ಬೆಂಗಳೂರು: ರಾಜ್ಯದ ಜನತೆಗೆ ಆರೋಗ್ಯ ಇಲಾಖೆಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತುವುದು ಇನ್ನು ಬಹಳ ಸುಲಭ. ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು ವಿನೂತನ ವಾಟ್ಸಾಪ್ ಸೌಲಭ್ಯವನ್ನು ಜಾರಿಗೆ ತಂದಿದೆ.
ಏನಿದು ಹೊಸ ವ್ಯವಸ್ಥೆ? ನೀವು ದೂರು ನೀಡುವುದು ಹೇಗೆ?
ನಿಮ್ಮ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಯ ಕೊರತೆ ಇದೆಯೇ? ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆಯೇ? ಅಥವಾ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲವೇ? ಈ ಯಾವುದೇ ಸಮಸ್ಯೆಗಳಿದ್ದರೂ ನೀವು ನೇರವಾಗಿ ವಾಟ್ಸಾಪ್ ಮೂಲಕ ದೂರು ದಾಖಲಿಸಬಹುದು.
ಫೋಟೋ-ವಿಡಿಯೋ ಸಾಕ್ಷಿ: ಕೇವಲ ಮಾಹಿತಿ ಅಷ್ಟೇ ಅಲ್ಲದೆ, ಆಸ್ಪತ್ರೆಯ ಅವ್ಯವಸ್ಥೆಗೆ ಸಂಬಂಧಿಸಿದ ಫೋಟೋ ಅಥವಾ ವಿಡಿಯೋಗಳನ್ನು ಕೂಡ ನೀವು ವಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ.
ನೇರ ನಿಗಾ: ನೀವು ಕಳುಹಿಸುವ ಪ್ರತಿಯೊಂದು ಸಂದೇಶವನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೇ ಖುದ್ದಾಗಿ ಪರಿಶೀಲಿಸಿ, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಗೌಪ್ಯತೆ ಗ್ಯಾರಂಟಿ: ದೂರು ನೀಡುವ ಸಾರ್ವಜನಿಕರ ವಿವರ ಹಾಗೂ ಹೆಸರನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತದೆ.
ಗಮನಿಸಿ: ಈ ನಂಬರ್ಗೆ ಕೇವಲ ವಾಟ್ಸಾಪ್ ಸಂದೇಶಗಳನ್ನು (Messages) ಮಾತ್ರ ಕಳುಹಿಸಲು ಅವಕಾಶವಿದ್ದು, ಯಾವುದೇ ನಾರ್ಮಲ್ ಅಥವಾ ವಾಟ್ಸಾಪ್ ಕರೆಗಳನ್ನು (Calls) ಸ್ವೀಕರಿಸಲಾಗುವುದಿಲ್ಲ.
ಇಂದೇ ಈ ನಂಬರ್ ಸೇವ್ ಮಾಡಿಕೊಳ್ಳಿ!
ಸಾರ್ವಜನಿಕರು ಆಸ್ಪತ್ರೆಗಳ ಸುಧಾರಣೆಗೆ ಸಂಬಂಧಿಸಿದ ಸಲಹೆ ಅಥವಾ ದೂರುಗಳನ್ನು ಸಲ್ಲಿಸಲು ಈ ಕೆಳಗಿನ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು ಬಳಸಬಹುದು:
ಆರೋಗ್ಯ ಇಲಾಖೆ ಅಧಿಕೃತ ವಾಟ್ಸಾಪ್ ಸಂಖ್ಯೆ: 94498 43001
ಆರೋಗ್ಯ ಇಲಾಖೆಯಡಿ ಕುಂದುಕುರತೆ ಪರಿಹಾರಕ್ಕೆ ವಿನೂತನ ವ್ಯವಸ್ಥೆ.
ವಾಟ್ಸಾಪ್ ಮೂಲಕ ನಿಮ್ಮ ಸಮಸ್ಯೆಯನ್ನು ವರದಿ ಮಾಡಿ ಆರೋಗ್ಯ ಸೇವೆಗಳ ಸುಧಾರಣೆಗೆ ಸಹಕರಿಸಿ.@CMofKarnataka @DKShivakumar @KarnatakaVarthe pic.twitter.com/rCaMnW1lzg
— Karnataka Health Department (@DHFWKA) May 24, 2026








