!

BREAKING : ನಾಳೆ ಬೆಳಿಗ್ಗೆ 11 ಗಂಟೆಗೆ ಹೈಕಮಾಂಡ್ ಜೊತೆ ಸಿಎಂ ಸಭೆ : ಕುತೂಹಲ ಮೂಡಿಸಿದ ರಾಜ್ಯ ರಾಜಕಾರಣ!

ರೇಣುಕಾಸ್ವಾಮಿ ಕೊಲೆ ಕೇಸ್ : ದರ್ಶನ್ ಕೇಸ್ ವಿಚಾರಣೆ ನಡೆಸುತ್ತಿರುವ ಕೋರ್ಟ್, ಜಡ್ಜ್ ಬದಲಾವಣೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.