Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

BREAKING: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ

ಸುವೇಂದು ಅಧಿಕಾರಿ ಆಪ್ತ ಸಹಾಯಕನ ಕೊಲೆ ಕೇಸ್: ಯುಪಿಐ ಪೇಮೆಂಟ್‌ನಿಂದ ಸಿಕ್ಕಿಬಿದ್ದ ಹಂತಕರು; ಬೆಳ್ಳಿಯ ಕಾರು ಮತ್ತು ಸಿಸಿಟಿವಿಯ ಆ ಒಂದು ಸುಳಿವು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ
KARNATAKA

BREAKING: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಭೂಮಾಪನ ಇಲಾಖೆಯಲ್ಲಿ ಲಭ್ಯವಿರುವ ಮೂಲ ದಾಖಲೆಗಳ ನಕಲುಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಾದ ಶುಲ್ಕವನ್ನು ಸರ್ಕಾರವು ಪರಿಷ್ಕರಿಸಿದೆ. ಈ ಮೊದಲು ವಿವಿಧ ನಮೂನೆಗಳ ನಕಲುಗಳಿಗೆ ದರ ವಸೂಲಿ ಮಾಡುವಲ್ಲಿ ಅಧೀನ ಕಚೇರಿಗಳಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಮತ್ತು ಏಕರೂಪದ ದರ ಜಾರಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖ ದಾಖಲೆಗಳು ಮತ್ತು ಪರಿಷ್ಕೃತ ದರ ಪಟ್ಟಿ

ಇಲಾಖೆಯು ಹೊರಡಿಸಿರುವ ಹೊಸ ಪಟ್ಟಿಯಂತೆ ವಿವಿಧ ದಾಖಲೆಗಳ ದರಗಳು ಈ ಕೆಳಗಿನಂತಿವೆ:

  • ಟಿಪ್ಪಣಿ ಅಥವಾ ಅಟ್ಲಾಸ್ ನಕಲು: ಪ್ರತಿ ಸರ್ವೆ ಅಥವಾ ಹಿಸ್ಸಾ ನಂಬರಿನ ನಕಲಿಗೆ ₹35.00.

  • ಆಕಾರಬಂದು ನಕಲು: ಪ್ರತಿ ಸರ್ವೆ ಅಥವಾ ಹಿಸ್ಸಾ ನಂಬರಿಗೆ ₹20.00.

  • ಹದ್ದುಬಸ್ತು ಸ್ಕೆಚ್ ಅಥವಾ ಪಿ.ಟಿ ಶೀಟ್: ಪ್ರತಿ ಸರ್ವೆ/ಹಿಸ್ಸಾ/ನಗರ ಸರ್ವೆ ನಂಬರಿಗೆ ₹35.00.

  • ನಕ್ಷೆಯ ವಿವರ: ನಕಾಶೆಯಲ್ಲಿ ಗುರುತಿಸಲಾದ ಪ್ರತಿ ಸರ್ವೆ ನಂಬರಿನ ನಕಲಿಗೆ ₹10.00.

  • ದಾಖಲೆಗಳ ಪ್ರತಿಗಳು: ನೋಟೀಸು ಕಾಪಿ, ಅರ್ಜಿಯ ನಕಲು, ಹೇಳಿಕೆ ಅಥವಾ ಮಹಜರು ಪ್ರತಿಗಳಿಗೆ ಪ್ರತಿ ಪುಟಕ್ಕೆ ₹10.00.

  • ಆದೇಶದ ನಕಲು: ಮೊದಲ 100 ಪದಗಳಿಗೆ ಅಥವಾ ಅದರ ಅಂಶಕ್ಕೆ ₹10.00 ಹಾಗೂ ನಂತರದ ಪ್ರತಿ 100 ಪದಗಳಿಗೆ ಹೆಚ್ಚುವರಿ ₹10.00 ಶುಲ್ಕವಿರುತ್ತದೆ.

  • ನಗರಮಾಪನ ದಾಖಲೆಗಳು: ಪಿ.ಆರ್. ಕಾರ್ಡ್ ನಕಲು (ಪ್ರತಿ ಕಾರ್ಡ್‌ಗೆ), ವಿಚಾರಣಾ ರಿಜಿಸ್ಟರ್ ಎಂಟ್ರಿ ಮತ್ತು ಫೀಲ್ಡ್ ಬುಕ್ ನಕಲುಗಳಿಗೆ ತಲಾ ₹30.00 ನಿಗದಿಪಡಿಸಲಾಗಿದೆ.

ವಿಶೇಷ ಸೂಚನೆಗಳು

ಗ್ರಾಮ ನಕಾಶೆ ಅಥವಾ ನಗರಮಾಪನ ಎಲ್.ಎ ನಕಾಶೆಯ ನಕಲು ವಿಸ್ತೀರ್ಣವು 500 ಚದರ ಇಂಚು ಮೀರಿದ್ದಲ್ಲಿ, ನಿಗದಿತ ದರದ ದುಪ್ಪಟ್ಟು ಹಣವನ್ನು ವಸೂಲಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಧಿಕೃತ ಜಾರಿ

ಈ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಆಯುಕ್ತರಾದ ವೆಂಕಟ್ ರಾಜಾ ಅವರು 2026ರ ಮೇ 11ರಂದು ಆದೇಶ ಹೊರಡಿಸಿದ್ದಾರೆ. ಇಲಾಖೆಯ ಎಲ್ಲಾ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ರವಾನಿಸಲಾಗಿದೆ.

ಇನ್ನು ಮುಂದೆ ಸಾರ್ವಜನಿಕರು ಭೂದಾಖಲೆಗಳ ನಕಲು ಪಡೆಯುವಾಗ ಈ ಪರಿಷ್ಕೃತ ಏಕರೂಪದ ದರಗಳನ್ನೇ ಪಾವತಿಸಬೇಕಾಗುತ್ತದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

1 Min Read

ಬೆಂಗಳೂರಿನಲ್ಲಿ ಭೀಕರ ದುರಂತ: ಶೆಡ್‌ಗೆ ಬೆಂಕಿ ಬಿದ್ದು ಇಬ್ಬರು ಕಂದಮ್ಮಗಳು ಜೀವಂತ ದಹನ!

1 Min Read

ಅಂಜನಾದ್ರಿಗೆ ದೇಣಿಗೆಯಾಗಿ ಬಂದ ಆಭರಣಗಳು ಚಿನ್ನ ಲೇಪಿತ: ಉದ್ಯಮಿಯಿಂದ 2.50 ಕೋಟಿ ಖರೀದಿಯ ಬಿಲ್ ರಿಲೀಸ್

2 Mins Read
Recent News

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

BREAKING: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ

ಸುವೇಂದು ಅಧಿಕಾರಿ ಆಪ್ತ ಸಹಾಯಕನ ಕೊಲೆ ಕೇಸ್: ಯುಪಿಐ ಪೇಮೆಂಟ್‌ನಿಂದ ಸಿಕ್ಕಿಬಿದ್ದ ಹಂತಕರು; ಬೆಳ್ಳಿಯ ಕಾರು ಮತ್ತು ಸಿಸಿಟಿವಿಯ ಆ ಒಂದು ಸುಳಿವು!

​ದೇಶದಲ್ಲಿ 60 ದಿನಗಳಿಗೆ ಆಗುವಷ್ಟು ಕಚ್ಚಾ ತೈಲ ಸಂಗ್ರಹ; ಎಲ್‌ಪಿಜಿ ದಾಸ್ತಾನು ಮಾತ್ರ ಕೇವಲ 45 ದಿನಕ್ಕೆ ಸೀಮಿತ!

State News
KARNATAKA

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಮೈಸೂರು: ಸುಬ್ರಹ್ಮಣ್ಯ ರಸ್ತೆ – , ಎಡಮಂಗಲ ವಿಭಾಗಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಗಳಿಗಾಗಿ ಮೊದಲು ನಿಯಂತ್ರಣ ಹಾಗೂ ಮರುನಿಗದಿಪಡಿಸಲಾಗಿದ್ದ ಕೆಳಕಂಡ…

BREAKING: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ

ಬೆಂಗಳೂರಿನಲ್ಲಿ ಭೀಕರ ದುರಂತ: ಶೆಡ್‌ಗೆ ಬೆಂಕಿ ಬಿದ್ದು ಇಬ್ಬರು ಕಂದಮ್ಮಗಳು ಜೀವಂತ ದಹನ!

ಅಂಜನಾದ್ರಿಗೆ ದೇಣಿಗೆಯಾಗಿ ಬಂದ ಆಭರಣಗಳು ಚಿನ್ನ ಲೇಪಿತ: ಉದ್ಯಮಿಯಿಂದ 2.50 ಕೋಟಿ ಖರೀದಿಯ ಬಿಲ್ ರಿಲೀಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.