ಕೋಲ್ಕತ್ತಾ/ದಿಸ್ಪುರ:ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಆರಂಭಿಕ ಟ್ರೆಂಡ್ಗಳು ಉಭಯ ರಾಜ್ಯಗಳಲ್ಲಿ ಕುತೂಹಲಕಾರಿ ಚಿತ್ರಣವನ್ನು ನೀಡುತ್ತಿವೆ.
ಮಮತಾ ವರ್ಸಸ್ ಸುವೇಂದು ಜಿದ್ದಾಜಿದ್ದಿ
ಮುನ್ನಡೆ-ಹಿನ್ನಡೆ: ಆರಂಭಿಕ ಹಂತದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ನಂದಿಗ್ರಾಮ ಮತ್ತು ಕೋಲ್ಕತ್ತಾದ ಆಯಕಟ್ಟಿನ ಕ್ಷೇತ್ರಗಳಲ್ಲಿ ಮತಗಳ ಅಂತರ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ.
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ಅವರ ಪ್ರಭಾವವಿರುವ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿಕೂಟ ಕೆಲವು ಕಡೆಗಳಲ್ಲಿ ಅಚ್ಚರಿಯ ಮುನ್ನಡೆ ಸಾಧಿಸಿವೆ.
ಅಸ್ಸಾಂ: ಬಿಜೆಪಿ ಮೈತ್ರಿಕೂಟದ ಪ್ರಾಬಲ್ಯ
ಹಿಮಂತ ಹವಾ: ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಮೈತ್ರಿಕೂಟ ಆರಂಭಿಕ ಒಲವುಗಳಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟವು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಹೆಣಗಾಡುತ್ತಿದೆ.
ಮ್ಯಾಜಿಕ್ ನಂಬರ್: ಅಸ್ಸಾಂನ 126 ಕ್ಷೇತ್ರಗಳಲ್ಲಿ ಅಧಿಕಾರ ಸ್ಥಾಪಿಸಲು 64 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ ಮೈತ್ರಿಕೂಟ ಈಗಾಗಲೇ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಂದಿದೆ.







