Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಮಿಳುನಾಡಿನಲ್ಲಿ ವಿಜಯ್ ಪರ್ವಕ್ಕೆ ಕಾಂಗ್ರೆಸ್ ಸಾಥ್: ‘ದಳಪತಿ’ ಸರ್ಕಾರಕ್ಕೆ ಕೈ ಜೋಡಿಸಲಿರುವ ಹಸ್ತ; ಮ್ಯಾಜಿಕ್ ನಂಬರ್ ದಾಟಿದ ಟಿವಿಕೆ!

05/05/2026 8:40 PM

BREAKING: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಕೋರ್ಟ್ ತಡೆ; ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ – ಚುನಾವಣಾಧಿಕಾರಿ

05/05/2026 8:35 PM

BREAKING: ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ: ಮೂಲಗಳು

05/05/2026 8:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಕೋರ್ಟ್ ತಡೆ; ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ – ಚುನಾವಣಾಧಿಕಾರಿ
KARNATAKA

BREAKING: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಕೋರ್ಟ್ ತಡೆ; ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ – ಚುನಾವಣಾಧಿಕಾರಿ

By kannadanewsnow0905/05/2026 8:35 PM

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (ರಿ) 2026-31ನೇ ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆಯನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಜ್ಯ ಚುನಾವಣಾಧಿಕಾರಿಗಳಾದ ಮೆಹಬೂಬ್ ಪಾಷಾ ಮೂಲಿಮನಿ ಅವರು ಈ ಕುರಿತು ಮಂಗಳವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.

ನ್ಯಾಯಾಲಯದ ಮಧ್ಯಂತರ ಆದೇಶ

ಬೆಂಗಳೂರಿನ ಗೌರವಾನ್ವಿತ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಒಎಸ್ ಸಂಖ್ಯೆ: 3179/2026 ಪ್ರಕರಣದಲ್ಲಿ ನೀಡಿದ ಮಧ್ಯಂತರ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮೇ 2ರಂದು ನ್ಯಾಯಾಲಯವು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗಳ ಚುನಾವಣೆಯನ್ನು ನಡೆಸುವುದಕ್ಕೆ ತಡೆ ನೀಡಿತ್ತು. ಈ ಆದೇಶದ ಪ್ರತಿಯು ಮೇ 4ರಂದು ಚುನಾವಣಾಧಿಕಾರಿಗಳ ಕಚೇರಿಗೆ ತಲುಪಿದೆ.

ಯಥಾಸ್ಥಿತಿ ಕಾಪಾಡಲು ನಿರ್ದೇಶನ

ಚುನಾವಣಾಧಿಕಾರಿಗಳ ಆದೇಶದ ಪ್ರಮುಖ ಅಂಶಗಳು ಇಲ್ಲಿವೆ:

  • ಪ್ರಕ್ರಿಯೆ ಸ್ಥಗಿತ: ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಚುನಾವಣಾ ಆದೇಶಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ತಡೆ ನೀಡಲಾಗಿದ್ದು, ನ್ಯಾಯಾಲಯದ ಮುಂದಿನ ಆದೇಶದವರೆಗೂ ‘ಯಥಾಸ್ಥಿತಿ’ (Status Quo) ಕಾಪಾಡಲು ಸೂಚಿಸಲಾಗಿದೆ.

  • ದಾಖಲೆಗಳ ಸುರಕ್ಷತೆ: ಎಲ್ಲಾ ಹಂತದ ಚುನಾವಣಾಧಿಕಾರಿಗಳು ಇದುವರೆಗೆ ನಡೆದ ಪ್ರಕ್ರಿಯೆಗಳ ನಾಮಪತ್ರಗಳು, ಎಣಿಕೆಗೊಂಡ ಮತಪತ್ರಗಳು ಸೇರಿದಂತೆ ಎಲ್ಲಾ ಚುನಾವಣಾ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ (Sealed Cover) ಸೂಕ್ತ ರಕ್ಷಣೆಯಲ್ಲಿಡಬೇಕು ಎಂದು ಆದೇಶಿಸಲಾಗಿದೆ.

  • ವ್ಯಾಪ್ತಿ: ಈ ಆದೇಶವು ಸಂಘದ ತಾಲ್ಲೂಕು, ವಿಶೇಷ/ಯೋಜನಾ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಎಲ್ಲಾ ಪದಾಧಿಕಾರಿಗಳ ಚುನಾವಣೆಗೆ ಅನ್ವಯಿಸುತ್ತದೆ.

ಚುನಾವಣಾ ಘಟನಾವಳಿಗಳ ಹಿನ್ನೆಲೆ

2026-31ರ ಐದು ವರ್ಷಗಳ ಅವಧಿಗಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲು ಏಪ್ರಿಲ್ ತಿಂಗಳಲ್ಲಿ ವಿವಿಧ ಸುತ್ತೋಲೆಗಳ ಮೂಲಕ ಕ್ರಮ ವಹಿಸಲಾಗಿತ್ತು. ಆದರೆ, ಈಗ ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಶಿಕ್ಷಕರ ಸಂಘದ ಚುನಾವಣಾ ಕಣವು ತಾತ್ಕಾಲಿಕವಾಗಿ ತಣ್ಣಗಾಗಿದ್ದು, ಮುಂದಿನ ಹಾದಿಯು ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿತವಾಗಿದೆ.

ಈ ಆದೇಶದ ಪ್ರತಿಗಳನ್ನು ರಾಜ್ಯದ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳಿಗೆ ಹಾಗೂ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿಗಾಗಿ ರವಾನಿಸಲಾಗಿದೆ. ಒಂದು ವೇಳೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಚುನಾವಣಾ ಪ್ರಕ್ರಿಯೆಗಳನ್ನು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಡೆಸಿದ್ದೇ ಆದಲ್ಲಿ ನ್ಯಾಯಾಂಗ ನಿಂದನೆಗೆ ಒಳಗಾಗುವ ಎಚ್ಚರಿಕೆಯನ್ನು ಕೋರ್ಟ್ ನೀಡಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

BREAKING: ಖ್ಯಾತ ತಮಿಳು ಚಲನಚಿತ್ರ ನಿರ್ಮಾಪಕ ಆರ್.ಬಿ. ಚೌಧರಿ ಕಾರು ಅಪಘಾತದಲ್ಲಿ ನಿಧನ | RB Choudary No More

BREAKING: ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ: ಮೂಲಗಳು

Share. Facebook Twitter LinkedIn WhatsApp Email

Related Posts

Rain In Bengaluru: ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

05/05/2026 8:05 PM1 Min Read

ರೈತರು ಬಹುಬೆಳೆ ಬೇಸಾಯದತ್ತ ಗಮನ ಹರಿಸಲಿ: ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಕರೆ

05/05/2026 7:53 PM1 Min Read

ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ: 5.75 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ, ಇಬ್ಬರು ಅರೆಸ್ಟ್

05/05/2026 7:42 PM1 Min Read
Recent News

ತಮಿಳುನಾಡಿನಲ್ಲಿ ವಿಜಯ್ ಪರ್ವಕ್ಕೆ ಕಾಂಗ್ರೆಸ್ ಸಾಥ್: ‘ದಳಪತಿ’ ಸರ್ಕಾರಕ್ಕೆ ಕೈ ಜೋಡಿಸಲಿರುವ ಹಸ್ತ; ಮ್ಯಾಜಿಕ್ ನಂಬರ್ ದಾಟಿದ ಟಿವಿಕೆ!

05/05/2026 8:40 PM

BREAKING: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಕೋರ್ಟ್ ತಡೆ; ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ – ಚುನಾವಣಾಧಿಕಾರಿ

05/05/2026 8:35 PM

BREAKING: ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ: ಮೂಲಗಳು

05/05/2026 8:23 PM

ಐಟಿ ಉದ್ಯೋಗಿಗಳಿಗೆ ಶಾಕ್: ಕಾಗ್ನಿಜೆಂಟ್‌ನಿಂದ 15,000 ಮಂದಿ ವಜಾ ಸಾಧ್ಯತೆ; ಭಾರತದಲ್ಲೇ ಅತಿ ಹೆಚ್ಚು ಕೆಲಸಗಾರರಿಗೆ ಕುತ್ತು!

05/05/2026 8:21 PM
State News
KARNATAKA

BREAKING: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಕೋರ್ಟ್ ತಡೆ; ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ – ಚುನಾವಣಾಧಿಕಾರಿ

By kannadanewsnow0905/05/2026 8:35 PM KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (ರಿ) 2026-31ನೇ ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆಯನ್ನು…

Rain In Bengaluru: ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

05/05/2026 8:05 PM

ರೈತರು ಬಹುಬೆಳೆ ಬೇಸಾಯದತ್ತ ಗಮನ ಹರಿಸಲಿ: ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಕರೆ

05/05/2026 7:53 PM

ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ: 5.75 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ, ಇಬ್ಬರು ಅರೆಸ್ಟ್

05/05/2026 7:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.