ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ (ಮೇ 6) ನಡೆದ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಸೋಲನ್ನಪ್ಪಿದರೂ, 22 ವರ್ಷದ ಕೂಪರ್ ಕಾನೋಲಿ ತಮ್ಮ ಸ್ಫೋಟಕ ಶತಕದ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಕೇವಲ 59 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ಗಳ ನೆರವಿನಿಂದ ಅಜೇಯ 107 ರನ್ ಗಳಿಸಿದ ಅವರು, ಐಪಿಎಲ್ ಇತಿಹಾಸದ ಪುಟ ಸೇರಿದ್ದಾರೆ.
23 ವರ್ಷ ತುಂಬುವ ಮೊದಲೇ ಐಪಿಎಲ್ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯೇತರ ಆಟಗಾರ ಎಂಬ ವಿಶ್ವದಾಖಲೆಯನ್ನು ಕಾನೋಲಿ ನಿರ್ಮಿಸಿದ್ದಾರೆ. ಈ ಹಿಂದೆ 2016ರಲ್ಲಿ ಕ್ವಿಂಟನ್ ಡಿ ಕಾಕ್ (23 ವರ್ಷ, 122 ದಿನ) ಈ ದಾಖಲೆ ಹೊಂದಿದ್ದರು.
ಐಪಿಎಲ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಸ್ಟ್ರೇಲಿಯಾ ಆಟಗಾರ ಎಂಬ ಕೀರ್ತಿಗೂ ಇವರು ಭಾಜನರಾಗಿದ್ದಾರೆ. 16 ವರ್ಷಗಳ ಹಿಂದೆ (2010ರಲ್ಲಿ) ಡೇವಿಡ್ ವಾರ್ನರ್ ಬರೆದಿದ್ದ ದಾಖಲೆಯನ್ನು ಇವರು ಅಳಿಸಿ ಹಾಕಿದ್ದಾರೆ.
ಪಂಜಾಬ್ ಕಿಂಗ್ಸ್ನ ಹೊಸ ದಾಖಲೆ: ತಮ್ಮ ಸಹ ಆಟಗಾರ ಪ್ರಭ್ಸಿಮ್ರನ್ ಸಿಂಗ್ ಅವರ ದಾಖಲೆಯನ್ನು ಮುರಿದ ಕಾನೋಲಿ, ಪಂಜಾಬ್ ಕಿಂಗ್ಸ್ ತಂಡದ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.








