Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಪಲ್ ಸಂಸ್ಥೆಗೆ ಹೊಸ ಸಾರಥಿ: ಜಾನ್ ಟೆರ್ನಸ್ ಮುಂದಿನ ಸಿಇಒ; ಟಿಮ್ ಕುಕ್ ಇನ್ನು ಕಾರ್ಯಕಾರಿ ಅಧ್ಯಕ್ಷ

21/04/2026 6:51 AM

ಜನಸಾಮಾನ್ಯರಿಗೆ ಬಿಗ್ ಶಾಕ್ : ಕ್ಯಾನ್ಸರ್ ಸೇರಿದಂತೆ ಅಗತ್ಯ ಔಷಧಗಳ ದರ ಶೇ. 20ರಷ್ಟು ಏರಿಕೆ | Medicine Price Hike

21/04/2026 6:50 AM

BREAKING: ಮಣಿಪುರದಲ್ಲಿ ನಡುಗಿದ ಭೂಮಿ: ಕಮ್‌ಜಾಂಗ್‌ನಲ್ಲಿ 5.2 ತೀವ್ರತೆಯ ಭೂಕಂಪ, ಜನರಲ್ಲಿ ಆತಂಕ | Earthquake

21/04/2026 6:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜನಸಾಮಾನ್ಯರಿಗೆ ಬಿಗ್ ಶಾಕ್ : ಕ್ಯಾನ್ಸರ್ ಸೇರಿದಂತೆ ಅಗತ್ಯ ಔಷಧಗಳ ದರ ಶೇ. 20ರಷ್ಟು ಏರಿಕೆ | Medicine Price Hike
INDIA

ಜನಸಾಮಾನ್ಯರಿಗೆ ಬಿಗ್ ಶಾಕ್ : ಕ್ಯಾನ್ಸರ್ ಸೇರಿದಂತೆ ಅಗತ್ಯ ಔಷಧಗಳ ದರ ಶೇ. 20ರಷ್ಟು ಏರಿಕೆ | Medicine Price Hike

By kannadanewsnow5721/04/2026 6:50 AM

ನವದೆಹಲಿ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಹಾಗೂ ಇರಾನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಔಷಧಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಅಗತ್ಯ ಔಷಧಗಳ ಬೆಲೆಯನ್ನು ಶೇ. 10 ರಿಂದ 20 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಸರ್ಕಾರದ ಬೆಲೆ ನಿಯಂತ್ರಣ (Price Control) ವ್ಯಾಪ್ತಿಗೆ ಬರುವ ಅತ್ಯಗತ್ಯ ಔಷಧಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯವಾಗಿ ಕ್ಯಾನ್ಸರ್ ಚಿಕಿತ್ಸೆಯ ಔಷಧಗಳು, ವಿವಿಧ ರೋಗಗಳಿಗೆ ಬಳಸುವ ಆಂಟಿಬಯೋಟಿಕ್ಸ್, ಜೀವ ರಕ್ಷಕ ಇಂಜೆಕ್ಷನ್ಗಳು, ಈ ಬೆಲೆ ಏರಿಕೆಯು ಕೇವಲ ತಾತ್ಕಾಲಿಕವಾಗಿದ್ದು, ಪ್ರಾಥಮಿಕವಾಗಿ 3 ತಿಂಗಳ ಅವಧಿಗೆ ಮಾತ್ರ ಅನ್ವಯವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬೆಲೆ ಏರಿಕೆಗೆ ಕಾರಣವೇನು?

ಔಷಧಗಳ ತಯಾರಿಕೆಯಲ್ಲಿ ಬಳಸುವ ‘ಸಾಲ್ವೆಂಟ್ಸ್’ (Solvents) ಎಂಬ ರಾಸಾಯನಿಕಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ. ಗಲ್ಫ್ ರಾಷ್ಟ್ರಗಳಿಂದ ಆಮದಾಗುವ ಕಚ್ಚಾ ತೈಲ ಮತ್ತು ಅನಿಲ ಆಧಾರಿತ ರಾಸಾಯನಿಕಗಳ ಸರಬರಾಜು ಕುಂಠಿತಗೊಂಡಿದೆ.

ಸಾಲ್ವೆಂಟ್ಗಳ ಕೊರತೆಯಿಂದಾಗಿ ಅವುಗಳ ಬೆಲೆ ಏರಿದ್ದು, ಔಷಧ ಕಂಪನಿಗಳಿಗೆ ಉತ್ಪಾದನಾ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬೆಲೆ ಹೆಚ್ಚಳ ಮಾಡದಿದ್ದರೆ, ಔಷಧಗಳ ಉತ್ಪಾದನೆಯು ಆರ್ಥಿಕವಾಗಿ ನಷ್ಟದ ಹಾದಿ ಹಿಡಿಯಲಿದ್ದು, ಮಾರುಕಟ್ಟೆಯಲ್ಲಿ ಔಷಧಗಳ ಕೊರತೆ ಉಂಟಾಗಬಹುದು ಎಂದು ತಯಾರಕರು ಎಚ್ಚರಿಸಿದ್ದಾರೆ.

ಉದ್ಯಮದ ಬೇಡಿಕೆ ಮತ್ತು ಸರ್ಕಾರದ ನಿಲುವು

ಔಷಧ ಉದ್ಯಮದ ಸಂಘಟನೆಗಳು (OPPI ಮತ್ತು IPA) ವೆಚ್ಚದ ಆಧಾರದ ಮೇಲೆ ಶೇ. 50 ರಷ್ಟು ಬೆಲೆ ಏರಿಕೆಗೆ ಬೇಡಿಕೆ ಇಟ್ಟಿದ್ದವು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ಕೇವಲ ಶೇ. 10-20 ರಷ್ಟು ಮಾತ್ರ ಹೆಚ್ಚಳ ಮಾಡಲು ಒಲವು ತೋರಿದೆ. ಜಾಗತಿಕ ಪೂರೈಕೆ ವ್ಯವಸ್ಥೆ ಸುಧಾರಿಸಿದ ತಕ್ಷಣ, ಬೆಲೆಗಳನ್ನು ಹಳೆಯ ದರಕ್ಕೆ ಇಳಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ಹೊಸ ದರ ಯಾವಾಗ ಜಾರಿ?

ಸರ್ಕಾರವು ಸದ್ಯ ಆಂತರಿಕ ಸಮಾಲೋಚನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಿದೆ. ಈ ಅಧಿಸೂಚನೆ ಪ್ರಕಟವಾದ ತಕ್ಷಣ ಮೆಡಿಕಲ್ ಸ್ಟೋರ್ಗಳಲ್ಲಿ ಔಷಧಗಳ ಹೊಸ ದರ ಜಾರಿಗೆ ಬರಲಿದೆ.

Big shock for the common man: Prices of essential medicines including cancer. 20% increase
Share. Facebook Twitter LinkedIn WhatsApp Email

Related Posts

ಆಪಲ್ ಸಂಸ್ಥೆಗೆ ಹೊಸ ಸಾರಥಿ: ಜಾನ್ ಟೆರ್ನಸ್ ಮುಂದಿನ ಸಿಇಒ; ಟಿಮ್ ಕುಕ್ ಇನ್ನು ಕಾರ್ಯಕಾರಿ ಅಧ್ಯಕ್ಷ

21/04/2026 6:51 AM1 Min Read

BREAKING: ಮಣಿಪುರದಲ್ಲಿ ನಡುಗಿದ ಭೂಮಿ: ಕಮ್‌ಜಾಂಗ್‌ನಲ್ಲಿ 5.2 ತೀವ್ರತೆಯ ಭೂಕಂಪ, ಜನರಲ್ಲಿ ಆತಂಕ | Earthquake

21/04/2026 6:45 AM1 Min Read

ಯಾರು ಈ ಜಸ್ಟಿಸ್ ಸ್ವರ್ಣ ಕಾಂತ ಶರ್ಮಾ? ಕೇಜ್ರಿವಾಲ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ನಿರಾಕರಿಸಿದ ನ್ಯಾಯಾಧೀಶರ ಹಿನ್ನೆಲೆ ಇಲ್ಲಿದೆ

21/04/2026 6:39 AM2 Mins Read
Recent News

ಆಪಲ್ ಸಂಸ್ಥೆಗೆ ಹೊಸ ಸಾರಥಿ: ಜಾನ್ ಟೆರ್ನಸ್ ಮುಂದಿನ ಸಿಇಒ; ಟಿಮ್ ಕುಕ್ ಇನ್ನು ಕಾರ್ಯಕಾರಿ ಅಧ್ಯಕ್ಷ

21/04/2026 6:51 AM

ಜನಸಾಮಾನ್ಯರಿಗೆ ಬಿಗ್ ಶಾಕ್ : ಕ್ಯಾನ್ಸರ್ ಸೇರಿದಂತೆ ಅಗತ್ಯ ಔಷಧಗಳ ದರ ಶೇ. 20ರಷ್ಟು ಏರಿಕೆ | Medicine Price Hike

21/04/2026 6:50 AM

BREAKING: ಮಣಿಪುರದಲ್ಲಿ ನಡುಗಿದ ಭೂಮಿ: ಕಮ್‌ಜಾಂಗ್‌ನಲ್ಲಿ 5.2 ತೀವ್ರತೆಯ ಭೂಕಂಪ, ಜನರಲ್ಲಿ ಆತಂಕ | Earthquake

21/04/2026 6:45 AM

ರೋಲ್ಡ್ ಗೋಲ್ಡ್ ಒಡವೆಗಳು ಕಪ್ಪಾಗಿವೆಯೇ? 1 ರೂಪಾಯಿ ಖರ್ಚಿಲ್ಲದೆ ಮನೆಯಲ್ಲೇ ಹೊಸದರಂತೆ ಹೊಳೆಯುವಂತೆ ಮಾಡಿ!

21/04/2026 6:42 AM
State News
KARNATAKA

ರೋಲ್ಡ್ ಗೋಲ್ಡ್ ಒಡವೆಗಳು ಕಪ್ಪಾಗಿವೆಯೇ? 1 ರೂಪಾಯಿ ಖರ್ಚಿಲ್ಲದೆ ಮನೆಯಲ್ಲೇ ಹೊಸದರಂತೆ ಹೊಳೆಯುವಂತೆ ಮಾಡಿ!

By kannadanewsnow5721/04/2026 6:42 AM KARNATAKA 2 Mins Read

ಬಿಸಿಲ ಬೇಗೆಯಷ್ಟೇ ಅಲ್ಲದೆ, ಚಿನ್ನದ ಬೆಲೆಯೂ ಕೂಡ ಈಗ ಗಗನಕ್ಕೇರುತ್ತಿದೆ. ಸಾಮಾನ್ಯ ಜನರಿಗೆ ಬಂಗಾರವನ್ನು ಖರೀದಿಸುವುದು ಕನಸಿನ ಮಾತಾಗುತ್ತಿದೆ. ಈ…

ಹಳದಿ ಹಲ್ಲುಗಳ ಮುಜುಗರಕ್ಕೆ ಗುಡ್‌ಬೈ ಹೇಳಿ: ನೈಸರ್ಗಿಕವಾಗಿ ಹಲ್ಲು ಬೆಳ್ಳಗಾಗಲು ಈ ಟಿಪ್ಸ್ ಫಾಲೋ ಮಾಡಿ

21/04/2026 6:41 AM

BIG NEWS : ವೇತನ ಪರಿಷ್ಕರಣೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರ ಮುಷ್ಕರ : ಬಸ್‌ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.!

21/04/2026 6:09 AM

ಸಾರ್ವಜನಿಕರೇ ಗಮನಿಸಿ : ಬೇಸಿಗೆ ಬಿಸಿಲಿನಿಂದ ಪಾರಾಗಲು ಇಲ್ಲಿದೆ ಸೂಪರ್ ಟಿಪ್ಸ್.!

21/04/2026 6:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.