Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ ; ಇಂದು ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

BIG NEWS : ವೃದ್ಧಾಪ್ಯದಲ್ಲಿ ತಾಯಿಯ ಆರೈಕೆ ಮಗಳ ಜವಾಬ್ದಾರಿ : ಹೈಕೋರ್ಟ್ ಮಹತ್ವದ ತೀರ್ಪು | Karnataka High Court

ರಾಜ್ಯದ 7 ಜಿಲ್ಲೆಗಳಲ್ಲಿ ಮಳೆ ಅಬ್ಬರ: ಸಿಡಿಲು ಬಡಿದು ಇಬ್ಬರು ಸಾವು, ಜನಜೀವನ ಅಸ್ತವ್ಯಸ್ತ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ವೃದ್ಧಾಪ್ಯದಲ್ಲಿ ತಾಯಿಯ ಆರೈಕೆ ಮಗಳ ಜವಾಬ್ದಾರಿ : ಹೈಕೋರ್ಟ್ ಮಹತ್ವದ ತೀರ್ಪು | Karnataka High Court
KARNATAKA

BIG NEWS : ವೃದ್ಧಾಪ್ಯದಲ್ಲಿ ತಾಯಿಯ ಆರೈಕೆ ಮಗಳ ಜವಾಬ್ದಾರಿ : ಹೈಕೋರ್ಟ್ ಮಹತ್ವದ ತೀರ್ಪು | Karnataka High Court

By kannadanewsnow57

ಬೆಂಗಳೂರು: ತಾಯಿಯನ್ನು ನೋಡಿಕೊಳ್ಳುವುದು ಕೇವಲ ಸಾಮಾಜಿಕ ಅಥವಾ ನೈತಿಕ ಜವಾಬ್ದಾರಿಯಲ್ಲ, ಅದು ಕಾನೂನುಬದ್ಧ ಹೊಣೆಗಾರಿಕೆಯೂ ಹೌದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ವಯಸ್ಸಾದ ಕಾಲದಲ್ಲಿ ತಾಯಿಯನ್ನು ಕಡೆಗಣಿಸಿದ ಮಗಳ ನಡೆಯನ್ನು ತೀವ್ರವಾಗಿ ಖಂಡಿಸಿರುವ ನ್ಯಾಯಾಲಯ, ಮಗಳ ಹೆಸರಿಗೆ ವರ್ಗಾವಣೆಯಾಗಿದ್ದ ಆಸ್ತಿಯನ್ನು ಮರಳಿ ತಾಯಿಗೆ ನೀಡುವಂತೆ ಆದೇಶಿಸಿದೆ.

ಸುಮಾರು 62 ವರ್ಷದ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿ ಹೇಮಾ ಅವರು ತಾವು ಕಷ್ಟಪಟ್ಟು ಸಂಪಾದಿಸಿದ್ದ ಆಸ್ತಿಯನ್ನು, ವೃದ್ಧಾಪ್ಯದಲ್ಲಿ ಮಗಳು ಆರ್. ಪವಿತ್ರಾ ಮತ್ತು ಮಗ ಆರ್. ವೇಣುಗೋಪಾಲ್ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಅವರ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು.

ಆದರೆ, ಆಸ್ತಿ ಕೈ ಸೇರಿದ ಮೇಲೆ ಮಕ್ಕಳು ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಆಕೆಯನ್ನು ಬಾಡಿಗೆ ಮನೆಯಲ್ಲಿ ಇರುವಂತೆ ಮಾಡಿದ್ದರು. ಅಲ್ಲದೆ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ನೊಂದ ತಾಯಿ, ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007’ರ ಅಡಿಯಲ್ಲಿ ತಮಗೆ ನ್ಯಾಯ ಕೊಡಿಸುವಂತೆ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠವು ,ತಾಯಿಯನ್ನು ಕಡೆಗಣಿಸಿದ ಕಾರಣ, ಮಕ್ಕಳಿಗೆ ಮಾಡಿಕೊಡಲಾಗಿದ್ದ ದಾನಪತ್ರವನ್ನು ರದ್ದುಗೊಳಿಸಿ ಆಸ್ತಿಯನ್ನು ಮರಳಿ ತಾಯಿಯ ಹೆಸರಿಗೆ ನೋಂದಣಿ ಮಾಡಿಕೊಡುವ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಮಕ್ಕಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದಾನಪತ್ರದಲ್ಲಿ ‘ನೋಡಿಕೊಳ್ಳಬೇಕು’ ಎಂದು ಸ್ಪಷ್ಟವಾಗಿ ಬರೆಯದಿದ್ದರೂ, ಆಸ್ತಿ ನೀಡುವ ಹಿಂದೆ ಅಂತಹದೊಂದು ನಂಬಿಕೆ ಇರುತ್ತದೆ ಎಂಬುದು ಕಾನೂನಿನ ಆಶಯ” ಎಂದು ನ್ಯಾಯಾಲಯ ಹೇಳಿದೆ.

ಸ್ವಂತ ಮನೆಯಿದ್ದರೂ ವೃದ್ಧ ತಾಯಿಯನ್ನು ಬಾಡಿಗೆ ಮನೆಯಲ್ಲಿ ಇರುವಂತೆ ಮಾಡಿರುವುದು ಮಕ್ಕಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಪೀಠವು ತರಾಟೆಗೆ ತೆಗೆದುಕೊಂಡಿದೆ. ತಾಂತ್ರಿಕ ಕಾರಣಗಳನ್ನು ನೀಡಿ ಹಿರಿಯ ನಾಗರಿಕರ ಕಾಯ್ದೆಯ ಮೂಲ ಉದ್ದೇಶವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಮಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ಕಾನೂನು ಶ್ರೀರಕ್ಷೆಯಾಗಿ ನಿಂತಿದೆ.

BIG NEWS : Daughter's responsibility to take care of mother in old age : High Court's important decision Karnataka High Court
Share. Facebook Twitter LinkedIn WhatsApp Email

Related Posts

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ ; ಇಂದು ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

1 Min Read

ರಾಜ್ಯದ 7 ಜಿಲ್ಲೆಗಳಲ್ಲಿ ಮಳೆ ಅಬ್ಬರ: ಸಿಡಿಲು ಬಡಿದು ಇಬ್ಬರು ಸಾವು, ಜನಜೀವನ ಅಸ್ತವ್ಯಸ್ತ

1 Min Read

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

2 Mins Read
Recent News

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ ; ಇಂದು ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

BIG NEWS : ವೃದ್ಧಾಪ್ಯದಲ್ಲಿ ತಾಯಿಯ ಆರೈಕೆ ಮಗಳ ಜವಾಬ್ದಾರಿ : ಹೈಕೋರ್ಟ್ ಮಹತ್ವದ ತೀರ್ಪು | Karnataka High Court

ರಾಜ್ಯದ 7 ಜಿಲ್ಲೆಗಳಲ್ಲಿ ಮಳೆ ಅಬ್ಬರ: ಸಿಡಿಲು ಬಡಿದು ಇಬ್ಬರು ಸಾವು, ಜನಜೀವನ ಅಸ್ತವ್ಯಸ್ತ

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

State News
KARNATAKA

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ ; ಇಂದು ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

By kannadanewsnow57 KARNATAKA 1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಇಂದು ಅತ್ಯಂತ…

BIG NEWS : ವೃದ್ಧಾಪ್ಯದಲ್ಲಿ ತಾಯಿಯ ಆರೈಕೆ ಮಗಳ ಜವಾಬ್ದಾರಿ : ಹೈಕೋರ್ಟ್ ಮಹತ್ವದ ತೀರ್ಪು | Karnataka High Court

ರಾಜ್ಯದ 7 ಜಿಲ್ಲೆಗಳಲ್ಲಿ ಮಳೆ ಅಬ್ಬರ: ಸಿಡಿಲು ಬಡಿದು ಇಬ್ಬರು ಸಾವು, ಜನಜೀವನ ಅಸ್ತವ್ಯಸ್ತ

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.