ಮಡಿಕೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಮೊದಲನೆಯ ದೊಡ್ಡ ಜನರ ಸಂಕಲ್ಪ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ. ಅದು ನಮ್ಮ ಚುನಾವಣೆಯ ಪ್ರಾರಂಭ ಮತ್ತು ಕಾಂಗ್ರೆಸ್ನ ಅಂತ್ಯದ ಆರಂಭ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕೊಡಗಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮತ್ತೊಮ್ಮೆ ಪಧಾನಮಂತ್ರಿ ನರೇಂದಮೋದಿಯವರ ನೇತೃತ್ತದಲ್ಲಿ ಮುಂದಿನ ಚುನಾವಣೆಯನ್ನೂ ಗೆಲ್ಲುವಂತ ಶಕ್ತಿ ಈ ಚುನಾವಣೆ ನೀಡಿದೆ. ಅವರ ಕನಸಿನ ವಿಕಸಿತ ಭಾರತದ ಸಂಕಲ್ಪಕ್ಕೆ ಶಕ್ತಿ ನೀಡುವ ಸಂದೇಶ ಈ ಚುನಾವಣೆಯಲ್ಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ನಡೆದ ಎರಡು ಕ್ಷೇತಗಳ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಉತ್ತಮವಾದ ವಾತಾವರಣ ಇತ್ತು. ನಮ್ಮ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದರು. ಆದರೆ ಕೊನೆಯ ಎರಡು ದಿನ ಸಿಎಂ ಸಿದ್ದರಾಮಯ್ಯ ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಪಜಾಪಭುತ್ವಕ್ಕೆ ಒಪ್ಪುವಂತಹ ಕೆಲಸ ಅಲ್ಲ ಎಂದು ಹೇಳಿದರು.
BREAKING: ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲೇ ಅಪಾರ ಪ್ರಮಾಣದ ಚಿನ್ನ, ಹಣ ಪತ್ತೆ!
ದಾವಣಗೆರೆಯ ಅವಳಿ ಸಹೋದರಿಯರ ಅಪೂರ್ವ ಸಾಧನೆ: ಚಹರೆ ಮಾತ್ರವಲ್ಲ, ಪಿಯುಸಿ ಅಂಕಗಳೂ ಒಂದೇ!








