ಬೆಂಗಳೂರು: ವಿಶೇಷ ಚೇತನರಿಗೆ ಉದ್ಯೋಗಾವಕಾಶಗಳು ಹಾಗೂ ಕೌಶಲ್ಯಾಭಿವೃದ್ಧಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ‘ಆದಿದ್ವಾರ’ (Adidwara) ಎಂಬ ಹೊಸ ಅಪ್ಲಿಕೇಶನ್ ಅನ್ನು ಗುರುವಾರ ಬಿಡುಗಡೆ ಮಾಡಿದೆ.
ಅಸಿಸ್ಟೆಕ್ ಫೌಂಡೇಶನ್ (ATF) ಸಹಯೋಗದೊಂದಿಗೆ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಈ ಆಪ್ ಅನ್ನು ಲೋಕಾರ್ಪಣೆ ಮಾಡಿದರು.
ವಿಶೇಷ ಚೇತನರಿಗೆ (PwDs) ಸೂಕ್ತ ಉದ್ಯೋಗ ಮಾಹಿತಿ ನೀಡುವುದು ಮತ್ತು ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.ಇದೇ ವೇಳೆ, ಬರುವ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿಶೇಷ ಚೇತನರಿಗಾಗಿ ವಿಶೇಷ ‘ಉದ್ಯೋಗ ಮೇಳ’ ಆಯೋಜಿಸುವುದಾಗಿ ಸಚಿವರು ಘೋಷಿಸಿದರು.
ಲೋಗೋ ಅನಾವರಣ: ಇದೇ ಸಂದರ್ಭದಲ್ಲಿ ಮುಂಬರುವ ಉದ್ಯೋಗ ಮೇಳದ ಅಧಿಕೃತ ಲೋಗೋವನ್ನು ಸಹ ಅನಾವರಣಗೊಳಿಸಲಾಯಿತು. ಈ ಕ್ರಮವು ರಾಜ್ಯದ ವಿಶೇಷ ಚೇತನರ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡುವ ನಿರೀಕ್ಷೆಯಿದೆ.








