ಮುಂಬೈ: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರು ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪಂದ್ಯದ ಸಂಭಾವನೆಯ ಶೇ 25ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ಅವರ ಶಿಸ್ತಿನ ವರದಿಗೆ ಒಂದು ‘ಡಿಮೆರಿಟ್ ಪಾಯಿಂಟ್’ ಕೂಡ ಸೇರ್ಪಡೆಯಾಗಿದೆ.
ಘಟನೆ ಏನು?
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಟಾಟಾ ಐಪಿಎಲ್ 2026ರ 40ನೇ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಎರಡನೇ ಇನಿಂಗ್ಸ್ ಸಮಯದಲ್ಲಿ ರಿಯಾನ್ ಪರಾಗ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ‘ವೇಪ್’ (Electronic Cigarette) ಬಳಸುತ್ತಿರುವುದು ಕಂಡುಬಂದಿತ್ತು. ಇದು ಕ್ರೀಡೆಯ ಘನತೆಗೆ ಕುಂದು ತರುವ ವರ್ತನೆಯೆಂದು ಪರಿಗಣಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ
ನಿಯಮ: ಐಪಿಎಲ್ ನೀತಿ ಸಂಹಿತೆಯ ವಿಧಿ 2.21ರ ಅಡಿಯಲ್ಲಿ “ಆಟದ ಗೌರವಕ್ಕೆ ಧಕ್ಕೆ ತರುವ ನಡವಳಿಕೆ” ಎಂಬ ಆರೋಪದ ಮೇಲೆ ಪರಾಗ್ ಅವರನ್ನು ದೋಷಿ ಎಂದು ನಿರ್ಧರಿಸಲಾಗಿದೆ.
What’s happening in the ipl ?#PBKS#RR@IPL @BCCI
Riyan parag is using vape 😱😱😱😓 pic.twitter.com/xVXhb0LKZW— Vansh Goyal (@vanshgoyal0674) April 28, 2026








