ಮೈಸೂರು: ಸುಬ್ರಹ್ಮಣ್ಯ ರಸ್ತೆ – , ಎಡಮಂಗಲ ವಿಭಾಗಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಗಳಿಗಾಗಿ ಮೊದಲು ನಿಯಂತ್ರಣ ಹಾಗೂ ಮರುನಿಗದಿಪಡಿಸಲಾಗಿದ್ದ ಕೆಳಕಂಡ ರೈಲು ಸೇವೆಗಳನ್ನು ಇದೀಗ ಮರುಸ್ಥಾಪಿಸಿ, ಪರಿಷ್ಕರಿಸಲಾಗಿದೆ.
ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು, 15.04.2026 ರಿಂದ 04.06.2026ರವರೆಗೆ 35 ನಿಮಿಷಗಳ ನಿಯಂತ್ರಣ ಇರಲಿದೆ ಎಂದು ಮೊದಲು ತಿಳಿಸಲಾಗಿತ್ತು. ಇದೀಗ ಇದರಲ್ಲಿ ಪರಿಷ್ಕರಣೆ ಮಾಡಲಾಗಿದೆ ಈ ರೈಲು11.05.2026 ರಿಂದ 04.06.2026ರವರೆಗೆ ತನ್ನ ನಿಯಮಿತ ವೇಳಾಪಟ್ಟಿ ಮತ್ತು ನಿಗದಿತ ಮಾರ್ಗದಂತೆ ಸಂಚರಿಸಲಿದೆ.
ಇನ್ನು ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಮರುನಿಗದಿಪಡಿಸುವಿಕೆಯಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ 2026ರ ಏಪ್ರಿಲ್ 16, 18, 21, 23, 25, 28 ಮತ್ತು 30; ಮೇ 02, 05, 07, 09, 12, 14, 16, 19, 21, 23, 26, 28 ಮತ್ತು 30; ಹಾಗೂ ಜೂನ್ 02 ಮತ್ತು 04ರಂದು ಪ್ರಾರಂಭವಾಗುವ ಸಂಚಾರಗಳಿಗೆ ರೈಲನ್ನು 15 ನಿಮಿಷಗಳ ಕಾಲ ಮರುನಿಗದಿಪಡಿಸಲಾಗುತ್ತದೆ ಎಂದು ಅಧಿಸೂಚಿಸಲಾಗಿತ್ತು.
ಪರಿಷ್ಕೃತ ವ್ಯವಸ್ಥೆಯ ಪ್ರಕಾರ, ರೈಲು ಸಂಖ್ಯೆ 56630 ಅನ್ನು ಮೇ 12, 14, 16, 19, 21, 23, 26, 28 ಮತ್ತು 30, 2026 ಹಾಗೂ ಜೂನ್ 02 ಮತ್ತು 04, 2026ರಂದು ಪ್ರಾರಂಭವಾಗುವ ಸಂಚಾರಗಳಿಗೆ ಮರುಸ್ಥಾಪಿಸಲಾಗಿದ್ದು, ರೈಲು ತನ್ನ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.








