Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ‘ಉಚಿತ ಚಿಕಿತ್ಸೆ’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ | Supreme Court

BIG NEWS : ದುಬಾರೆ ಬೆನ್ನಲ್ಲೆ, ಪನ್ಸೋಲಿ ಆನೆ ಬಿಡಾರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ‘ಉಚಿತ ಚಿಕಿತ್ಸೆ’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ | Supreme Court
INDIA

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ‘ಉಚಿತ ಚಿಕಿತ್ಸೆ’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ | Supreme Court

By kannadanewsnow57

ನವದೆಹಲಿ: “ದುಡ್ಡಿಲ್ಲ ಎಂಬ ಕಾರಣಕ್ಕೆ ಬಡವರಿಗೆ ಚಿಕಿತ್ಸೆ ಸಿಗದೇ ಇರಬಾರದು. ಸಾಮಾನ್ಯ ಜನರ ಆರೋಗ್ಯದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಖಾಸಗಿ ಆಸ್ಪತ್ರೆಗಳ ವಿರುದ್ಧ ಗುಡುಗಿದೆ. ಸರ್ಕಾರದಿಂದ ಕಡಿಮೆ ಬೆಲೆಗೆ ಜಾಗ (ಭೂಮಿ) ಪಡೆದುಕೊಂಡು, ಈಗ ಬಡವರಿಗೆ ಉಚಿತ ಸೇವೆ ನೀಡಲು ಹಿಂದೇಟು ಹಾಕುತ್ತಿರುವ ಆಸ್ಪತ್ರೆಗಳ ಆಡಳಿತ ಮಂಡಳಿಗೆ ನ್ಯಾಯಾಲಯ ಗಂಭೀರ ಎಚ್ಚರಿಕೆ ನೀಡಿದೆ.

ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಉಚಿತ ಚಿಕಿತ್ಸೆಯ ನಿಯಮಗಳೇನು?

ನ್ಯಾಯಾಲಯದ ಆದೇಶದ ಪ್ರಕಾರ, ಸರ್ಕಾರದ ಸಬ್ಸಿಡಿ ದರದಲ್ಲಿ ಜಾಗ ಪಡೆದ ಎಲ್ಲಾ ಕಾರ್ಪೊರೇಟ್ ಮತ್ತು ಖಾಸಗಿ ಆಸ್ಪತ್ರೆಗಳು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು:

25% ಒಪಿಡಿ ಉಚಿತ: ಹೊರರೋಗಿ ವಿಭಾಗಕ್ಕೆ (OPD) ಬರುವ ಶೇ. 25 ರಷ್ಟು ಬಡ ರೋಗಿಗಳಿಗೆ ಸಂಪೂರ್ಣ ಉಚಿತ ತಪಾಸಣೆ ನಡೆಸಬೇಕು.

10% ಬೆಡ್‌ಗಳು ಮೀಸಲು: ಒಳರೋಗಿ ವಿಭಾಗದಲ್ಲಿ (IPD) ಶೇ. 10 ರಷ್ಟು ಹಾಸಿಗೆಗಳನ್ನು ಆರ್ಥಿಕವಾಗಿ ಹಿಂದುಳಿದವರಿಗಾಗಿ ಕಾಯ್ದಿರಿಸಬೇಕು.

ಎಲ್ಲವೂ ಫ್ರೀ: ಈ ಉಚಿತ ಚಿಕಿತ್ಸೆಯ ಅಡಿಯಲ್ಲಿ ಕೇವಲ ಬೆಡ್ ಅಥವಾ ಕನ್ಸಲ್ಟೇಶನ್ ಮಾತ್ರವಲ್ಲದೆ, ಔಷಧಗಳು, ಲ್ಯಾಬ್ ಟೆಸ್ಟ್‌ಗಳು, ಆಪರೇಷನ್ ಸೇರಿದಂತೆ ಆಸ್ಪತ್ರೆಯ ಯಾವುದೇ ಶುಲ್ಕವನ್ನು ರೋಗಿಗಳಿಂದ ವಸೂಲಿ ಮಾಡುವಂತಿಲ್ಲ.

ದೆಹಲಿಯ 51 ಆಸ್ಪತ್ರೆಗಳಿಗೆ ಶಾಕ್: ಕೇವಲ ನಾಲ್ಕೇ ಆಸ್ಪತ್ರೆಗಳು ಫಿಟ್!

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಎನ್.ವಿ. ಅಂಜರಿಯಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಈ ಹಿಂದೆ ನ್ಯಾಯಾಂಗ ನಿಂದನೆ ನೋಟಿಸ್ ಪಡೆದಿದ್ದ ದೆಹಲಿಯ 51 ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 4 ಆಸ್ಪತ್ರೆಗಳು ಮಾತ್ರ ನಿಯಮ ಪಾಲಿಸುತ್ತಿವೆ ಎಂಬ ಆಘಾತಕಾರಿ ಸತ್ಯ ನ್ಯಾಯಾಲಯದ ಗಮನಕ್ಕೆ ಬಂದಿದೆ.

ನಿಯಮ ಪಾಲಿಸುತ್ತಿರುವ ಆ ‘ನಾಲ್ಕು’ ಪ್ರಾಮಾಣಿಕ ಆಸ್ಪತ್ರೆಗಳು:

ಅಮರ್ ಜ್ಯೋತಿ ಆಸ್ಪತ್ರೆ

ಭಗವತಿ ಆಸ್ಪತ್ರೆ

ವೇಣು ಐ ಇನ್‌ಸ್ಟಿಟ್ಯೂಟ್

ಜಿಯೋದಯ ಆಸ್ಪತ್ರೆ

ಉಳಿದ 47 ಆಸ್ಪತ್ರೆಗಳು ಸರ್ಕಾರದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸುಪ್ರೀಂ ಅಂಗಳ ತಲುಪಿದ ವರದಿ

ಕೋರ್ಟ್ ನೇಮಿಸಿದ್ದ ಹಿರಿಯ ವಕೀಲರಾದ ಸಂಜಯ್ ಜೈನ್ ಮತ್ತು ವಕೀಲ ನಿನಾದ್ ಲಾಡ್ ಅವರನ್ನೊಳಗೊಂಡ ‘ಅಮಿಕಸ್ ಕ್ಯೂರಿ’ ಸಮಿತಿಯು ಮೇ 10, 2026 ರಂದು ನ್ಯಾಯಾಲಯಕ್ಕೆ ಸುದೀರ್ಘ ವರದಿ ಸಲ್ಲಿಸಿತ್ತು. ದೆಹಲಿ ನಗರ ವಸತಿ ಸುಧಾರಣಾ ಮಂಡಳಿ (DUSIB) ಹಾಗೂ ಡಿಡಿಎ ನೀಡಿದ ಬಡವರ ದತ್ತಾಂಶಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳ ಕಳ್ಳಾಟವನ್ನು ಇದು ಬಯಲಿಗೆಳೆದಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EWS) ಉಚಿತ ಚಿಕಿತ್ಸೆ ಸಿಗುವಂತೆ ಮಾಡಲು ತಕ್ಷಣವೇ ಕಠಿಣ ನಿಯಮಾವಳಿಗಳನ್ನು (SOP) ರೂಪಿಸುವಂತೆ ದೆಹಲಿ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲದೆ, ಭೂ ಮಾಲೀಕತ್ವದ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಮುಖಂಡರೊಂದಿಗೆ ಉನ್ನತ ಮಟ್ಟದ ಜಂಟಿ ಸಭೆ ನಡೆಸಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶಿಸಿದೆ.

ಸುಪ್ರೀಂ ಕೋರ್ಟ್‌ನ ಈ ಖಡಕ್ ತೀರ್ಪು ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿರದೆ, ದೇಶಾದ್ಯಂತ ರಿಯಾಯಿತಿ ದರದಲ್ಲಿ ಜಾಗ ಪಡೆದು ವ್ಯಾಪಾರ ಮಾಡುತ್ತಿರುವ ನೂರಾರು ಕಾರ್ಪೊರೇಟ್ ಆಸ್ಪತ್ರೆಗಳ ನಿದ್ದೆಗೆಡಿಸಿರುವುದಂತೂ ನಿಜ.

BIG NEWS: 'Free treatment' for the poor in private hospitals mandatory: Supreme Court important order | Supreme Court
Share. Facebook Twitter LinkedIn WhatsApp Email

Related Posts

SHOCKING : ಪೋಷಕರೇ ಎಚ್ಚರ : ಬಿಸಿಲಿನ ತಾಪಕ್ಕೆ ಲಾಕ್ ಆಗಿದ್ದ ಕಾರಿನೊಳಗೆ ಸಿಲುಕಿ ಅಕ್ಕ-ತಂಗಿ ಸಾವು | WATCH VIDEO

2 Mins Read

BREAKING : ತಮಿಳುನಾಡಲ್ಲಿ ಟಿವಿಕೆ ಪಕ್ಷದ 21, ಕಾಂಗ್ರೆಸ್ಸಿನ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ

2 Mins Read

JOB ALERT : ರೈಲ್ವೇ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: 6,500ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

2 Mins Read
Recent News

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ‘ಉಚಿತ ಚಿಕಿತ್ಸೆ’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ | Supreme Court

BIG NEWS : ದುಬಾರೆ ಬೆನ್ನಲ್ಲೆ, ಪನ್ಸೋಲಿ ಆನೆ ಬಿಡಾರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ!

ರಾಜ್ಯದಲ್ಲಿ ಶಾಲಾ ಮೊದಲ ದಿನವನ್ನು ಸ್ಮರಣೀಯವಾಗಿಸಲು ಶಿಕ್ಷಣ ಇಲಾಖೆ ಸಿದ್ಧತೆ : ವಿಶೇಷ ಮಾರ್ಗಸೂಚಿ ಪ್ರಕಟ!

State News
KARNATAKA

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

By kannadanewsnow57 KARNATAKA 1 Min Read

ಬೆಂಗಳೂರು: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ‘ಅಂಗವಿಕಲರ ಮಾಸಾಶನ ಯೋಜನೆ’ಯನ್ನು…

BIG NEWS : ದುಬಾರೆ ಬೆನ್ನಲ್ಲೆ, ಪನ್ಸೋಲಿ ಆನೆ ಬಿಡಾರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ!

ರಾಜ್ಯದಲ್ಲಿ ಶಾಲಾ ಮೊದಲ ದಿನವನ್ನು ಸ್ಮರಣೀಯವಾಗಿಸಲು ಶಿಕ್ಷಣ ಇಲಾಖೆ ಸಿದ್ಧತೆ : ವಿಶೇಷ ಮಾರ್ಗಸೂಚಿ ಪ್ರಕಟ!

ಅಧಿಕಾರದ ಸೊಕ್ಕು ಮತ್ತು ದುರಹಂಕಾರದ ಮಾತುಗಳು ನಿಮ್ಮ ಸ್ಥಾನಕ್ಕೆ ಕಿಂಚಿತ್ತು ಗೌರವ ತರುವುದಿಲ್ಲ : ಡಿಕೆಶಿ ವಿರುದ್ಧ ಜೆಡಿಎಸ್ ವಾಗ್ದಾಳಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.