Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Exit Poll 2026: ದೀದಿ ಕೋಟೆಗೆ ಬಿಜೆಪಿ ಲಗ್ಗೆ, ಅಸ್ಸಾಂನಲ್ಲಿ ಕೇಸರಿ ಹ್ಯಾಟ್ರಿಕ್, ತಮಿಳುನಾಡಿನಲ್ಲಿ ಸ್ಟಾಲಿನ್ ಪಾರುಪತ್ಯ!

29/04/2026 8:14 PM

ಒಂದೇ ಹೆಲಿಕಾಪ್ಟರ್‌ನಿಂದ ಎರಡು ಕ್ಷಿಪಣಿ: ಭಾರತದ ಮೊದಲ ‘ಸಾಲ್ವೋ’ ಉಡಾವಣೆ ಸಕ್ಸಸ್

29/04/2026 8:11 PM

ಆಸ್ಟ್ರೇಲಿಯಾದಲ್ಲಿ ವಿಮಾನ ನಿಲ್ದಾಣದ ಹ್ಯಾಂಗರ್‌ಗೆ ಡಿಕ್ಕಿ ಹೊಡೆದ ವಿಮಾನ; ಇಬ್ಬರು ಸಾವು, ಹಲವರಿಗೆ ಗಂಭೀರ ಗಾಯ

29/04/2026 8:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳೆಯರೇ ಗಮನಿಸಿ : ಅಡುಗೆ ಮನೆಯಲ್ಲಿ ಈ ಬದಲಾವಣೆ ಮಾಡಿಕೊಂಡರೆ 90 ದಿನಗಳವರೆಗೆ ಬರಲಿದೆ ಗ್ಯಾಸ್ ಸಿಲಿಂಡರ್!
KARNATAKA

ಮಹಿಳೆಯರೇ ಗಮನಿಸಿ : ಅಡುಗೆ ಮನೆಯಲ್ಲಿ ಈ ಬದಲಾವಣೆ ಮಾಡಿಕೊಂಡರೆ 90 ದಿನಗಳವರೆಗೆ ಬರಲಿದೆ ಗ್ಯಾಸ್ ಸಿಲಿಂಡರ್!

By kannadanewsnow5728/04/2026 10:17 AM

ಬೆಂಗಳೂರು: ಜಾಗತಿಕವಾಗಿ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗಳು ಮತ್ತು ಇರಾನ್ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಇಂಧನ ಬಿಕ್ಕಟ್ಟು ಅಡುಗೆ ಮನೆಯ ಬಾಗಿಲನ್ನೂ ತಟ್ಟಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮತ್ತು ಕೊರತೆಯು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇಂತಹ ಸಮಯದಲ್ಲಿ ಗೃಹಿಣಿಯರು ಅಡುಗೆ ಮನೆಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಹಣವನ್ನು ಉಳಿಸುವುದಲ್ಲದೆ, ಗ್ಯಾಸ್ ಸಿಲಿಂಡರ್ ದೀರ್ಘಕಾಲ ಬಾಳಿಕೆ ಬರುವಂತೆ ಮಾಡಬಹುದು.

ಗ್ಯಾಸ್ ಉಳಿತಾಯ ಮಾಡಲು ಇಲ್ಲಿವೆ ಉಪಯುಕ್ತ ಸಲಹೆಗಳು:

1. ಅಡುಗೆಗೆ ಮುನ್ನವೇ ಸಿದ್ಧತೆ ಮಾಡಿಕೊಳ್ಳಿ
ಅನೇಕರು ಸ್ಟವ್ ಹಚ್ಚಿದ ನಂತರ ತರಕಾರಿ ಹೆಚ್ಚುವುದು ಅಥವಾ ಪದಾರ್ಥಗಳನ್ನು ಹುಡುಕುವುದನ್ನು ಮಾಡುತ್ತಾರೆ. ಇದು ಗ್ಯಾಸ್ ವ್ಯರ್ಥವಾಗಲು ಪ್ರಮುಖ ಕಾರಣ.

ಅಡುಗೆ ಆರಂಭಿಸುವ ಮೊದಲೇ ಬೇಕಾದ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ ಮತ್ತು ಮಸಾಲೆ ಪದಾರ್ಥಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಬೇಳೆ ಬೇಯಿಸುವ ಮೊದಲು ಕನಿಷ್ಠ 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟರೆ ಅದು ಬೇಗನೆ ಬೇಯುತ್ತದೆ.

ಅಕ್ಕಿಯನ್ನು ಕೂಡ ಅಡುಗೆಗೆ 20 ನಿಮಿಷಗಳ ಮೊದಲು ನೆನೆಸಿಟ್ಟರೆ ಗ್ಯಾಸ್ ಉಳಿತಾಯವಾಗುತ್ತದೆ.

ಇದನ್ನೂ ಓದಿ : ಪ್ರತಿಷ್ಠಿತ ಕಂಪನಿಯ ಉದ್ಯೋಗಿ ಅನುಮಾನಾಸ್ಪದ ಸಾವು: ಬೆತ್ತಲೆ ಮತ್ತು ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

2. ಪ್ರೆಶರ್ ಕುಕ್ಕರ್ ಬಳಕೆ ಹೆಚ್ಚಿರಲಿ
ಸಾಮಾನ್ಯ ಪಾತ್ರೆಗಳಲ್ಲಿ ಅಡುಗೆ ಮಾಡುವುದಕ್ಕಿಂತ ಪ್ರೆಶರ್ ಕುಕ್ಕರ್ ಬಳಸುವುದು ಹೆಚ್ಚು ಲಾಭದಾಯಕ. ಕುಕ್ಕರ್‌ನಲ್ಲಿ ಹಬೆಯ ಒತ್ತಡದಿಂದ ಆಹಾರವು ಎಲ್ಲಾ ಕಡೆಯಿಂದ ಸಮನಾಗಿ ಮತ್ತು ವೇಗವಾಗಿ ಬೇಯುತ್ತದೆ. ಇದು ಅಡುಗೆಯ ಸಮಯವನ್ನು ಉಳಿಸುವುದಲ್ಲದೆ, ಗ್ಯಾಸ್ ಬಳಕೆಯನ್ನು ಗಣನೀಯವಾಗಿ ತಗ್ಗಿಸುತ್ತದೆ.

3. ಫ್ರಿಡ್ಜ್‌ನಿಂದ ತೆಗೆದ ತಕ್ಷಣ ಬಿಸಿ ಮಾಡಬೇಡಿ
ಹಾಲು ಅಥವಾ ಉಳಿದ ಅಡುಗೆಯನ್ನು ಫ್ರಿಡ್ಜ್‌ನಿಂದ ತೆಗೆದ ಕೂಡಲೇ ಸ್ಟವ್ ಮೇಲೆ ಇಡಬೇಡಿ. ತಣ್ಣಗಿರುವ ಪದಾರ್ಥಗಳನ್ನು ಬಿಸಿ ಮಾಡಲು ಹೆಚ್ಚಿನ ಗ್ಯಾಸ್ ವ್ಯಯವಾಗುತ್ತದೆ. ಫ್ರಿಡ್ಜ್‌ನಿಂದ ತೆಗೆದ ನಂತರ ಪದಾರ್ಥಗಳು ಸಾಮಾನ್ಯ ಕೋಣೆಯ ಉಷ್ಣಾಂಶಕ್ಕೆ (Room Temperature) ಬಂದ ನಂತರವೇ ಬಿಸಿ ಮಾಡುವುದು ಸೂಕ್ತ.

4. ಪಾತ್ರೆಗಳ ಆಯ್ಕೆ ಸರಿಯಾಗಿರಲಿ
ಸ್ಟವ್ ಬರ್ನರ್‌ನ ಗಾತ್ರಕ್ಕೆ ಅನುಗುಣವಾಗಿ ಪಾತ್ರೆಗಳನ್ನು ಆರಿಸಿಕೊಳ್ಳಿ. ಸಣ್ಣ ಬರ್ನರ್ ಮೇಲೆ ದೊಡ್ಡ ಪಾತ್ರೆ ಅಥವಾ ದೊಡ್ಡ ಬರ್ನರ್ ಮೇಲೆ ತೀರಾ ಸಣ್ಣ ಪಾತ್ರೆ ಇಡುವುದರಿಂದ ಶಾಖ ವ್ಯರ್ಥವಾಗುತ್ತದೆ.

ಬರ್ನರ್‌ನಿಂದ ಕೆಂಪು ಬಣ್ಣದ ಜ್ವಾಲೆ ಬರುತ್ತಿದ್ದರೆ ತಕ್ಷಣ ಟೆಕ್ನಿಷಿಯನ್ ಕರೆಸಿ ರಿಪೇರಿ ಮಾಡಿಸಿ. ಕೆಂಪು ಜ್ವಾಲೆ ಎಂದರೆ ಗ್ಯಾಸ್ ಪೋಲಾಗುತ್ತಿದೆ ಎಂದರ್ಥ. ಸರಿಯಾದ ಜ್ವಾಲೆ ಯಾವಾಗಲೂ ನೀಲಿ ಬಣ್ಣದಲ್ಲಿರಬೇಕು.

ಇದನ್ನೂ ಓದಿ : ಒಂದೇ ಸ್ಕೂಟರ್‌ನಲ್ಲಿ ಆರು ಮಕ್ಕಳ ಸವಾರಿ: ಪೋಷಕರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ

5. ಮಾಂಸಾಹಾರ ಮತ್ತು ಎಣ್ಣೆ ಪದಾರ್ಥಗಳು
ನಾನ್-ವೆಜ್ ಅಡುಗೆಗಳನ್ನು ಮಾಡುವಾಗ ಕಡ್ಡಾಯವಾಗಿ ಕುಕ್ಕರ್ ಬಳಸಿ. ಇನ್ನು ಹೆಚ್ಚು ಎಣ್ಣೆಯಲ್ಲಿ ಕರಿಯುವ ಪದಾರ್ಥಗಳನ್ನು ಕಡಿಮೆ ಮಾಡುವುದರಿಂದ ಆರೋಗ್ಯವೂ ಸುಧಾರಿಸುತ್ತದೆ ಮತ್ತು ಗ್ಯಾಸ್ ಕೂಡ ಉಳಿತಾಯವಾಗುತ್ತದೆ.

ಈ ಸರಳ ಸೂತ್ರಗಳನ್ನು ಪಾಲಿಸುವ ಮೂಲಕ ಒಂದು ಸಿಲಿಂಡರ್ ಅನ್ನು ಸುಮಾರು 3 ತಿಂಗಳವರೆಗೆ (90 ದಿನಗಳು) ಬಳಸಲು ಸಾಧ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Women take note: If you make this change in your kitchen your gas cylinder will last for 90 days!
Share. Facebook Twitter LinkedIn WhatsApp Email

Related Posts

BIG BREAKING: ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಶಾಸಕತ್ವ ರದ್ದು: ಸ್ವೀಕರ್ ಯು.ಟಿ ಖಾದರ್

29/04/2026 7:57 PM1 Min Read

BREAKING: ಬೆಂಗಳೂರಲ್ಲಿ ಆಸ್ಪತ್ರೆ ಕಾಂಪೌಂಡ್ ಕುಸಿದು ದುರಂತ: ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

29/04/2026 7:44 PM1 Min Read

ಲಿಂಗಧಾರಣೆ ಸಾಲದು, ನಿತ್ಯ ಪೂಜೆಯ ಸಂಸ್ಕಾರ ಬೇಕು: ಸೊರಬದ ಕ್ಯಾಸನೂರಿನಲ್ಲಿ ಶ್ರೀಶೈಲ ಜಗದ್ಗುರುಗಳ ಸಂದೇಶ

29/04/2026 7:37 PM2 Mins Read
Recent News

Exit Poll 2026: ದೀದಿ ಕೋಟೆಗೆ ಬಿಜೆಪಿ ಲಗ್ಗೆ, ಅಸ್ಸಾಂನಲ್ಲಿ ಕೇಸರಿ ಹ್ಯಾಟ್ರಿಕ್, ತಮಿಳುನಾಡಿನಲ್ಲಿ ಸ್ಟಾಲಿನ್ ಪಾರುಪತ್ಯ!

29/04/2026 8:14 PM

ಒಂದೇ ಹೆಲಿಕಾಪ್ಟರ್‌ನಿಂದ ಎರಡು ಕ್ಷಿಪಣಿ: ಭಾರತದ ಮೊದಲ ‘ಸಾಲ್ವೋ’ ಉಡಾವಣೆ ಸಕ್ಸಸ್

29/04/2026 8:11 PM

ಆಸ್ಟ್ರೇಲಿಯಾದಲ್ಲಿ ವಿಮಾನ ನಿಲ್ದಾಣದ ಹ್ಯಾಂಗರ್‌ಗೆ ಡಿಕ್ಕಿ ಹೊಡೆದ ವಿಮಾನ; ಇಬ್ಬರು ಸಾವು, ಹಲವರಿಗೆ ಗಂಭೀರ ಗಾಯ

29/04/2026 8:01 PM

BIG BREAKING: ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಶಾಸಕತ್ವ ರದ್ದು: ಸ್ವೀಕರ್ ಯು.ಟಿ ಖಾದರ್

29/04/2026 7:57 PM
State News
KARNATAKA

BIG BREAKING: ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಶಾಸಕತ್ವ ರದ್ದು: ಸ್ವೀಕರ್ ಯು.ಟಿ ಖಾದರ್

By kannadanewsnow0929/04/2026 7:57 PM KARNATAKA 1 Min Read

ಬೆಂಗಳೂರು: ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ…

BREAKING: ಬೆಂಗಳೂರಲ್ಲಿ ಆಸ್ಪತ್ರೆ ಕಾಂಪೌಂಡ್ ಕುಸಿದು ದುರಂತ: ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

29/04/2026 7:44 PM

ಲಿಂಗಧಾರಣೆ ಸಾಲದು, ನಿತ್ಯ ಪೂಜೆಯ ಸಂಸ್ಕಾರ ಬೇಕು: ಸೊರಬದ ಕ್ಯಾಸನೂರಿನಲ್ಲಿ ಶ್ರೀಶೈಲ ಜಗದ್ಗುರುಗಳ ಸಂದೇಶ

29/04/2026 7:37 PM

ಬೆಂಗಳೂರಲ್ಲಿ ಕಾಂಪೌಂಡ್ ಕುಸಿದು ದುರಂತ: ಘಟನಾ ಸ್ಥಳಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿ

29/04/2026 7:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.