ವಾಷಿಂಗ್ಟನ್:ಶ್ವೇತಭವನದ ಪತ್ರಕರ್ತರ ಔತಣಕೂಟದ (WHCA) ವೇಳೆ ನಡೆದ ಗುಂಡಿನ ದಾಳಿಯ ಘಟನೆಯ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದಾಳಿಕೋರನು ಕೇವಲ ಪಿಸ್ತೂಲ್ ಮಾತ್ರವಲ್ಲದೆ, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಟ್ರಂಪ್, “ಬಂಧಿತ ಶೂಟರ್ ಬಳಿ ಹಲವಾರು ಮಾರಕಾಸ್ತ್ರಗಳಿದ್ದವು. ಆತ ಭಾರಿ ಪ್ರಮಾಣದಲ್ಲಿ ಶಸ್ತ್ರಸಜ್ಜಿತನಾಗಿ (Heavily armed) ದಾಳಿಗೆ ಸಂಚು ರೂಪಿಸಿದ್ದ,” ಎಂದು ಹೇಳಿದ್ದಾರೆ. ಈ ವೇಳೆ ನಡೆದ ಸಂಘರ್ಷದಲ್ಲಿ ಒಬ್ಬ ಅಧಿಕಾರಿ ಗಾಯಗೊಂಡಿರುವುದನ್ನು ಅವರು ಖಚಿತಪಡಿಸಿದ್ದಾರೆ.
ದಾಳಿಕೋರನ ಬಳಿ ಒಂದಕ್ಕಿಂತ ಹೆಚ್ಚು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.ಸೀಕ್ರೆಟ್ ಸರ್ವಿಸ್ ಮತ್ತು ಪೊಲೀಸರು ಶೂಟರ್‌ನನ್ನು ತಡೆಯುವ ಪ್ರಯತ್ನದಲ್ಲಿದ್ದಾಗ ಒಬ್ಬ ಪೊಲೀಸ್ ಅಧಿಕಾರಿಗೆ ಗುಂಡೇಟು ತಗುಲಿದೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
“ನಮ್ಮ ಭದ್ರತಾ ಪಡೆಗಳ ಚಾಕಚಕ್ಯತೆಯಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಅಧಿಕಾರಿಯ ಶೌರ್ಯಕ್ಕೆ ನನ್ನ ಸಲಾಂ,” ಎಂದು ಟ್ರಂಪ್ ಬರೆದುಕೊಂಡಿದ್ದಾರೆ.








